ಐಪಿಎಲ್ 2023 | ಪ್ಲೇಆಫ್ ತಲುಪಿದ ಲಖನೌ; ರಿಂಕು ಸಿಂಗ್ ರೋಚಕ ಆಟದಲ್ಲಿ 1 ರನ್‌ನಿಂದ ಕೆಕೆಆರ್‌ಗೆ ಸೋಲು

Date:

ಕೊನೆಯ ಎಸೆತದವರೆಗೂ ಕೆಕೆಆರ್ ಗೆಲುವಿಗಾಗಿ ಹೋರಾಟ ನಡೆಸಿದ ರಿಂಕು ಸಿಂಗ್‌ ತಂಡವನ್ನು ಪ್ಲೇಆಫ್ ಹಂತಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಆದರೆ ಪ್ರೇಕ್ಷಕರ ಹೃದಯವನ್ನು ಗೆಲ್ಲದೆ ಬಿಡಲಿಲ್ಲ. ಈ ಮೊದಲು ಒಂದೇ ಓವರ್‌ನಲ್ಲಿ ಐದು ಸಿಕ್ಸ್ ಪೇರಿಸಿ ತಂಡವನ್ನು ಗೆಲ್ಲಿಸಿದ್ದ ರಿಂಕು, ಇಂದು ಕೂಡ ಅಮೋಘ ಆಟವಾಡಿ ಸೋಲಿನಲ್ಲೂ ಎದುರಾಳಿ ತಂಡದ ಆಟಗಾರರ ಮನವನ್ನು ಗೆದ್ದರು.

ಲಖನೌ ಸೂಪರ್‌ ಜೈಂಟ್ಸ್‌ ನೀಡಿದ 176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್‌ ರೈಡರ್ಸ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್‌ ಗಳಿಸಿ ಕೇವಲ ಒಂದು ರನ್‌ಗಳಿಂದ ಸೋಲನ್ನೊಪ್ಪಿಕೊಂಡಿತು.

ಕೋಲ್ಕತ್ತಾದ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 16ನೇ ಆವೃತ್ತಿಯ 68ನೇ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಯಗಳಿಸಿ ಪ್ಲೇಆಫ್ ಹಂತ ಪ್ರವೇಶಿಸಿತು. ತಂಡ ಸೋತರು ಸ್ಫೋಟಕ ಆಟವಾಡಿದ ಉದಯೋನ್ಮುಕ ಆಟಗಾರ ರಿಂಕು ಸಿಂಗ್ 33 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 6 ಆಕರ್ಷಕ ಬೌಂಡರಿಯೊಂದಿಗೆ ಅಜೇಯ 67 ರನ್‌ ಬಾರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಿಂಕು ಬಿಟ್ಟರೆ ಉತ್ತಮವಾಗಿ ಆಟವಾಡಿದ್ದು ಜೇಸನ್‌ ರಾಯ್ (45) ಹಾಗೂ ವೆಂಕಟೇಶ್ ಅಯ್ಯರ್(24). ಲಖನೌ ಪರ ರವಿ ಬಿಷ್ಣೋಯ್ 23/2 ಹಾಗೂ ಯಶ್‌ ಠಾಕೂರ್ 31/2 ವಿಕೆಟ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಲಖನೌ ಸೂಪರ್ ಜೈಂಟ್ಸ್ ಮಧ್ಯಮ ಕ್ರಮಾಂಕದ ನಿಕೋಲಸ್ ಪೂರನ್ ಅವರ ಭರ್ಜರಿ ಅರ್ಧಶತಕದ ಆಟದ ನೆರವಿನಿಂದ ನಿಗದಿತ ಓವರ್ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

ದೀಪಕ್ ಹೂಡಾ ಬದಲಾಗಿ ಕರಣ್ ಶರ್ಮಾ ಇಂದು ತಂಡದಲ್ಲಿ ಆರಂಭಿಕರಾಗಿ ಡಿ ಕಾಕ್ ಜೊತೆಗೆ ಕಣಕ್ಕಿಳಿದರು. ಆದರೆ 3 ರನ್‌ಗೆ ಹರ್ಷಿತ್ ರಾಣಾಗೆ ವಿಕೆಟ್ ನೀಡಿದರು. ಇವರ ನಂತರ ಕ್ರೀಸ್‌ಗೆ ಬಂದ ಪ್ರೇರಕ್ ಮಂಕಡ್ ಮತ್ತೊಬ್ಬ ಆರಂಭಿಕ ಡಿ ಕಾಕ್‌ಗೆ  ಜೊತೆಯಾದರು. ಈ ಜೋಡಿ 3ನೇ ವಿಕೆಟ್‌ಗೆ 41 ರನ್ ಜೊತೆಯಾಟ ನೀಡಿತು. 26 ರನ್‌ಗಳಿಸಿ  ಪ್ರೇಕ್ ಮಂಕಡ್ ಔಟ್ ಆದರೆ ಅವರ ಬೆನ್ನಲ್ಲೇ  28 ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಕೂಡಾ ವಿಕೆಟ್ ಒಪ್ಪಿಸಿದರು.

ನಂತರ ಬಂದ ಮಾರ್ಕಸ್ ಸ್ಟೋಯ್ನಿಸ್ ಸೊನ್ನೆಗೆ ವಿಕೆಟ್ ಕಳೆದುಕೊಂಡರೆ , ನಾಯಕ ಕೃನಾಲ್ ಪಾಂಡ್ಯ 9 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ಈ ಐದು ವಿಕೆಟ್ ಪತನದ ನಂತರ 6ನೇ ವಿಕೆಟ್‌ಗೆ ಒಂದಾದ ಆಯುಷ್ ಬದೋನಿ ಮತ್ತು ಪೂರನ್ 74 ರನ್‌ ಜೊತೆಯಾಟವಾಡಿದರು. ವಿಕೆಟ್ ಬೀಳುತ್ತಿದ್ದ ಪಿಚ್‌ನಲ್ಲಿ ಪೂರನ್ ಸ್ಫೋಟಕ ಆಟವನ್ನೇ ಆಡಿದರು.

21 ಚೆಂಡುಗಳಲ್ಲಿ 25 ರನ್ ಗಳಿಸಿದ್ದ ಬದೋನಿ ನರೈನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ನಿಕೋಲಸ್ ಪೂರನ್ ಅವರು 30 ಎಸೆತಗಳಲ್ಲಿ 5 ಸಿಕ್ಸ್ ಮತ್ತು 4 ಬೌಂಡರಿಯಿಂದ 58 ರನ್‌ಗಳ ಸ್ಫೋಟಕ ಆಟವಾಡಿ ಶಾರ್ದೂಲ್ ಠಾಕೂರ್‌ಗೆ ಬೌಲಿಂಗ್‌ನಲ್ಲಿ ಔಟಾದರು. ಪೂರನ್ ಅಬ್ಬರದ ಆಟದ ನೆರವಿನಿಂದ ಲಖನೌ 8 ವಿಕೆಟ್ ನಷ್ಟಕ್ಕೆ  176 ರನ್‌ ಕಲೆ ಹಾಕಿತು.

ಇನ್ನು ಈ ಗುರಿಯನ್ನು ಕೇವಲ 8.5 ಓವರ್ ಒಳಗೆ ಕೊಲ್ಕತ್ತಾ ನೈಟ್ ರೈಡರ್ಸ್ ಚೇಸ್ ಮಾಡಿದರೆ ಅಂಕಪಟ್ಟಿಯಲ್ಲಿ 14 ಅಂಕಗಳನ್ನು ಪಡೆದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆಯುತ್ತಿತ್ತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...

ಐಪಿಎಲ್ | ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಮುಟ್ಟಲು ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌: 67 ರನ್‌ಗಳ ಸೋಲು

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ...