ಟಿ20 | ಅತಿ‌ಹೆಚ್ಚು ರನ್ ಚೇಸಿಂಗ್‌‌, ದಾಖಲೆ ಬರೆದ ದಕ್ಷಿಣ ಆಫ್ರಿಕಾ

Date:

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಚರಿತ್ರೆಯಲ್ಲೇ ಅತಿಹೆಚ್ಚು ರನ್‌ ಬೆನ್ನಟ್ಟುವ ಮೂಲಕ ದಕ್ಷಿಣ ಆಫ್ರಿಕಾ ಹೊಸ ದಾಖಲೆ ಬರೆದಿದೆ.

ಸೆಂಚುರಿಯನ್‌ ಮೈದಾನದಲ್ಲಿ ವೆಸ್ಟ್‌ ಇಂಡೀಸ್‌ ಮುಂದಿಟ್ಟಿದ್ದ 259 ರನ್‌ಗಳ ಗುರಿಯನ್ನು ಆತಿಥೇಯ ಆಫ್ರಿಕಾ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಬೆನ್ನಟ್ಟಿತು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಮೊತ್ತವನ್ನು ಚೇಸ್‌ ಮಾಡಿದ ತಂಡ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ವಿಶೇಷವೆಂದರೆ ಏಕದಿನ ಕ್ರಿಕೆಟ್‌ನಲ್ಲೂ ಅತಿಹೆಚ್ಚು ಮೊತ್ತವನ್ನು ಬೆನ್ನಟ್ಟಿದ ಗೆಲುವಿನ ದಾಖಲೆ ಹರಿಣಗಳ ಹೆಸರಿನಲ್ಲೇ ಇದೆ. (438/9 ಆಸ್ಟ್ರೇಲಿಯ ವಿರುದ್ಧ)

2022ರಲ್ಲಿ ಸೆರ್ಬಿಯಾ ವಿರುದ್ಧ ಬಲ್ಗೇರಿಯಾ 243 ರನ್‌ಗಳನ್ನು (19.4 ಓವರ್‌) ಚೇಸ್‌ ಮಾಡಿದ್ದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇದುವರೆಗಿನ ದಾಖಲೆಯಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕೆರಿಬಿಯನ್ನರು, ಜಾನ್ಸನ್ ಚಾರ್ಲ್ಸ್ ಗಳಿಸಿದ ಚೊಚ್ಚಲ ಟಿ20 ಶತಕ (118 ರನ್‌, 46 ಎಸೆತ, 4X10, 6X11) ಮತ್ತು ಕೈಲ್ ಮೇಯರ್ಸ್ ಅರ್ಧಶತಕಗಳ (51 ರನ್‌, 27 ಎ., 4X5, 6X4) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 258 ರನ್‌ಗಳಿಸಿತ್ತು.

ಚೇಸಿಂಗ್‌ ವೇಳೆ ಮೊದಲನೇ ವಿಕೆಟ್‌ಗೆ ಕ್ವಿಂಟನ್‌ ಡಿಕಾಕ್‌ ಮತ್ತು ರೀಝಾ ಹೆಂಡ್ರಿಕ್ಸ್‌ ಮೊದಲ 10 ಓವರ್‌ಗಳಲ್ಲೇ 149 ರನ್‌ ದಾಖಲಿಸುವ ಮೂಲಕ ಅಬ್ಬರದ ಆರಂಭ ಒದಗಿಸಿದ್ದರು. ವೃತ್ತಿ ಜೀವನದ 79ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾ ಮೊದಲ ಶತಕ ಡಿ‌ ಕಾಕ್ ಮೊದಲ ಶತಕದ ಸಂಭ್ರವನ್ನಾರಿಸಿದರು.( 100 ರನ್‌, 44 ಎಸೆತ, 4×9 6×8) ರೀಝಾ ಹೆಂಡ್ರಿಕ್ಸ್‌ 68 ರನ್‌ಗಳಿಸಿದರು (28 ಎಸೆತ, 4×11 6×2).

ಶನಿವಾರ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 3 ವಿಕೆಟ್‌ಗಳ ಜಯ ಸಾಧಿಸಿತ್ತು. ಸರಣಿ ನಿರ್ಧಾರಕ ಮೂರನೇ ಪಂದ್ಯ ಮಂಗಳವಾರ ಜೊಹಾನೆಸ್‌ಬರ್ಗ್‌ನಲ್ಲಿ ನಡೆಯಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...

ಐಪಿಎಲ್ | ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಮುಟ್ಟಲು ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌: 67 ರನ್‌ಗಳ ಸೋಲು

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ...

ಮಹಿಳೆಯರ ಕುಸ್ತಿ | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರೀತಿಕಾ ಹೂಡಾ, ಅಂಶು ಮಲಿಕ್

ಕಝಕಿಸ್ತಾನದ ಬಿಸ್ಕೆಕ್‌ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ಸ್‌ನ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ...