0, 0, 0, ಶೂನ್ಯದಲ್ಲೂ ದಾಖಲೆ ಸೃಷ್ಟಿಸಿದ ಸೂರ್ಯಕುಮಾರ್‌ ಯಾದವ್!‌

Date:

  • 2-1 ಅಂತರದಲ್ಲಿ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯ
  • 49.1 ಓವರ್‌ಗಳಲ್ಲಿ 248 ರನ್‌ಗಳಿಗೆ ಭಾರತ ಆಲೌಟ್‌

ಭಾರತದ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಪ್ರವಾಸಿ ಆಸ್ಟ್ರೇಲಿಯ 2-1 ಅಂತರದಲ್ಲಿ ಗೆದ್ದು ಬೀಗಿದೆ. ಬುಧವಾರ ಚೆನ್ನೈನಲ್ಲಿ ನಡೆದ ಸರಣಿಯ ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ರೋಹಿತ್‌ ಪಡೆಯನ್ನು ಆಸೀಸ್ 21 ರನ್‌ಗಳ ಅಂತರದಲ್ಲಿ ಮಣಿಸಿತ್ತು.‌

ಮಹತ್ವದ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ ಸಹ ಆಸೀಸ್‌ ಮುಂದಿಟ್ಟಿದ್ದ 270 ರನ್‌ಗಳ ಸಾಮಾನ್ಯ ಸವಾಲನ್ನು ಬೆನ್ನಟ್ಟುವಲ್ಲಿ ಭಾರತ ವಿಫಲವಾಗಿದೆ. 49.1 ಓವರ್‌ಗಳಲ್ಲಿ 248 ರನ್‌ಗಳಿಗೆ ಟೀಮ್‌ ಇಂಡಿಯಾ ಆಲೌಟ್‌ ಆಗಿತ್ತು.

ಈ ಪಂದ್ಯದಲ್ಲಿ ವಿಶ್ವ ನಂಬರ್ 1 ಟಿ20 ಬ್ಯಾಟರ್‌ ಭಾರತದ ಸೂರ್ಯಕುಮಾರ್‌ ಯಾದವ್‌ ಅನಗತ್ಯ ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಒಪ್ಪಿಸಿದ್ದ ಸೂರ್ಯ, ಚೆನ್ನೈನಲ್ಲೂ ಶೂನ್ಯಕ್ಕೆ ನಿರ್ಗಮಿಸಿದ್ದರು. ಆ ಮೂಲಕ ಏಕದಿನ ಸರಣಿಯೊಂದರಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿದ (ಗೋಲ್ಡನ್‌ ಡಕ್‌) ಮೊದಲ ಭಾರತೀಯ ಬ್ಯಾಟರ್‌ ಎನಿಸಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಮಿಷೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಎಡವಿದ್ದ ಯಾದವ್‌, ಚೆನ್ನೈನಲ್ಲಿ ಸ್ಪಿನ್ನರ್‌ ಆಸ್ಟನ್‌ ಅಗರ್‌ ಅವರ ಮಿಂಚಿನ ಎಸೆತ ಅಂದಾಜಿಸಲಾಗದೆ ಕ್ಲೀನ್‌ ಬೌಲ್ಡ್‌ ಆಗಿದ್ದರು.

ಒಟ್ಟಾರೆಯಾಗಿ ಏಕದಿನ ಕ್ರಿಕೆಟ್‌ನಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್‌ ಅವರಿಗೆ 6ನೇ ಸ್ಥಾನ. ಇದಕ್ಕೂ ಮೊದಲಿನವರ ಪಟ್ಟಿಯನ್ನು ನೋಡುವುದಾರೆ

  • ಸಚಿನ್ ತೆಂಡೂಲ್ಕರ್, 1994
  • ಅನಿಲ್ ಕುಂಬ್ಳೆ, 1996
  • ಜಹೀರ್ ಖಾನ್, 2003-04
  • ಇಶಾಂತ್ ಶರ್ಮಾ, 2010-11
  • ಜಸ್ಪ್ರೀತ್ ಬುಮ್ರಾ, 2017-19
  • ಸೂರ್ಯಕುಮಾರ್ ಯಾದವ್, 2023

ಸೂರ್ಯಕುಮಾರ್‌ ಯಾದವ್‌ ಕಳಪೆ ಫಾರ್ಮ್‌ ಮುಂದುವರಿದ ಹಿನ್ನಲೆಯಲ್ಲಿ ಮುಂದಿನ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗುವುದು ಬಹುತೇಕ ಅನುಮಾನ. ಮತ್ತೊಂದೆಡೆ ಶ್ರೇಯಸ್‌ ಅಯ್ಯರ್ ಐದು ತಿಂಗಳು ಮತ್ತು ರಿಷಭ್ ಪಂತ್ ಒಂಬತ್ತು ತಿಂಗಳು ತಂಡದಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಟೀಮ್‌ ಇಂಡಿಯಾಗೆ ಮರಳುವ ಸಾಧ್ಯತೆಯಿದೆ.

ಪಂದ್ಯದ ದಿಕ್ಕು ಬದಲಾಯಿಸಿದ ಆಸ್ಟನ್‌ ಅಗರ್‌

ಚೆನ್ನೈನಲ್ಲಿ 270 ರನ್‌ ಗುರಿ ಬೆನ್ನಟ್ಟುವ ವೇಳೆ ಒಂದು ಹಂತದಲ್ಲಿ ಭಾರತ, 35 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 185 ರನ್‌ ಗಳಿಸುವ ಮೂಲಕ ಗೆಲುವಿನತ್ತ ಮುನ್ನಡೆದಿತ್ತು. ಆದರೆ 36ನೇ ಓವರ್‌ನ ಮೊದಲ ಎರಡು ಎಸೆತದಲ್ಲಿ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ವಿಕೆಟ್‌ ಪಡೆಯುವ ಮೂಲಕ ಸ್ಪಿನ್ನರ್‌ ಆಸ್ಟನ್‌ ಅಗರ್‌ ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. 72 ಎಸೆತಗಳಲ್ಲಿ ಕೊಹ್ಲಿ 54 ರನ್‌ಗಳಿಸಿದರೆ, ಸೂರ್ಯಕುಮಾರ್‌ ಸತತ ಮೂರನೇ ಪಂದ್ಯದಲ್ಲೂ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಒಪ್ಪಿಸಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ತವ್ಯಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನೆ ಮುಂದುವರಿಯಲಿದೆ ಎಂದ ಸಾಕ್ಷಿ, ಪುನಿಯಾ

ಭಾರತೀಯ ಕುಸ್ತಿ ಒಕ್ಕೂಟದ ​​ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್...

ಒಡಿಶಾ ರೈಲು ದುರಂತ | ಪೋಷಕರ ಕಳೆದುಕೊಂಡ ಮಕ್ಕಳಿಗೆ ಸೆಹ್ವಾಗ್, ಗೌತಮ್‌ ಅದಾನಿ ಸಹಾಯಹಸ್ತ; ಉಚಿತ ಶಿಕ್ಷಣ 

ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ  ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 275 ಮಂದಿ...

ಕೋಝಿಕ್ಕೋಡ್ | ಫುಟ್‌ಬಾಲ್ ಆಡುತ್ತಿದ್ದ ಇಬ್ಬರು ಬಾಲಕರು ಸಮುದ್ರಪಾಲು

ಸಮುದ್ರ ತೀರದಲ್ಲಿ ಫುಟ್‌ಬಾಲ್‌ ಆಟವಾಡುತ್ತಿದ್ದ ವೇಳೆ ಇಬ್ಬರು ಯುವಕರು ನೀರುಪಾಲಾದ ಘಟನೆ...

ಟೆಸ್ಟ್‌ ಕ್ರಿಕೆಟ್‌ | ನಿವೃತ್ತಿ ದಿನಾಂಕ ಘೋಷಿಸಿದ ಡೇವಿಡ್‌ ವಾರ್ನರ್‌

ಆಸ್ಟ್ರೇಲಿಯಾ ತಂಡದ ದಿಗ್ಗಜ ಆಟಗಾರ, ಎಡಗೈ ಬ್ಯಾಟರ್‌ ಡೇವಿಡ್‌ ವಾರ್ನರ್‌ ಟೆಸ್ಟ್‌...