ಮಹಿಳಾ ಪ್ರೀಮಿಯರ್‌ಲೀಗ್ | ಚೊಚ್ಚಲ ಚಾಂಪಿಯನ್‌ ಪಟ್ಟವನ್ನೇರಿದ ಮುಂಬೈ

Date:

ನ್ಯಾಟ್‌ ಸ್ಕೀವರ್‌ ಗಳಿಸಿದ ಭರ್ಜರಿ ಅರ್ಧಶತಕದ ಬಲದಲ್ಲಿ ಮಿಂಚಿದ  ಮುಂಬೈ ಇಂಡಿಯನ್ಸ್‌ ತಂಡ, ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಚಾಂಪಿಯನ್  ಆಗಿ ಹೊರಹೊಮ್ಮಿದೆ.

ಭಾನುವಾರ ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ನಡೆದ ಫೈನಲ್ ಫೈಟ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ, ಸವಾಲಿನ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಇಸಾವೆಲ್ಲಾ ವೋಂಗ್‌ ಮತ್ತು ಹೀಲಿ ಮ್ಯಾಥ್ಯೂ ದಾಳಿಗೆ ಕುಸಿದ ಮೆಗ್‌ ಲ್ಯಾನಿಂಗ್‌ ಪಡೆ ನಿಗದಿತ 20 ಓವರ್‌ಗಳಲ್ಲಿ 131 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.‌ ಸಾಮಾನ್ಯ ಗುರಿಯನ್ನು ಬೆನ್ನಟ್ಟುವ ವೇಳೆ ಮುಂಬೈ ಆರಂಭಿಕರಾದ ಯಾಸ್ತಿಕಾ ಭಾಟಿಯಾ (4)  ಹೀಲಿ ಮ್ಯಾಥ್ಯೂಸ್‌  (13) ಬೇಗನೆ ನಿರ್ಗಮಿಸಿದ್ದರು. ಆದರೆ ಮೂರನೇ ವಿಕೆಟ್‌ಗೆ ಜೊತೆಯಾದ ನಾಯಕಿ ಕೌರ್‌ (37) ಮತ್ತು ಸ್ಕೀವರ್‌ ಬ್ರಂಟ್‌ ಅಜೇಯ 60 ರನ್‌ಗಳಿಸುವ ಮೂಲಕ ತಮ್ಮ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದರು.‌

ಟೂರ್ನಿಯಲ್ಲಿ ಮೂರನೇ  ಅರ್ಧಶತಕ ಗಳಿಸಿದ ನ್ಯಾಟ್‌ ಸ್ಕೀವರ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮುಂಬೈ ಗೆಲುವಿಗೆ ಅಂತಿಮ 2 ಓವರ್‌ಗಳಲ್ಲಿ 21 ರನ್‌ಗಳ ಅಗತ್ಯವಿತ್ತು. ಆದರೆ 19ನೇ ಓವರ್‌‌ ಎಸೆದ ಜೆಸ್‌ ಜೊನಾಸೆನ್‌ 16 ರನ್‌ ಬಿಟ್ಟುಕೊಡುವ ಮೂಲಕ ನಿರ್ಣಾಯಕ ಘಟ್ಟದಲ್ಲಿ ದುಬಾರಿಯಾದರು. ಸಾಮಾನ್ಯ ಸವಾಲನ್ನು ಬೆನ್ನಟ್ಟಲು ಅಂತಿಮ ಓವರ್‌ವರೆಗೂ ಹೋರಾಟ ನಡಸಿದ ಮುಂಬೈ ಇನ್ನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್‌ ಸಹ ದಾಖಲಾಗಲಿಲ್ಲ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಸ್ತಿಪಟುಗಳ ಮೇಲಿನ ಹಲ್ಲೆಗೆ ಕುಂಬ್ಳೆ ಬೇಸರ; ಆದಷ್ಟು ಬೇಗ ಸಮಸ್ಯೆ ಪರಿಹರಿಸಿ ಎಂದ ಕ್ರಿಕೆಟಿಗ

ನವದೆಹಲಿಯಲ್ಲಿ ಧರಣಿನಿರತ ಕುಸ್ತಿಪಟುಗಳ ಮೇಲಿನ ಹಲ್ಲೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ...

ಹರಿದ್ವಾರದಲ್ಲಿ ಚಾರಿತ್ರಿಕ ಪ್ರತಿಭಟನೆ; ಕುಸ್ತಿಪಟುಗಳು ಪದಕ ನದಿಗೆಸೆಯುವುದ ತಡೆದ ರೈತ ನಾಯಕ

ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ...

ಒಂದು ಬಾರಿ ಪ್ರಶಸ್ತಿ ಗೆಲ್ಲುವುದೇ ಕಷ್ಟ; ಕೊಹ್ಲಿ ಕಾಲೆಳೆದ ಗೌತಮ್‌ ಗಂಭೀರ್

ಐಪಿಎಲ್‌ 16ನೇ ಆವೃತ್ತಿಗೆ ತೆರೆ ಬಿದ್ದರೂ ಸಹ ಲಖನೌ ತಂಡದ ಮಾರ್ಗದರ್ಶಕ...

ತಂಬಾಕು ಜಾಹೀರಾತುಗಳಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ; ಸತ್ಯ ಬಿಚ್ಚಿಟ್ಟ ಸಚಿನ್!

ಹಲವು ಆಟಗಳನ್ನು ಆಡುತ್ತಿದ್ದರೂ ಕ್ರಿಕೆಟ್‌ ಕಡೆಗೆ ಆಕರ್ಷಣೆ ಎಂದ ಸಚಿನ್ ತೆಂಡೂಲ್ಕರ್ ಬಾಯಿಯ...