ಜೂನ್‌ 15ರವರೆಗೆ ಪ್ರತಿಭಟನೆ ನಿಲ್ಲಿಸಲು ಕುಸ್ತಿಪಟುಗಳ ನಿರ್ಧಾರ

Date:

ಭಾರತೀಯ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್​ ಸಿಂಗ್ ಬಂಧನಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಖ್ಯಾತನಾಮ ಕುಸ್ತಿಪಟುಗಳು ತಾತ್ಕಾಲಿವಾಗಿ ನಿಲ್ಲಿಸಲು ನಿರ್ಧರಿಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಅವರ ಜೊತೆ ಕುಸ್ತಿಪಟುಗಳು ಬುಧವಾರ, ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಕೇಂದ್ರ ಸಚಿವರು ನೀಡಿದ ಭರವಸೆಯ ಮೇರೆಗೆ ಜೂನ್‌ 15ರವರೆಗೆ ಪ್ರತಿಭಟನೆ ನಿಲ್ಲಿಸಲು ಕುಸ್ತಿಪಟುಗಳು ನಿರ್ಧರಿಸಿದ್ದಾರೆ.

ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಲೈಂಗಿಕ ದೌರ್ಜನ್ಯ  ದೂರಿನ ವಿಚಾರಣೆಯನ್ನು ಜೂನ್ 15ರೊಳಗೆ ಮುಗಿಸಿ, ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಸಭೆಯ ವೇಳೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ್ದು, ಅಲ್ಲಿಯವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಸಾಕ್ಷಿ ಮಲಿಕ್‌ ಹೇಳಿದ್ದಾರೆ.

ಕೇಂದ್ರ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕುಸ್ತಪಟುಗಳು ಪ್ರಮುಖವಾಗಿ ಐದು ಬೇಡಿಕೆಗಳನ್ನು ಮುಂದಿರಿಸಿದ್ದಾರೆ ಎನ್ನಲಾಗಿದೆ.

ಸಭೆಯ ಬಳಿಕ ಮಾತನಾಡಿದ ಕುಸ್ತಿಪಟು ಬಜರಂಗ್ ಪುನಿಯಾ, ʻಕೇಂದ್ರ ಕ್ರೀಡಾ ಸಚಿವರ ಜೊತೆ ನಾವು ಕೆಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ಜೂನ್ 15 ರೊಳಗಾಗಿ ಪೊಲೀಸ್ ತನಿಖೆಯನ್ನು ಪೂರ್ಣಗೊಳಿಸಲಾಗುವುದು ಮತ್ತು ಅಲ್ಲಿಯವರೆಗೆ ಪ್ರತಿಭಟನೆ ನಡೆಸದಂತೆ ಸಚಿವರು ನಮಗೆ ಮನವಿ ಮಾಡಿದ್ದಾರೆʼ ಎಂದು ಪುನಿಯಾ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ’: ಬಿಎಸ್‌ಪಿ ಸಂಸದ ದಾನಿಶ್ ಅಲಿ ಭೇಟಿ ಮಾಡಿದ ರಾಹುಲ್

ಲೋಕಸಭೆಯಲ್ಲಿ ಬಿಜೆಪಿ ಸಂಸದನಿಂದ ಭಯೋತ್ಪಾದಕ ಎಂದು ನಿಂದನೆಗೊಳಗಾದ ಉತ್ತರ ಪ್ರದೇಶದ ಅಮ್ರೊಹ...

ಚಂದ್ರಯಾನ 3: ವಿಕ್ರಮ್, ಪ್ರಗ್ಯಾನ್‌ನಿಂದ ಇನ್ನೂ ಯಾವುದೇ ಸಿಗ್ನಲ್ ಬಂದಿಲ್ಲ ಎಂದ ಇಸ್ರೋ

ಚಂದ್ರನ ದಕ್ಷಿಣ ಧ್ರುವದಲ್ಲಿ ನಿಂತಿರುವ ಚಂದ್ರಯಾನ 3 ಯೋಜನೆಯ ಭಾಗವಾದ ವಿಕ್ರಮ್‌...

ಉದಯನಿಧಿ ಪೂರ್ವಜರು ಕೂಡ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರು: ನಟ ಕಮಲ್ ಹಾಸನ್

ಕೊಯಮತ್ತೂರಿನಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷದ ಸಭೆಯಲ್ಲಿ ಹೇಳಿಕೆ ನೀಡಿದ ಸ್ಥಾಪಕ ಪೆರಿಯಾರ್...

ಬಿಜೆಪಿ ಸಂಸದನಿಂದ ಅವಹೇಳನ: ಸ್ಪೀಕರ್‌ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಮರ್ಯಾದಾ ಪುರುಷ ಸ್ಪೀಕರ್ ಅವರೇ ಏನು ಕ್ರಮ ಕೈಗೊಳ್ಳುತ್ತೀರಿ? ಬಹಿರಂಗವಾಗಿಯೇ ಪ್ರಶ್ನಿಸಿದ...