ನೈರುತ್ಯ ರೈಲ್ವೆ | ಜನವರಿ-2024 ರವರೆಗೆ 40.96 ಮಿಲಿಯನ್ ಟನ್ ಸರಕು ಸಾಗಣೆ: ₹4055.32 ಕೋಟಿ ಆದಾಯ

Date:

“ನೈರುತ್ಯ ರೈಲ್ವೆಯು ಸರಕು ಮತ್ತು ಪಾರ್ಸೆಲ್ ಸಾರಿಗೆ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಸರಕು ವಲಯದಲ್ಲಿ, ನೈರುತ್ಯ ರೈಲ್ವೆ ಏಪ್ರಿಲ್-2023 ರಿಂದ ಜನವರಿ-2024 ರವರೆಗೆ 40.96 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 8.76% ಹೆಚ್ಚಳವಾಗಿದೆ” ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ

“ಜನವರಿ 2024 ರಲ್ಲಿ ನೈರುತ್ಯ ರೈಲ್ವೆ 4.82 ಮಿಲಿಯನ್ ಟನ್ ಸರಕುಗಳನ್ನು ಲೋಡ್ ಮಾಡಿದೆ. ಇದು ಮಾರ್ಚ್ 2023ರ ನಂತರ ಎರಡನೇ ಅತಿ ಹೆಚ್ಚು ಮಾಸಿಕ ಲೋಡ್ ಆಗಿದೆ. 2024ರ ಜನವರಿ 31ರಂದು ನೈಋತ್ಯ ರೈಲ್ವೆ 3,431 ವ್ಯಾಗನ್‌ಗಳನ್ನು ಲೋಡ್ ಮಾಡುವ ಮೂಲಕ ಹಿಂದಿನ ಅತ್ಯುತ್ತಮ ದಾಖಲೆಯನ್ನು ಮೀರಿ ಎರಡನೇ ಅತಿ ಹೆಚ್ಚು ಏಕ-ದಿನದ ಲೋಡಿಂಗ್ ಅನ್ನು ಸಾಧಿಸಿದೆ. ಸರಕು ಸಾಗಣೆ ಘಟಕ ಅಂದರೆ ಎನ್.ಟಿ.ಕೆ.ಎಂ (ನೆಟ್ ಟನ್ ಕಿಲೋಮೀಟರ್) ಸಹ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 4.4% ರಷ್ಟು ಅತ್ಯುತ್ತಮ ಬೆಳವಣಿಗೆಯನ್ನು ದಾಖಲಿಸಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಹೇಳಿದೆ.

“ನೈರುತ್ಯ ರೈಲ್ವೆಯು ಆಟೋಮೊಬೈಲ್ ವಲಯದಲ್ಲಿ ಗಮನಾರ್ಹ ತಯಾರಕರಾದ ಟಿವಿಎಸ್, ಕೆಐಎ, ಮಾರುತಿ ಸುಜುಕಿ, ಟಾಟಾ, ಟೊಯೊಟಾ ಕಂಪನಿಗಳಿಗೆ ಆದ್ಯತೆಯ ಸಾರಿಗೆ ಆಯ್ಕೆಯಾಗಿ ಹೊರಹೊಮ್ಮಿದೆ. ಜನವರಿ 2024 ರವರೆಗೆ 558 ಆಟೋಮೊಬೈಲ್ ರೇಕ್ ಗಳನ್ನು ಸಾಗಿಸಿದೆ, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 37.1 ರಷ್ಟು ಹೆಚ್ಚಳವಾಗಿದೆ. ಜನವರಿ 2024 ರಲ್ಲಿ, ನೈರುತ್ಯ ರೈಲ್ವೆಯು 69 ಆಟೋಮೊಬೈಲ್ ರೇಕ್‌ಗಳನ್ನು ಲೋಡ್ ಮಾಡುವ ಮೂಲಕ ಒಂದು ತಿಂಗಳಲ್ಲಿ ತನ್ನ ಅತ್ಯುತ್ತಮ ಆಟೋಮೊಬೈಲ್ ಲೋಡ್ ಅನ್ನು ಸಾಧಿಸಿದೆ (ವಿಭಾಗವಾರು; ಬೆಂಗಳೂರು -65 ರೇಕ್ ಗಳು, ಮೈಸೂರು -3 ರೇಕ್ ಗಳು, ಹುಬ್ಬಳ್ಳಿ -1 ರೇಕ್)” ಎಂದು ಮಾಹಿತಿ ನೀಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಇದಲ್ಲದೆ ನೈರುತ್ಯ ರೈಲ್ವೆಯು ಕಬ್ಬಿಣದ ಅದಿರು, ಸಿಮೆಂಟ್, ಉಕ್ಕು, ಖನಿಜ ತೈಲ, ರಸಗೊಬ್ಬರ, ಆರ್‌ಎಂಎಸ್‌ಪಿ, ಕಲ್ಲಿದ್ದಲು, ಆಹಾರ ಧಾನ್ಯಗಳು, ಕಂಟೇನರ್ ಮತ್ತು ಇತರ ಸರಕುಗಳ ಗಣನೀಯ ಸಾಗಣೆಯನ್ನು ಸಾಧಿಸಿದೆ. ಇದರ ಪರಿಣಾಮವಾಗಿ, ನೈಋತ್ಯ ರೈಲ್ವೆ ಜನವರಿ 2024ರ ವೇಳೆಗೆ ₹4055.32 ಕೋಟಿ ಸರಕು ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ ಶೇ 10.36% ಹೆಚ್ಚಳವಾಗಿದೆ” ಎಂದು ಹೇಳಿದೆ.

ಈ ಸುದ್ದಿ ಓದಿದ್ದೀರಾ? ಒಂದೇ ವರ್ಷಕ್ಕೆ ಬೆಂಗಳೂರಿನಲ್ಲಿ ಕಡಿಮೆಯಾದ ಸಂಚಾರ ದಟ್ಟಣೆ: ಶ್ರೇಯಾಂಕದಲ್ಲಿ ಆರನೇ ಸ್ಥಾನ

“ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸಲು ನೈರುತ್ಯ ರೈಲ್ವೆ ವ್ಯಾಪಾರಿಗಳು, ರೈತರು ಮತ್ತು ತಯಾರಕರನ್ನು ಸಕ್ರಿಯವಾಗಿ ತಲುಪುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಹಕ-ಮೊದಲು ಮತ್ತು ಪರಿಹಾರ-ಆಧಾರಿತ ವಿಧಾನಕ್ಕೆ ಸಮರ್ಪಿತರಾಗಿದ್ದಾರೆ. ಗ್ರಾಹಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಹರಿಸುವ ಗುರಿಯನ್ನು ಹೊಂದಿದ್ದಾರೆ. ಈ ಸಕಾರಾತ್ಮಕ ವಿಧಾನವು ಆಟೋಮೊಬೈಲ್ ಮತ್ತು ಕಬ್ಬಿಣದ ಅದಿರು ಲೋಡಿಂಗ್ ಹೆಚ್ಚಳಕ್ಕೆ ಕಾರಣವಾಗಿದೆ” ಎಂದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ಡಿವೈಎಫ್‌ಐ 12ನೇ ರಾಜ್ಯ ಸಮ್ಮೇಳನ, ಅಂಗಾಗ ದಾನ ಪ್ರತಿಜ್ಞೆ ಮಾಡಿದ ಕಾರ್ಯಕರ್ತರು

ಡಿವೈಎಫ್‌ಐ 12ನೇ ರಾಜ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು, ಅಂಗಾಗ ದಾನ ಮಾಡುವ...

ಜೈಲು ಸೇರಿದ ಬಜರಂಗದಳ ಕಾರ್ಯಕರ್ತರನ್ನು ಭೇಟಿಯಾದ ಶೋಭಾ ಕರಂದ್ಲಾಜೆ

ಲವ್ ಜಿಹಾದ್​ ಪ್ರಕರಣದಲ್ಲಿ ​ಹಲ್ಲೆ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಸೇರಿರುವ...

ವಿಜಯಪುರ | ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು...

ಬಾಗಲಕೋಟೆ | ಬೇಸಿಗೆಗೂ ಮುನ್ನವೇ ಬಿಸಿಲಿನ ಧಗೆ, ಮಣ್ಣಿನ ಮಡಕೆಗಳತ್ತ ಜನರ ಚಿತ್ತ

ಬೇಸಿಗೆಯ ಆರಂಭದಲ್ಲೇ ಬಿಸಿಲ ತಾಪಕ್ಕೆ ಉತ್ತರ ಕರ್ನಾಟಕದ ಜನ ಹೈರಾಣಾಗಿದ್ದು, ಬಾಗಲಕೋಟೆ...