15 ತಿಂಗಳಲ್ಲಿ 3 ಲಕ್ಷ ಮಂದಿ ಉದ್ಯೋಗ ವಂಚಿತ; ಕಂಪನಿಗಳ ತೀವ್ರಗತಿಯ ಉದ್ಯೋಗ ಕಡಿತಕ್ಕೆ ಕಾರಣವೇನು?

Date:

  • Layoff.fyi ಮಾಹಿತಿ ಪ್ರಕಾರ ನಿತ್ಯ 3,500 ಉದ್ಯೋಗ ವಂಚಿತ
  • ಜನವರಿ ತಿಂಗಳಲ್ಲಿ ವಿಶ್ವದಾದ್ಯಂತ ಒಂದು ಲಕ್ಷ ಉದ್ಯೋಗ ಕಡಿತ

ಉದ್ಯೋಗ ಕಡಿತವು ಜಾಗತಿಕ ವಿದ್ಯಮಾನವಾಗಿ ಮಾರ್ಪಟ್ಟಿದೆ. ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಜಗತ್ತು ಈಗಷ್ಟೇ ಚೇತರಿಸಿಕೊಂಡು ನಷ್ಟದಲ್ಲಿದ್ದ ಪ್ರಮುಖ ಕ್ಷೇತ್ರಗಳು ಸುಧಾರಣೆ ಹಾದಿ ಕಂಡುಕೊಳ್ಳುತ್ತಿದ್ದವು. ಆದರೆ ಆರ್ಥಿಕ ಹಿಂಜರಿತ ಭೀತಿ ದಿಢೀರನೆ ಆವರಿಸಿದ ಕಾರಣ ಪ್ರಮುಖ ಕಂಪನಿಗಳು ವೆಚ್ಚ-ಕಡಿತ, ಇತರೆ ಆರ್ಥಿಕ ನೆಪಗಳ ಹೆಸರಿನಲ್ಲಿ ನಿತ್ಯ ನೂರಾರು ಮಂದಿಯನ್ನು ಮನೆಗೆ ಕಳಿಸುತ್ತಿವೆ.

Layoff.fyi ಎಂಬ ವೆಬ್‌ಸೈಟ್‌ ಮಾಹಿತಿಯ ಪ್ರಕಾರ ನಿತ್ಯ ಮೂರೂವರೆ ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಕಳೆದ 15 ತಿಂಗಳುಗಳಿಂದ 3 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ವಜಾಗೊಂಡಿದ್ದಾರೆ. ಉದ್ಯೋಗ ಕಡಿತದಿಂದ ಪ್ರತಿಯೊಂದು ವಲಯದ ಮೇಲೂ ಆರ್ಥಿಕವಾಗಿ ದುಷ್ಪರಿಣಾಮ ಉಂಟಾಗುತ್ತಿದೆ.

ಒಂದೇ ತಿಂಗಳಲ್ಲಿ 1 ಲಕ್ಷ ಮಂದಿ ವಜಾ

2022 ರಲ್ಲಿ ವಿಶ್ವದ 1051 ಕಂಪನಿಗಳಿಂದ 1,61,411 ಮಂದಿ ಉದ್ಯೋಗ ವಂಚಿತರಾದರೆ, 2023ರ ಮಾರ್ಚ್‌ವರೆಗೂ 505 ಸಂಸ್ಥೆಗಳಿಂದ 1,48,180 ಉದ್ಯೋಗಿಗಳು ವಜಾಗೊಂಡಿದ್ದಾರೆ. ಈ ವರ್ಷದ ಜನವರಿ ಒಂದೇ ತಿಂಗಳಲ್ಲಿ ಸುಮಾರು 288 ಟೆಕ್‌ ಕಂಪನಿಗಳಿಂದ ಬರೋಬ್ಬರಿ 1 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. 

ಇ–ಕಾಮರ್ಸ್‌ ಕ್ಷೇತ್ರದ ದೈತ್ಯ ಕಂಪನಿ ಅಮೆಜಾನ್‌ 18 ಸಾವಿರ, ತಂತ್ರಜ್ಞಾನ ಕ್ಷೇತ್ರದ ದೊಡ್ಡ ಕಂಪನಿಗಳಾದ ಗೂಗಲ್‌ 12 ಸಾವಿರ ಹಾಗೂ ಮೈಕ್ರೊಸಾಫ್ಟ್‌ 10 ಸಾವಿರಕ್ಕೂ ಹೆಚ್ಚು ಟೆಕ್‌ ಉದ್ಯೋಗಿಗಳನ್ನು ವಜಾ ಮಾಡಿವೆ. ನಂತರದ ಸ್ಥಾನಗಳಲ್ಲಿ ಸೇಲ್ಸ್‌ಫೋರ್ಸ್‌ 7 ಸಾವಿರ, ಐಬಿಎಂ 3,900 ಹಾಗೂ ಸ್ಯಾಪ್‌ 3,000 ಮಂದಿಯನ್ನು ಮನೆಗೆ ಕಳಿಸಿವೆ.

Trueup.io ಎಂಬ ಸಂಸ್ಥೆಯ ವರದಿ ಪ್ರಕಾರ 2023ರ ಜನವರಿಯಲ್ಲಿ ಟೆಕ್ ಉದ್ಯಮದಾದ್ಯಂತ ಸುಮಾರು 1,06,950 ಉದ್ಯೋಗಿಗಳು ತಮ್ಮ ಉದ್ಯೋಗಗಳಿಂದ ವಂಚಿತರಾಗಿದ್ದಾರೆ.

ಉದ್ಯೋಗ ಕಡಿತಕ್ಕೆ ಕಾರಣಗಳು

ಉದ್ಯೋಗ ಕಡಿತ ಮಾಡುತ್ತಿರುವ ದೈತ್ಯ ಕಂಪನಿಗಳು ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿ, ಕೋವಿಡ್–19 ಸೃಷ್ಟಿಸಿದ ಬಿಕ್ಕಟ್ಟು, ಅತಿಯಾದ ನೇಮಕಾತಿ ಸೇರಿದಂತೆ ಹಲವು ಕಾರಣಗಳನ್ನು ನೀಡುತ್ತಿವೆ. ಆದರೆ ಆರ್ಥಿಕ ವಿಶ್ಲೇಷಕರ ಪ್ರಕಾರ ಈ ಕೆಳಗಿನವುಗಳು ಉದ್ಯೋಗ ವಜಾಗೊಳಿಸುವುದಕ್ಕೆ ಪ್ರಮುಖ ಕಾರಣಗಳಾಗಿವೆ.

ವೆಚ್ಚ ಕಡಿತ : ಕೆಲಸಗಾರರನ್ನು ವಜಾಗೊಳಿಸಲು ಒಂದು ಮುಖ್ಯ ಕಾರಣವೆಂದರೆ ಕಂಪನಿಗಳು ಕೆಲವು ರೀತಿಯಲ್ಲಿ ವೆಚ್ಚವನ್ನು ಕಡಿತಗೊಳಿಸಲು ನಿರ್ಧರಿಸುವುದು. ಕಂಪನಿ ತನ್ನ ಖರ್ಚುಗಳನ್ನು ಸರಿದೂಗಿಸಲು ಸಾಕಷ್ಟು ಲಾಭವನ್ನು ಗಳಿಸುತ್ತಿಲ್ಲ ಅಥವಾ ಸಾಲವನ್ನು ಪಾವತಿಸಲು ಗಣನೀಯ ಹೆಚ್ಚುವರಿ ಹಣದ ಅಗತ್ಯವಿರುವುದರಿಂದ ಉದ್ಯೋಗ ಕಡಿತಕ್ಕೆ ಮುಂದಾಗುತ್ತದೆ.

ಸಿಬ್ಬಂದಿ ಪುನರಾವರ್ತನೆ : ಹೊರಗುತ್ತಿಗೆ, ಹೆಚ್ಚಿನ ಸಿಬ್ಬಂದಿ ಮತ್ತು ಉದ್ಯೋಗದ ಪಾತ್ರಗಳಲ್ಲಿನ ಮಾರ್ಪಾಡುಗಳಿಂದಾಗಿ ಸಂಸ್ಥೆಯು ಉದ್ಯೋಗ ಸ್ಥಾನಗಳನ್ನು ಕಡಿಮೆ ಮಾಡಲು ಅಥವಾ ತೆಗೆದುಹಾಕಲು ಅಗತ್ಯವಾದಾಗ ಕೆಲಸಗಾರರನ್ನು ವಜಾಗೊಳಿಸಲು ಮುಂದಾಗುತ್ತದೆ. ಈ ಸಂದರ್ಭದಲ್ಲಿ ಹಲವರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ.

ಸ್ಥಳಾಂತರ: ಕಂಪನಿಗಳ ಕಾರ್ಯಚಟುವಟಿಕೆಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸುವುದು ಕೂಡ ಕೆಲವು ಕೆಲಸಗಾರರನ್ನು ಕೈಬಿಡುವ ಅಗತ್ಯತೆ ಉಂಟಾಗುತ್ತದೆ. ಈ ಉದ್ದೇಶವು ಕಾರ್ಮಿಕರ ಮೇಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಸಮುದಾಯದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ.

ತಾಂತ್ರಿಕ ಪ್ರಗತಿಗಳಲ್ಲಿ ಹೆಚ್ಚಳ: ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕತೆಯ ಪ್ರಗತಿಯಂಥ ತಂತ್ರಜ್ಞಾನಗಳು ಕಾರ್ಮಿಕರ ಪಾತ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ. ಈ ಅಂಶವೂ ಕೂಡ ಉದ್ಯೋಗಿಗಳ ವಜಾಗೊಳಿಸುವಿಕೆಗೆ ಕಾರಣವಾಗುತ್ತದೆ.

ಈ ಮೇಲಿನ ಅಂಶಗಳ ಜೊತೆ ಕಂಪನಿಗಳ ವಿಲೀನಗಳು ಮತ್ತು ಸ್ವಾಧೀನಗಳಿಂದಲೂ ಕೂಡ ಉದ್ಯೋಗಿಗಳು ಸಾಮೂಹಿಕ ವಜಾಕ್ಕೆ ಒಳಗಾಗುತ್ತಾರೆ.   

ಉದ್ಯೋಗ ಕಡಿತ ಶುರುವಾಗಿದ್ದು ಹೇಗೆ?

ಉದ್ಯೋಗ ಕಡಿತವು 2019 ರಲ್ಲಿ ಪ್ರಾರಂಭವಾದ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಜಗತ್ತನ್ನು ಆಕ್ರಮಿಸಿದ ದೊಡ್ಡ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಈ ಅಧೋಗತಿ ಇನ್ನೂ ಕಡಿಮೆಯಾಗಿಲ್ಲ. ವಿಶ್ವದಾದ್ಯಂತ ಸರ್ಕಾರಗಳು ಒದಗಿಸಿರುವ ಭರವಸೆಗಳ ಹೊರತಾಗಿಯೂ ಸಾಂಕ್ರಾಮಿಕ – ಪೂರ್ವ ಮಟ್ಟಕ್ಕೆ ಹಿಂತಿರುಗುತ್ತಿದ್ದೇವೆ ಎಂಬ ಅನಿಸಿಕೆಯನ್ನು ಈ ಉದ್ಯೋಗ ವಜಾಗೊಳಿಸುವಿಕೆ ಉಂಟುಮಾಡುತ್ತಿದೆ.

ಭಾರತದ ಮೇಲೂ ಪರಿಣಾಮ
ಭಾರತೀಯ ಐಟಿ ಸೇವಾ ಸಂಸ್ಥೆಗಳು ಸಂಘಟಿತ ವಲಯದಲ್ಲಿ ಅತಿದೊಡ್ಡ ಉದ್ಯೋಗದಾತರಲ್ಲಿ ಸೇರಿವೆ ಮತ್ತು ಯಾವುದೇ ಜಾಗತಿಕ ಆರ್ಥಿಕ ಪ್ರವೃತ್ತಿಯು ಆ ಸೇವಾ ಸಂಸ್ಥೆಗಳ ಬೆಳವಣಿಗೆಯ ಪ್ರಕ್ಷೇಪಗಳ ಮೇಲೆ ಪರಿಣಾಮ ಬೀರುತ್ತದೆ. ಮ್ಯಾನೇಜ್‌ಮೆಂಟ್‌ಗಳು ಹೂಡಿಕೆದಾರರಿಗೆ ಜವಾಬ್ದಾರರಾಗಿರುವುದರಿಂದ ವೆಚ್ಚವನ್ನು ಕಡಿತಗೊಳಿಸಲು ಮತ್ತು ಲಾಭದ ಅಂಚುಗಳನ್ನು ರಕ್ಷಿಸಲು ಬಯಸಿದಾಗ ಉದ್ಯೋಗ ಕಡಿತಕ್ಕೆ ಮುಂದಾಗುತ್ತವೆ.

ದೊಡ್ಡ ಮಟ್ಟದ ಉದ್ಯೋಗ ಕಡಿತ ಮಾಡಿದ ಕಂಪನಿಗಳು

ಮೈಕ್ರೋಸಾಫ್ಟ್: 10,000

ಅಮೆಜಾನ್: 27,000

ಮೆಟಾ: 19,000

ಗೂಗಲ್: 18,000

ಸೇಲ್ಸ್​ಫೋರ್ಸ್:​ 8,000

ಟ್ವಿಟರ್: 7,500

ಡೆಲ್: 6,650

ಐಬಿಎಂ: 3,900

ಎಸ್​ಎಪಿ: 3,000

ಝೂಮ್: 1,300

ಕಾಯಿನ್​ಬೇಸ್: 950

ಯಾಹೂ: 1,600

ಗಿಟ್​​​ಹಬ್: 300

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರದೇಶ | ಗೆಲುವಿನ ಶ್ರೇಯಸ್ಸು ಮೋದಿಗೆ ಎಂದ ಸಿಎಂ ಚೌಹಾಣ್

ಮಧ್ಯಪ್ರದೇಶದ ಜನರಿಗೆ ಪ್ರಧಾನಿ ಮೋದಿ ಮೇಲೆ ಅಪಾರ ನಂಬಿಕೆ ಇದೆ. ಚುನಾವಣಾ...

ಮಧ್ಯಪ್ರದೇಶ | ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಕೇಂದ್ರ ಸಚಿವರ ಕತೆ ಏನು?

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ...

ಮಧ್ಯಪ್ರದೇಶ | ಸತತ ಏಳು ಬಾರಿ ಒಂದೇ ಕ್ಷೇತ್ರದಲ್ಲಿ ಗೆದ್ದಿದ್ದ ವಿಪಕ್ಷ ನಾಯಕನಿಗೆ ಹಿನ್ನಡೆ!

ಮಧ್ಯಪ್ರದೇಶ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಜಿತು ಪಟ್ಟಾರಿ ಅವರು ರೌ ಕ್ಷೇತ್ರದಲ್ಲಿ ಹಿನ್ನಡೆ...

ಮಧ್ಯಪ್ರದೇಶ | ಕಾಂಗ್ರೆಸ್‌ಗಿಂತ ಬಿಜೆಪಿ ಪ್ರಚಾರ ಭಿನ್ನವಾಗಿದ್ದು ಹೇಗೆ? ಕೇಸರಿ ಪಡೆಯ ಮುನ್ನಡೆಗೆ ಕಾರಣವೇನು?

ಸ್ಥಳೀಯ ಸಮಸ್ಯೆಗಳ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿದ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ತನ್ನ ಚುನಾವಣಾ...