ಫೇಸ್‌ಬುಕ್ ಉದ್ಯೋಗ ಕಡಿತಕ್ಕೆ ಆಕ್ರೋಶ; ಮಾರ್ಕ್ ಝುಕರ್‌ಬರ್ಗ್‌ಗೆ ಸಿಬ್ಬಂದಿಗಳಿಂದ ಛೀಮಾರಿ

Date:

  • ಮಾರ್ಚ್ 14 ರಂದು 10 ಸಾವಿರ ಉದ್ಯೋಗಗಳ ವಜಾ
  • ಕಳೆದ ನವೆಂಬರ್‌ನಲ್ಲಿ 11 ಸಾವಿರ ಉದ್ಯೋಗ ಕಡಿತ

ಪದೇ ಪದೇ ಉದ್ಯೋಗ ಕಡಿತಕ್ಕೆ ಮುಂದಾಗಿರುವ ಮೆಟಾ ಸಂಸ್ಥೆಯ ವಿರುದ್ಧ ಆಕ್ರೋಶಗೊಂಡಿರುವ ಉದ್ಯೋಗಿಗಳು, ಫೇಸ್‌ಬುಕ್‌ ಸಿಇಒ ಮಾರ್ಕ್ ಝುಕರ್‌ಬರ್ಗ್‌ಗೆ ಛೀಮಾರಿ ಹಾಕಿರುವ ಘಟನೆ ನಡೆದಿದೆ.

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಇತ್ತೀಚಿಗೆ 10 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಹೇಳಿತ್ತು. ಈ ಘೋಷಣೆ ಬಳಿಕ ಕಂಪನಿಯ ಉದ್ಯೋಗಿಗಳ ಜೊತೆ ನಡುವೆ ನಡೆದ ಸಭೆಯಲ್ಲಿ ಸಿಇಒ ಮಾರ್ಕ್ ಝುಕರ್‌ಬರ್ಗ್‌ಗೆ ಸಿಬ್ಬಂದಿಗಳು ಛೀಮಾರಿ ಹಾಕಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ 11 ಸಾವಿರ ಉದ್ಯೋಗ ಕಡಿತಗೊಳಿಸಿದ ಬಳಿಕ ಪುನಃ ಮಾರ್ಚ್ 14 ರಂದು 10 ಸಾವಿರ ಉದ್ಯೋಗಗಳನ್ನು ಕೈಬಿಡುವುದಾಗಿ ತೀರ್ಮಾನ ಮಾಡಲಾಗಿತ್ತು. ಈ ನಿರ್ಧಾರ ಪ್ರಕಟಿಸಿದ ನಂತರ ಸಂಸ್ಥೆಯು ತನ್ನ ಉದ್ಯೋಗಿಗಳ ಸಾಮಾನ್ಯ ಸಭೆ ಕರೆದಾಗ ಮಾರ್ಕ್ ಝುಕರ್‌ಬರ್ಗ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ಬಂಧ ತೆರವು; ‘ಐ ಆಮ್ ಬ್ಯಾಕ್’ ಎಂದ ಡೊನಾಲ್ಡ್ ಟ್ರಂಪ್

ಈ ರೀತಿ ಉದ್ಯೋಗಿಗಳನ್ನು ವಜಾ ಮಾಡುತ್ತಾ ಹೋದರೆ ಕಂಪನಿಯ ಮೇಲೆ ವಿಶ್ವಾಸವಿಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ನಿರಂತರವಾಗಿ ಉದ್ಯೋಗವನ್ನು ಕಡಿತಗೊಳಿಸಿದರೆ ಹೊಸ ಉದ್ಯೋಗಿಗಳು ಯಾವ ನಂಬಿಕೆಯಿಂದ ಕಂಪನಿ ಸೇರುತ್ತಾರೆ. ಇಂತಹ ನಿರ್ಧಾರಗಳಿಂದ ಕಂಪನಿಗಳಿಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲದೆ ಇದು ಉದ್ಯೋಗಿಗಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಝುಕರ್‌ಬರ್ಗ್‌ ಉದ್ಯೋಗಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಿಬ್ಬಂದಿಗಳ ಆವೇಶ ಮಾತ್ರ ಕಡಿಮೆಯಾಗಲಿಲ್ಲ.

ವೇತನ ಕಡಿತಕ್ಕೊಳಗಾದವರ ಆರ್ಥಿಕ ಸುರಕ್ಷತೆಗೂ ಮೆಟಾ ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ 115 ಕೋಟಿ ರೂ.ಗಳನ್ನು ಹೆಚ್ಚುವರಿ ಹಣ ಮೀಸಲಿಡಲಾಗಿದೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರದೇಶ: ಫೇಸ್‌ಬುಕ್‌ನಲ್ಲಿ ಹೋಮ್ ಡೆಲಿವರಿಯೊಂದಿಗೆ ಗನ್ ಮಾರಾಟ ಜಾಹಿರಾತು

ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಫೇಸ್‌ಬುಕ್‌ ಪುಟದಲ್ಲಿ ಚಿತ್ರಸಹಿತ ಜಾಹಿರಾತು ನೀಡಿದ್ದ ಆರೋಪಕ್ಕಾಗಿ ಮಧ್ಯಪ್ರದೇಶದ...

2040ಕ್ಕೆ ಚಂದ್ರನ ಮೇಲೆ ನಡಿಗೆ, 2035ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಇಸ್ರೋ ಉದ್ದೇಶ

2040ರ ವೇಳೆಗೆ ಭಾರತದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ...

ಪೇಟಿಎಂ ಪಾವತಿ ಬ್ಯಾಂಕ್ | ಅಕ್ರಮ ಹಣ ವ್ಯವಹಾರದ ಬಗ್ಗೆ ಇ.ಡಿ ತನಿಖೆಯ ಅಗತ್ಯವೇಕಿದೆ?

ಪೇಟಿಎಂ ಪಾವತಿ ಬ್ಯಾಂಕ್ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿರುವ ಸಾಧ್ಯತೆಯನ್ನು ಆರ್‌ಬಿಐ...

‘ಎಐ’ನಿಂದ ವಿಶ್ವದಲ್ಲಿ ಶೇ. 40 ಉದ್ಯೋಗ ಕಡಿತ ಸಂಭವ: ಐಎಂಎಫ್ ಮುಖ್ಯಸ್ಥರ ಎಚ್ಚರಿಕೆ

ಕೃತಕ ಬುದ್ಧಿಮತ್ತೆ(ಎಐ) ವಿಶ್ವದಾದ್ಯಂತ ಉದ್ಯೋಗ ಭದ್ರತೆಯ ಮೇಲೆ ಭಾರೀ ಪರಿಣಾಮ ತಂದೊಡ್ಡಲಿದೆ...