ಟ್ವಿಟರ್‌ನಲ್ಲಿ ಆಗಾಗ ಲಾಗಿನ್‌ ಆಗಿ; ಇಲ್ಲದಿದ್ದರೆ ಖಾತೆಗಳು ಮಾಯವಾಗಲಿವೆ!

Date:

ಇಲಾನ್‌ ಮಸ್ಕ್‌ ಟ್ವಟರ್‌ ಸಂಸ್ಥೆಗೆ ಅಧಿಪತಿಯಾದ ನಂತರ ಹಲವು ವಿಚಿತ್ರ ಬದಲಾವಣೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದೀಗ ಇಂಥದ್ದೇ ಮತ್ತೊಂದು ಕ್ರಮಕ್ಕೆ ಮುಂದಾಗಿರುವ ಮಸ್ಕ್‌ ಹಲವು ವರ್ಷಗಳಿಂದ ಸಕ್ರಿಯವಾಗಿರದ ಹಾಗೂ ಮೃತಪಟ್ಟವರ ಖಾತೆಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.

ಡಿಲೀಟ್‌ ಆದ ಟ್ವಿಟರ್‌ ಬಳಕೆದಾರರು ಕೆಲವು ದಿನಗಳಿಂದ ಮತ್ತೊಂದು ಹೊಸ ಖಾತೆಯನ್ನು ತೆರೆದು ಅದರಲ್ಲಿ ತಮ್ಮ ಟ್ವಿಟರ್‌ ಖಾತೆ ರದ್ದುಗೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅಪರೂಪಕ್ಕೊಮ್ಮೆ ಖಾತೆ ಬಳಸುತ್ತಿದ್ದವರ ಟ್ವಟರ್‌ ಅಕೌಂಟ್‌ಗಳು ಮಾಯವಾಗಿವೆ. ಅಕೌಂಟ್‌ ಅನ್ನು ಓಪನ್‌ ಮಾಡಿದಾಗ ನೀವು ಟ್ವಿಟರ್‌ ನಿಯಮವನ್ನು ಉಲ್ಲಂಘಿಸಿದ ಕಾರಣ ನಿಮ್ಮ ಖಾತೆಯನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಕಾಣಿಸಿಕೊಳ್ಳುತ್ತದೆ. ನೂತನ ನಿಯಮದ ಪ್ರಕಾರ ಕನಿಷ್ಠ 30 ದಿನಗಳಿಗೊಮ್ಮೆ ನಿಮ್ಮ ಖಾತೆಯನ್ನು ಲಾಗಿನ್‌ ಮಾಡಬೇಕು. ಇಲ್ಲದಿದ್ದರೆ ನಿಷ್ಕ್ರಿಯಗೊಳ್ಳುತ್ತವೆ.

2019ರಲ್ಲಿಯೇ ಸಕ್ರಿಯವಾಗಿರದ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ನಿರ್ಧಾರಕ್ಕೆ ಟ್ವಿಟರ್‌ ಬಂದಿತ್ತು. ಆದರೆ ಆಗ ಪ್ರಕ್ರಿಯೆಗಳು ನಿಧಾನಗತಿಯಿಂದ ಸಾಗಿದ್ದವು. ಇಲಾನ್‌ ಮಸ್ಕ್‌ ಟ್ವಟರ್‌ ಖರೀದಿಸಿದ ನಂತರ ಪ್ರಕ್ರಿಯೆಗೆ ವೇಗ ದೊರೆತಿದೆ.

ಈ ಸುದ್ದಿ ಓದಿದ್ದೀರಾ? ಟ್ವಿಟರ್‌ನಿಂದ ಮೊಬೈಲ್‌ ನಂಬರ್‌ ಇಲ್ಲದೆ ವಿಡಿಯೋ ಕಾಲಿಂಗ್ ಸೌಲಭ್ಯ

ಕೆಲವು ದಿನಗಳ ಹಿಂದಷ್ಟೆ  ಜಿಮೇಲ್ ಕೂಡ ನಿಷ್ಕ್ರಿಯ ಖಾತೆಗಳನ್ನು ರದ್ದುಗೊಳಿಸುವುದಾಗಿ ತಿಳಿಸಿತ್ತು. ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಲಾಗಿನ್‌ ಆಗಿರದ ಖಾತೆಗಳನ್ನು ಡಿಲೀಟ್ ಮಾಡಲಿದೆ.

ಪ್ರಮುಖ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಸಕ್ರಿಯವಾಗಿರದ ಖಾತೆಗಳನ್ನು ರದ್ದುಗೊಳಿಸುವ ಮುನ್ನ ಬಳಕೆದಾರರಿಗೆ ನೋಟಿಫಿಕೆಷನ್‌ಗಳ ಮೂಲಕ ಅಧಿಸೂಚನೆ ಕೊಡುತ್ತದೆ. ಆದರೆ ಟ್ವಿಟರ್‌ ಹಾಗೂ ಜಿಮೇಲ್‌ನಲ್ಲಿ ಈ ರೀತಿಯ ಆಯ್ಕೆಗಳಿಲ್ಲ. ಬಹುಕಾಲ ಲಾಗಿನ್‌ ಮಾಡದೆ ಓಪನ್‌ ಮಾಡಿದರೆ ನಿಮ್ಮ ಖಾತೆಗಳು ನಿಷ್ಕ್ರಿಯಗೊಂಡಿರುತ್ತವೆ.

ಕೆಲವು ದಿನಗಳ ಹಿಂದಷ್ಟೆ ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ ಅವರನ್ನು ಟ್ವಿಟರ್‌ ನೂತನ ಸಿಇಒ ಆಗಿ ಇಲಾನ್‌ ಮಸ್ಕ್‌ ನೇಮಿಸಿದ್ದರು.

ಇತರ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್ ಹಾಗೂ ಇನ್‍ಸ್ಟಾಗ್ರಾಮ್‌ಗೆ ಸಮಾನವಾದ ವೈಶಿಷ್ಟ್ಯ ಗಳನ್ನು ಪರಿಚಯಿಸುವ ಸಲುವಾಗಿ ಮೊಬೈಲ್‌ ನಂಬರ್‌ ಇಲ್ಲದೆ ವಿಡಿಯೋ ಕಾಲ್ ಹಾಗೂ ವಾಯ್ಸ್ ಕರೆಗಳನ್ನು ಮಾಡುವ ಸೌಲಭ್ಯವನ್ನು ಟ್ವಿಟರ್‌ ಒದಗಿಸಲು ಮುಂದಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಂದ್ರಯಾನ -3 : ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರ್ಪಡೆ

ಚಂದ್ರಯಾನ- 3 ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ ಎಂದು ಭಾರತೀಯ...

ವಾಟ್ಸಾಪ್ ಸ್ಟೇಟಸ್ ಹಾಕುವಾಗ ಎಚ್ಚರವಿರಲಿ: ಬಾಂಬೆ ಹೈಕೋರ್ಟ್ ಸಲಹೆ

ವಾಟ್ಸಾಪ್ ಬಳಕೆದಾರರಿಗೆ ಬಾಂಬೆ ಹೈಕೋರ್ಟ್ ಮಹತ್ವದ ಸಂದೇಶವನ್ನು ನೀಡಿದೆ. ಸಾಮಾಜಿಕ ಮಾಧ್ಯಮದ...

ಟ್ವಿಟರ್‍‌ಗೆ ಹೊಸ ಲೋಗೋ : ನೆಟ್ಟಿಗರು ಶಾಕ್!

ಟ್ವಿಟರ್‌ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್‌ ಆ್ಯಪ್‌ ಲೋಗೋ ಹಾಗೂ ಬ್ರಾಂಡ್‌...

ಟ್ವಿಟರ್‌ ಹಕ್ಕಿಗೆ ಶೀಘ್ರ ಗುಡ್‌ಬೈ; ಚೀನಾ ಆ್ಯಪ್‌ ಸ್ವರೂಪ ನೀಡಲು ಮುಂದಾದ ಮಸ್ಕ್

ಟ್ವಿಟರ್‌ ಸಂಸ್ಥೆಯ ಮಾಲೀಕ ಎಲಾನ್‌ ಮಸ್ಕ್‌ ಆ್ಯಪ್‌ ಲೋಗೋ ಹಾಗೂ ಬ್ರಾಂಡ್‌...