ಸಂಸತ್ ಭವನ ಉದ್ಘಾಟನೆ ರಾಷ್ಟ್ರಪತಿ ಮಾಡಬೇಕು, ಪ್ರಧಾನಿಯಲ್ಲ; ವಿಪಕ್ಷಗಳ ಟೀಕೆ

Date:

ಹೊಸ ಸಂಸತ್ ಭವನ ನಿರ್ಮಾಣ ಪ್ರಧಾನಿಯವರ ಖಾಸಗಿ ಸ್ನೇಹಿತರ ಹಣದಿಂದ ನಡೆದಿಲ್ಲ, ಇದು ಸಾರ್ವಜನಿಕ ಹಣ ಬಳಸಿದ ಸರ್ಕಾರಿ ಯೋಜನೆಯಾಗಿರುವ ಕಾರಣ ಉದ್ಘಾಟನಾ ಸಮಾರಂಭದಲ್ಲಿ ಸಂವಿಧಾನದ ಘನತೆ ಉಳಿಸಿಕೊಳ್ಳಬೇಕು ಎಂದು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿವೆ.

ದೇಶದ ಹೊಸ ಸಂಸತ್ ಭವನ ಪ್ರಧಾನ ಮಂತ್ರಿ ಅಥವಾ ಬಿಜೆಪಿಯ ಸ್ವಂತ ಯೋಜನೆಯಲ್ಲ, ಅದು ಸರ್ಕಾರದ ಯೋಜನೆಯಾಗಿರುವ ಕಾರಣ ರಾಷ್ಟ್ರಪತಿಯವರೇ ಅದನ್ನು ಉದ್ಘಾಟಿಸಬೇಕು ಎನ್ನುವ ವಿಪಕ್ಷಗಳ ವಾದವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ (ಮೇ 21) ಬೆಂಬಲಿಸಿದ್ದಾರೆ.

ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಬಗ್ಗೆ ಟ್ವಿಟರ್‌ನಲ್ಲಿ ಟೀಕಿಸಿರುವ ರಾಹುಲ್ ಗಾಂಧಿ, “ಹೊಸ ಸಂಸತ್ ಭವನ ಉದ್ಘಾಟನೆ ರಾಷ್ಟ್ರಪತಿಯವರು ಮಾಡಬೇಕೇ ವಿನಾ ಪ್ರಧಾನಿಯಲ್ಲ” ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೇ 28ರಂದು ಹೊಸ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಲೋಕಸಭೆಯ ಕಾರ್ಯಾಲಯ ಗುರುವಾರ ಘೋಷಿಸಿತ್ತು. “ಆತ್ಮನಿರ್ಭರ ಭಾರತದ ನಿರ್ಮಾಣವನ್ನು ಸೂಚಿಸುವ ಹೊಸ ಸಂಸತ್ ಭವನದ ನಿರ್ಮಾಣ ಪೂರ್ಣಗೊಂಡಿದೆ” ಎಂದು ಕಾರ್ಯಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.

ವಿವಾದಾತ್ಮಕ ಹಿಂದುತ್ವವಾದಿ ನಾಯಕ ವಿ ಡಿ ಸಾವರ್ಕರ್ ಜನ್ಮದಿನಾಚಣೆ ಅಂಗವಾಗಿ ಮೇ 28ರಂದು ಬಿಜೆಪಿ ಸರ್ಕಾರ ಸಂಸತ್ ಭವನವನ್ನು ಉದ್ಘಾಟಿಸುತ್ತಿರುವುದು ದೇಶದ ಸಂಸ್ಥಾಪಕರಿಗೆ ತೋರಿದ ಅತಿದೊಡ್ಡ ಅಗೌರವ ಎಂದು ಕಾಂಗ್ರೆಸ್ ಇದಕ್ಕೆ ಮೊದಲು ಟೀಕಿಸಿತ್ತು. “ನಮ್ಮ ದೇಶದ ಸಂಸ್ಥಾಪಕರಿಗೆ ದೊಡ್ಡ ಅವಹೇಳನವಾಗಿದೆ. ಗಾಂಧಿ, ನೆಹರು, ಪಟೇಲ್, ಬೋಸ್ ಮೊದಲಾಗಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ತಿರಸ್ಕರಿಸಲಾಗಿದೆ. ಡಾ ಅಂಬೇಡ್ಕರ್‌ ಅವರನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿದ್ದರು.

ಇತರ ವಿಪಕ್ಷಗಳೂ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯವರಿಗೆ ಆಹ್ವಾನ ನೀಡದೆ ಅವಹೇಳನ ಮಾಡಿರುವ ಬಗ್ಗೆ ಟೀಕಿಸಿದ್ದವು. ಆರ್‌ಜೆಡಿ ನಾಯಕ ಮನೋಜ್ ಕುಮಾರ್ ಟ್ವೀಟ್ ಮಾಡಿ, “ಗೌರವಾನ್ವಿತ ರಾಷ್ಟ್ರಪತಿಯವರು ಸಂಸದ್ ಭವನ ಉದ್ಘಾಟಿಸಬೇಕಲ್ಲವೆ? ಅದಕ್ಕಿಂತ ಹೆಚ್ಚೇನನ್ನೂ ಹೇಳಲು ಬಯಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ?: ಕೇಜ್ರಿವಾಲ್ ನಿಯಂತ್ರಿಸಲು ‘ಸುಪ್ರೀಂ’ ಆದೇಶ ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿದ ಮೋದಿ ಸರ್ಕಾರ

ಸಿಪಿಐ ನಾಯಕ ಡಿ ರಾಜ ಅವರೂ, “ಸ್ವಯಂ ಇಮೇಜ್ ಕುರಿತ ಹುಚ್ಚು, ಕ್ಯಾಮರಾಗಳ ಮುಂದೆ ಪೋಸ್ ಕೊಡುವಾಗ ಘನತೆ ಬಿಡುವುದು ಮತ್ತು ನಿಯಮಗಳನ್ನು ತೊರೆಯುವುದು ಮೋದಿಯವರಿಗೆ ಹೊಸತೇನಲ್ಲ. ಪ್ರಧಾನಿ ರಾಷ್ಟ್ರದ ಶಾಸಕಾಂಗದ ಮುಖ್ಯಸ್ಥರು ಮತ್ತು ಸಂಸತ್ತು ಶಾಸನಸಭೆಯ ಅಂಗ. ಹೀಗಿರುವಾಗ ರಾಷ್ಟ್ರದ ಮುಖ್ಯಸ್ಥರಾಗಿರುವ ದ್ರೌಪದಿ ಮುರ್ಮು ಅವರು ಹೊಸ ಸಂಸತ್ತನ್ನು ಉದ್ಘಾಟಿಸುವುದು ಸೂಕ್ತವೆನಿಸುತ್ತಿತ್ತು” ಎಂದು ಟ್ವೀಟ್ ಮಾಡಿದ್ದರು.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವಾಸಿ ಅವರೂ ಟ್ವೀಟ್ ಮಾಡಿ, “ಪ್ರಧಾನಿ ಶಾಸನಸಭೆಯ ಮುಖ್ಯಸ್ಥರೇ ವಿನಾ ಆಡಳಿತವಲ್ಲ. ನಮ್ಮಲ್ಲಿ ಅಧಿಕಾರದ ಸ್ಪಷ್ಟ ಪ್ರತ್ಯೇಕತೆಯಿದೆ. ಗೌರವಾನ್ವಿತ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಸಂಸತ್ ಭವನ ಉದ್ಘಾಟಿಸಬೇಕು. ಇದನ್ನು ಸಾರ್ವಜನಿಕ ಹಣದಿಂದ ನಿರ್ಮಿಸಲಾಗಿದೆ. ಪ್ರಧಾನಿಯವರು ತಮ್ಮ ಸ್ನೇಹಿತರ ಖಾಸಗಿ ಹಣದಿಂದ ಸಂಸತ್ ಭವನ ನಿರ್ಮಿಸಿದಂತೆ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತರು ಉಳಿವಿಗಾಗಿ ಬಿಜೆಪಿ ಸೋಲಿಸಬೇಕು; ರೈತ ಮುಖಂಡರ ತೀರ್ಮಾನ

ರಾಜ್ಯದ ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಉಳಿಯಬೇಕು, ಸಾಮಾಜಿಕ ನ್ಯಾಯ, ಕೋಮು...

ಚಿಕ್ಕಬಳ್ಳಾಪುರ | ಸ್ಟೌ ಸ್ಪೋಟವಾಗುವುದಿಲ್ಲ ಎಂಬ ಕನಿಷ್ಠ ಜ್ಞಾನವೂ ವಿಪಕ್ಷಗಳಿಗಿಲ್ಲ: ಸಚಿವ ಸುಧಾಕರ್‌

ನನ್ನ ಬಗ್ಗೆ ವಿಮರ್ಶೆ ಮಾಡಲು 'ಉಡುಗೊರೆ' ಬಿಟ್ಟರೆ ಇನ್ಯಾವುದೇ ವಿಷಯ ಇಲ್ಲ 'ಬೌದ್ಧಿಕ...

ಚಾಮರಾಜನಗರ | ನಾಲ್ವರ ಮೇಲೆ ಕಾಡಾನೆ ದಾಳಿ; ಇಬ್ಬರು ಬಾಲಕರ ಸ್ಥಿತಿ ಗಂಭೀರ

ದೇವಸ್ಥಾನದ ಬಳಿ ಮಲಗಿದ್ದ ವೇಳೆ ದಾಳಿ ಮಾಡಿರುವ ಕಾಡಾನೆ ಜಾತ್ರೆ ಹಿನ್ನೆಲೆ ದೇವಸ್ಥಾನದ...

‘ಆರ್‌ಆರ್‌ಆರ್‌’ ತಮಿಳು ಸಿನಿಮಾ; ಟೀಕೆಗೆ ಗುರಿಯಾದ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಅವರ ಹೇಳಿಕೆಗೆ ನೆಟ್ಟಿಗರ ಆಕ್ರೋಶ ʼಆರ್‌ಆರ್‌ಆರ್‌ʼ ಬಾಲಿವುಡ್‌ ಸಿನಿಮಾ ಎಂದಿದ್ದ...