ಜಗದೀಶ್ ಶೆಟ್ಟರ್ ಸಾವು ಬಯಸುವ ಈಶ್ವರಪ್ಪ ಚಿರಂಜೀವಿಯೇ : ಕಾಂಗ್ರೆಸ್ ಪ್ರಶ್ನೆ

Date:

  • ಈಶ್ವರಪ್ಪ ನೂರ್ಕಾಲ ಬದುಕಿರಲಿ ಎಂದ ಕಾಂಗ್ರೆಸ್
  • ಶೆಟ್ಟರ್‌ ಅವರನ್ನು ಟಾರ್ಗೆಟ್‌ ಮಾಡಿಲ್ಲವೆಂದ ಈಶ್ವರಪ್ಪ

ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ನಲ್ಲಿಯೇ ಸಾಯಲಿ ಎಂದಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರೇನು ಚಿರಂಜೀವಿಯೇ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಬಗ್ಗೆ ಹೇಳಿಕೆ ನೀಡಿದ್ದ ಈಶ್ವರಪ್ಪ, “’ಜಗದೀಶ ಶೆಟ್ಟರ್ ಅವರನ್ನು ಬಿಜೆಪಿಗೆ ವಾಪಸ್ ಬರುವಂತೆ ಕರೆದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಅವರು ಅಲ್ಲಿಯೇ ಇದ್ದು ಸಾಯಲಿ” ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಜಗದೀಶ್ ಶೆಟ್ಟರ್ ಅವರ ಸಾವನ್ನು ಬಯಸುತ್ತಿರುವ ಈಶ್ವರಪ್ಪನವರೇನು ಚಿರಂಜೀವಿಯೇ?” ಎಂದು ಪ್ರಶ್ನಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಲಿಂಗಾಯತ ನಾಯಕರೊಬ್ಬರನ್ನು ‘ಸಾಯಲಿ’ ಎಂದು ಹೇಳುವಷ್ಟು ಲಿಂಗಾಯತರ ಮೇಲೆ ದ್ವೇಷ ಏಕೆ ಬಿಜೆಪಿಗೆ? ಬಿಜೆಪಿ ಅಕ್ಷರಶಃ ದ್ವೇಷವನ್ನೇ ಉಸಿರಾಡುತ್ತಿದೆ, ಅದೇ ಅವರ ನೈಜ ಸಂಸ್ಕೃತಿ, ಸಂಪ್ರದಾಯಗಳು” ಎಂದು ವ್ಯಂಗ್ಯವಾಡಿದೆ.

“ನಾವು ಈಶ್ವರಪ್ಪ ಅವರು ನೂರ್ಕಾಲ ಬದುಕಿರಲಿ ಎಂದು ಹಾರೈಸುತ್ತೇವೆ” ಎನ್ನುವ ಮೂಲಕ ಕಾಂಗ್ರೆಸ್ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಮೀಕ್ಷೆ | ಬಿಜೆಪಿಗೆ ನಿದ್ರಾಭಂಗ; ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು

ಹುಬ್ಬಳಿ ಪ್ರಚಾರ ವಿಷಯವಾಗಿ ಮಾತನಾಡಿದ್ದ ಈಶ್ವರಪ್ಪ, “ನಾವು ಶೆಟ್ಟರ್ ಅವರನ್ನು ಟಾರ್ಗೆಟ್ ಮಾಡಿಲ್ಲ. ನಾವೆಲ್ಲರೂ ವಿವಿಧೆಡೆ ಪ್ರಚಾರಕ್ಕೆ ಹೋಗುವಂತೆ ಹುಬ್ಬಳ್ಳಿಯಲ್ಲೂ ಪ್ರಚಾರ ಮಾಡುತ್ತಿದ್ದೇವೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ | ದೇಶದ ಹಿರಿಯ ಎಸ್‌ಪಿ ಸಂಸದ ಶಫೀಕುರ್ ರೆಹಮಾನ್ ಬರ್ಕ್ ನಿಧನ

ದೇಶದ ಹಿರಿಯ ಸಂಸದರಾಗಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಕುರ್...

ಬಾಬಾ ರಾಮ್‌ದೇವ್‌ ಮಾಲೀಕತ್ವದ ಪತಂಜಲಿಯ ಜಾಹೀರಾತಿಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ? ಸುಪ್ರೀಂ ಕೋರ್ಟ್‌ ಗರಂ ಸುಪ್ರೀಂ...

ಮಧ್ಯ ಪ್ರದೇಶ | ಕೆಲಸ ಕಳೆದುಕೊಳ್ಳುವ ಭಯ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ...

ಮಾಲೆಗಾಂವ್‌ ಪ್ರಕರಣ | ವಿಚಾರಣೆಗೆ ಬಾರದಿದ್ದರೆ ಕ್ರಮ; ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್‌ಗೆ ಕೋರ್ಟ್‌ ಎಚ್ಚರಿಕೆ

"ಒಂದೋ ವಿಚಾರಣೆಗೆ ಹಾಜರಾಗಿ, ಇಲ್ಲವೇ ಸೂಕ್ತ ಕ್ರಮ ಎದುರಿಸಲು ಸಿದ್ಧರಾಗಿ"...ಹೀಗಂತ ಹೇಳಿದ್ದು...