ಪಾಕಿಸ್ತಾನ | ಭೂಕಂಪಕ್ಕೆ 12 ಮಂದಿ ಬಲಿ, 200ಕ್ಕೂ ಅಧಿಕ ಮಂದಿಗೆ ಗಾಯ

Date:

ಮಂಗಳವಾರ ರಾತ್ರಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಫ್ಘಾನಿಸ್ತಾನದ ಈಶಾನ್ಯದಲ್ಲಿ ಪಾಕಿಸ್ತಾನದ ಗಡಿಯ ಸಮೀಪವಿರುವ ಪರ್ವತ ಪ್ರದೇಶ ಭೂಕಂಪದ ಕೇಂದ್ರಬಿಂದುವಾಗಿತ್ತು. ರಿಕ್ಟರ್‌ ಮಾಪಕದಲ್ಲಿ 6.6 ತೀವ್ರತೆ ದಾಖಲಾದ ಕಂಪನದಿಂದಾಗಿ ಕಟ್ಟಡಗಳು ಬಿರುಕುಬಿಟ್ಟಿದ್ದು, ಜನರು ಭಯಭೀತರಾಗಿ ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿದ್ದಾರೆ. ದೂರದ ಹಳ್ಳಿಗಳಲ್ಲಿಯೂ ಸಹ ಜನರನ್ನು ಭಯಭೀತಗೊಳಿಸಿದೆ.

“ಭೂಮಿಯು ಕಂಪಿಸಿದ್ದು ಭಯಾನಕ ಅನುಭವ. ನನ್ನ ಜೀವನದಲ್ಲಿ ಹಿಂದೆಂದೂ ಈ ರೀತಿಯ ನಡುಕವನ್ನು ಅನುಭವಿಸಿರಲಿಲ್ಲ” ಎಂದು ಕಾಬೂಲ್ ನಿವಾಸಿ ಖತೇರಾ ಎಂಬುವವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ದೆಹಲಿಯಲ್ಲೂ ಕಂಪಿಸಿದ ಭೂಮಿ

ದೇಶದ ರಾಜಧಾನಿ ದೆಹಲಿ, ಎನ್‌ಸಿಆರ್‌, ನೋಯ್ಡಾ, ಗುರುಗಾಂವ್ ಸೇರಿದಂತೆ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ 10.20ರ ವೇಳೆಗೆ ಭೂಕಂಪನದ ಅನುಭವವಾಗಿತ್ತು. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿದೆ.

ದೆಹಲಿ ಸೇರಿದಂತೆ ಪಶ್ಚಿಮ ಉತ್ತರ ಪ್ರದೇಶ, ಹರಿಯಾಣದ ಹಲವು ಪ್ರದೇಶಗಳಲ್ಲಿ ಮತ್ತು ಏಷ್ಯಾ ರಾಷ್ಟ್ರಗಳಾದ ತುರ್ಕಮೆನಿಸ್ತಾನ್, ಕಝಕಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನ, ಚೀನಾ ಹಾಗೂ ಕಿರ್ಗಿಸ್ತಾನ್ ಸೇರಿದಂತೆ ಹಲವು ದೇಶದಲ್ಲಿ ಭೂಕಂಪನ ವರದಿಯಾಗಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರದೇಶ | ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಕೇಂದ್ರ ಸಚಿವರ ಕತೆ ಏನು?

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ...

ಮಧ್ಯಪ್ರದೇಶ | ಸತತ ಏಳು ಬಾರಿ ಒಂದೇ ಕ್ಷೇತ್ರದಲ್ಲಿ ಗೆದ್ದಿದ್ದ ವಿಪಕ್ಷ ನಾಯಕನಿಗೆ ಹಿನ್ನಡೆ!

ಮಧ್ಯಪ್ರದೇಶ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಜಿತು ಪಟ್ಟಾರಿ ಅವರು ರೌ ಕ್ಷೇತ್ರದಲ್ಲಿ ಹಿನ್ನಡೆ...

ಮಧ್ಯಪ್ರದೇಶ | ಕಾಂಗ್ರೆಸ್‌ಗಿಂತ ಬಿಜೆಪಿ ಪ್ರಚಾರ ಭಿನ್ನವಾಗಿದ್ದು ಹೇಗೆ? ಕೇಸರಿ ಪಡೆಯ ಮುನ್ನಡೆಗೆ ಕಾರಣವೇನು?

ಸ್ಥಳೀಯ ಸಮಸ್ಯೆಗಳ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿದ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ತನ್ನ ಚುನಾವಣಾ...

ಮಧ್ಯಪ್ರದೇಶ | ಕಾಂಗ್ರೆಸ್‌ನ ಅಘೋಷಿತ ಸಿಎಂ ಕಮಲ್‌ ನಾಥ್‌ ಯಾರು ಗೊತ್ತೇ?

ಇಂದಿರಾ, ರಾಜೀವ್, ಸೋನಿಯಾ ಮತ್ತು ರಾಹುಲ್ - ಮೂರು ತಲೆಮಾರಿನ ಗಾಂಧಿಯವರೊಂದಿಗೆ...