ಬೀದರ್ | ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ಪ್ರತಿಭಟನೆ ಶುರು

ಕನೇರಿ ಶ್ರೀಗಳ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಭಾನುವಾರ ಆಯೋಜಿಸಿರುವ ‘ಬಸವಾದಿ ಶಿವ ಶರಣರ ಬೃಹತ್ ಹಿಂದೂ ಸಮಾವೇಶ’ ವಿರೋಧಿಸಿ ಚಲೋ ಬಸವಕಲ್ಯಾಣ ಹೋರಾಟ ಸಮಿತಿ, ಸೌಹಾರ್ದ ಕರ್ನಾಟಕ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬಸವಕಲ್ಯಾಣದ ಬಂಗ್ಲಾದ ರಾಷ್ಟ್ರೀಯ ಹೆದ್ದಾರಿ ಸಮೀಪ ಬೆಳಿಗ್ಗೆ 10:30 ಗಂಟೆಗೆ ಜಮಾಯಿಸಿದ ಬಸವ ಅನುಯಾಯಿಗಳು ಬಸವಾದಿ ಶರಣರ ಹಿಂದೂ ಸಮಾವೇಶ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಸವ ಮಹಾದ್ವಾರ ಸಮೀಪದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಶುರುವಾಗಿದೆ. … Continue reading ಬೀದರ್ | ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ಪ್ರತಿಭಟನೆ ಶುರು