ಮೂಡಿಗೆರೆ

ಚಿಕ್ಕಮಗಳೂರು | ಎರಡು ವರ್ಷದಿಂದ ಗ್ರಾ.ಪಂ. ಉಪಾಧ್ಯಕ್ಷನಲ್ಲೇ ಉಳಿದ ಅಂಗನವಾಡಿ ಶೌಚಾಲಯದ ಬೀಗದ ಕೀಲಿ!

ಅಂಗನವಾಡಿ ಶೌಚಾಲಯದ ಬೀಗದ ಕೀಲಿ ಎರಡು ವರ್ಷದಿಂದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಕೈಯಲ್ಲೇ ಉಳಿದಿದ್ದು, ಮಕ್ಕಳಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಾಗಿದೆ. ಮಕ್ಕಳು ಶೌಚಾಲಯಕ್ಕೆ ಹೋಗಬೇಕೆಂದರೆ ಆ ಕಾಡಿನ ಮಧ್ಯೆ ಹಾಗೂ ಹಸಿರು...

ಮೂಡಿಗೆರೆ | ‘ಪುನರ್ವಸತಿ ಕಲ್ಪಿಸಲಾಗದಿದ್ದರೆ ದಯಾಮರಣ ಕೊಡಿ’ ಎಂದ ಮಂಡಗುಳಿಯ ನಿವಾಸಿಗಳು

ಮಲೆನಾಡು ಎಂದರೆ ಹಚ್ಚ ಹಸಿರಿನಿಂದ ಕೂಡಿರುವ ಕಾಡು, ಗುಡ್ಡ ಬೆಟ್ಟಗಳಿಂದ ಕಂಗೊಳಿಸುತ್ತಿವೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಇಲ್ಲಿನ ವಾಸ ಮಾಡುತ್ತಿರುವ ಕಾಡಂಚಿನ ಜನರ ಪರಿಸ್ಥಿತಿ ಮಾತ್ರ ಹೇಳತೀರದ್ದಾಗಿದೆ. ಚಿಕ್ಕಮಗಳೂರು ಜಿಲ್ಲೆಯ...

ಚಿಕ್ಕಮಗಳೂರು | ಶಾಲೆಗಳಿಗೆ ಬಿಇಒ ಭೇಟಿ; ಕಿರುಗುಂದ ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಆಹಾರ ದಾಸ್ತಾನು ಪತ್ತೆ

ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ ಚಂದ್ರ ಅವರು ಮಂಗಳವಾರ ಹಲವು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಚ್‍ಪಿಎಸ್ ಶಾಲೆಯೊಂದರ ಕಂಪ್ಯೂಟರ್ ಕೊಠಡಿಯಲ್ಲಿ ಆಹಾರ ದಾಸ್ತಾನು ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಿರುಗುಂದ...

ಚಿಕ್ಕಮಗಳೂರು | ಎಸ್ಟೇಟ್ ಮಾಲೀಕನಿಂದ ವಿಶೇಷ ಚೇತನ ಮಹಿಳೆಯ ಅಂಗಡಿ ಧ್ವಂಸ

ಕಾಫಿ ಎಸ್ಟೇಟ್ ಬಳಿಯ ರಸ್ತೆ ಬದಿಯಲ್ಲಿ ವಿಶೇಷ ಚೇತನ ಮಹಿಳೆ ಇಟ್ಟಿದ್ದ ಪೆಟ್ಟಿಗೆ ಅಂಗಡಿಯನ್ನು ಎಸ್ಟೇಲ್ ಮಾಲೀಕ ಧ್ವಂಸಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬಕ್ಕಿ ಗ್ರಾಮದಲ್ಲಿ ವಿಶೇಷ ಚೇತನ...

ಚಿಕ್ಕಮಗಳೂರು | ಅನೈತಿಕ ಪೊಲೀಸ್‌ಗಿರಿ: ಯುವತಿಗೆ ಚಾಕ್ಲೆಟ್ ಕೊಟ್ಟದ್ದಕ್ಕೆ ಯುವಕನ ಮೇಲೆ ಹಲ್ಲೆ; ನಾಲ್ವರ ಬಂಧನ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಮಂಗಳವಾರ ಸಂಜೆ ನೈತಿಕ ಪೊಲೀಸ್‌ಗಿರಿ ಪ್ರಕರಣ ನಡೆದಿರುವುದು ವರದಿಯಾಗಿದೆ. ಯುವತಿಗೆ ಚಾಕ್ಲೆಟ್ ಕೊಟ್ಟದ್ದಕ್ಕೆ ಮುಸ್ಲಿಂ ಯುವಕನೋರ್ವನ ಮೇಲೆ ಗುಂಪೊಂದು ‌ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಮಂಗಳವಾರ ಸಂಜೆ...

ಚಿಕ್ಕಮಗಳೂರು | ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆ 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ನಿಂಗನಾಯಕ್(57) ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡೂರು ಮೂಲದ ನಿಂಗನಾಯಕ್ ಕಳೆದ...

ಚಿಕ್ಕಮಗಳೂರು | ಅಕ್ರಮ ಭೂ ಮಂಜೂರಾತಿ ಪ್ರಕರಣ; ಸ್ವಯಂ ಪ್ರೇರಿತ ದೂರು ದಾಖಲು

ಚಿಕ್ಕಮಗಳೂರು ಜಿಲ್ಲೆಯಲ್ಲಿನ ಅಕ್ರಮ ಭೂ ಮಂಜೂರಾತಿ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಅಕ್ರಮದ ಸಂಬಂಧ ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಮೂಡಿಗೆರೆ ಮತ್ತು ಕಡೂರು ತಾಲೂಕಿನಲ್ಲಿ ನಡೆದಿದ್ದ ಅಕ್ರಮ...

ಚಿಕ್ಕಮಗಳೂರು | ಭೂಹಗರಣ ಹೆಚ್ಚಳ; ಕಡತ ವಿಚಾರಣೆ ವೇಳೆ 750 ಎಕರೆ ಅಕ್ರಮ ಜಮೀನು ಪತ್ತೆ

ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಭೂಹಗರಣ ಹೆಚ್ಚಾಗಿದ್ದು, ಸಾವಿರಾರು ಎಕರೆ ಜಮೀನು ಭೂಗಳ್ಳರ ಪಾಲಾಗುತ್ತಿದೆ. ಇದೀಗ ಎಚ್ಚೆತ್ತಿರುವ ಅಧಿಕಾರಿಗಳು ಭೂ ಒತ್ತುವರಿಯ ಜಾಲಾಟಕ್ಕೆ ಇಳಿದ್ದಿದ್ದು, ಸಕ್ರಮವನ್ನು ಅಕ್ರಮ ಮಾಡಿ ಮೋಸ ಮಾಡಿ ಭೂಹಗರಣ ನಡೆಸಿರುವ...

ಚಿಕ್ಕಮಗಳೂರು | ಪಟ್ಟಣ ಪಂಚಾಯತಿ ನಿರ್ಲಕ್ಷ್ಯ; ತಾವೇ ಗುಂಡಿ ಮುಚ್ಚಿದ ಯುವಕರು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆ. ವಾಹನ ಸವಾರರು ದಿನವಿಡೀ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಬೇಸತ್ತ ಮೂಡಿಗೆರೆಯ ಛತ್ರ ಮೈದಾನದ ಸದಸ್ಯರ ತಂಡ ಸ್ವಂತ...

ಚಿಕ್ಕಮಗಳೂರು | ಹಿರಿಯ ರಾಜಕಾರಣಿ ಡಿ.ಬಿ ಚಂದ್ರೇಗೌಡ ಇನ್ನಿಲ್ಲ

ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಅವರು ಸೋಮವಾರ ಮಧ್ಯರಾತ್ರಿ ಕೊನೆ ಉಸಿರೆಳೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತಮ್ಮೂರು ದಾರದಹಳ್ಳಿಯಲ್ಲಿ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ಮಂಗಳವಾರ...

ಚಿಕ್ಕಮಗಳೂರು | ರಸ್ತೆ ಮಧ್ಯೆ ಹಸುವಿಗೆ ಢಿಕ್ಕಿ ಹೊಡೆದ ಬೈಕ್ ಸವಾರ; ವ್ಯಕ್ತಿ ಮೇಲೆ ಹರಿದ ಗ್ಯಾಸ್ ಲಾರಿ

ಹಸುವಿಗೆ ಬೈಕ್ ಢಿಕ್ಕಿಯಾಗಿ ರಸ್ತೆಗೆ ಬಿದ್ದ ಪರಿಣಾಮ ವೇಗವಾಗಿ ಚಲಿಸುತ್ತಿದ್ದ ಗ್ಯಾಸ್ ಲಾರಿ ಬೈಕ್ ಸವಾರನ ಮೇಲೆ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ...

ಚಿಕ್ಕಮಗಳೂರು | ಕಂದಕಕ್ಕೆ ಉರುಳಿದ ಖಾಸಗಿ ಬಸ್;‌ ಮಹಿಳೆ ಸಾವು, ಹಲವರಿಗೆ ಗಾಯ

ಬೆಂಗಳೂರಿನಿಂದ ಹೊರನಾಡಿಗೆ ಹೊರಟಿದ್ದ ಖಾಸಗಿ ಬಸ್‌ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಸ್ಕೆಬೈಲ್ ಸಮೀಪ ರಸ್ತೆ ಬದಿಯ ಕಂದಕಕ್ಕೆ ಉರುಳಿದ್ದು, ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರಿನ ಯಲಹಂಕದ ನಿವಾಸಿ ಸುರೇಖಾ(45)...

ಈ ಹೊತ್ತಿನ ಪ್ರಮುಖ ಸುದ್ದಿ