ಶಿವಮೊಗ್ಗ

ಹವಾಮಾನ | ರಾಜ್ಯದಲ್ಲಿ ಮುಂದಿನ 24 ಗಂಟೆಯೊಳಗೆ ಗಾಳಿ ಸಹಿತ ಮಳೆ ಸೂಚನೆ

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡಿನ ಹಲವೆಡೆ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ ಮತ್ತು...

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ: ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿದ ಕೆಪಿಸಿಎಲ್‌

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಪ್ರಸ್ತಾಪಕ್ಕೆ ಹೈಕೋರ್ಟ್‌ ತಡೆಯಾಜ್ಞೆ ಬೆನ್ನಲ್ಲೇ, ಕೆಪಿಸಿಎಲ್ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದೆ. ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಯನ್ನು ಸುಮಾರು ಶೇ. 30ರಷ್ಟು ಕಡಿಮೆ ಮಾಡಿ 96.33 ಎಕರೆಗಳಿಗೆ ಇಳಿಸಲಾಗಿದೆ...

ಶಿವಮೊಗ್ಗ | ಗಾಂಧೀಜಿ ಶಾಂತಿ ತತ್ವವನ್ನು ದೇಶಕ್ಕೆ ಕೊಡುಗೆಯಾಗಿಸಿದ್ದಾರೆ: ಡಾ. ಪ್ರಹ್ಲಾದಪ್ಪ

ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಿದೆ. ಮಹಾತ್ಮ ಗಾಂಧೀಜಿ ಅವರು ಶಾಂತಿಯ ತತ್ವ ದೇಶಕ್ಕೆ ಕೊಡುಗೆಯಾಗಿಸಿ ಹೋಗಿದ್ದಾರೆ. ಅವರ ಕನಸಿನ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಭಾರತಕ್ಕೆ ಅಮೂಲ್ಯ ದೃಷ್ಟಿಕೋನವನ್ನು...

ತೀರ್ಥಹಳ್ಳಿ | ಗುಡ್ಡ ಕುಸಿತ: ಮಗು ಸೇರಿ ಮೂವರ ಸಾವು, ಕೂಲಿಗಾಗಿ 4 ದಿನದ ಹಿಂದಷ್ಟೇ ಊರು ಬಿಟ್ಟಿದ್ದ ಕುಟುಂಬ

ದುಡಿಮೆ ಅರಸಿ ಹೋಗಿದ್ದ ಕೊಪ್ಪಳದ ಕುಟುವೊಂದು ಪ್ರಕೃತಿ ವಿಕೋಪಕ್ಕೆ ಪ್ರಾಣ ತೆತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಬಡ ಕುಟುಂಬವೊಂದು ಸಮಾಧಿಯಾಗಿದೆ. ತಾವು ವಾಸವಿದ್ದ ಶೆಡ್ ಮೇಲೆ ಗುಡ್ಡ...

ಶಿವಮೊಗ್ಗ | ಮಳೆ ಆರ್ಭಟಕ್ಕೆ ಗುಡ್ಡ ಕುಸಿತ; ಮಗು ಸೇರಿ ಮೂವರ ದುರ್ಮರಣ

ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿದು ಮಗು ಸೇರಿ ಒಂದೇ ಕುಟುಂಬದ ಮೂವರು ಕಾರ್ಮಿಕರು ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ನಡೆದಿದೆ. ತಡರಾತ್ರಿ ಸುಮಾರು...

ತೀರ್ಥಹಳ್ಳಿ | ನಾಬಳ ಸೇತುವೆ ಜಲಾವೃತ: ಒಂದೇ ಕುಟುಂಬದ 7 ಮಂದಿಯ ರಕ್ಷಣೆ

ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಬಳ ಸೇತುವೆಯ ಮೇಲೆ ನೀರು ರಭಸದಿಂದ ಹರಿದು ಬಂದ ಪರಿಣಾಮ ಒಂದೇ ಕುಟುಂಬದ ಏಳು ಜನರಿದ್ದ ಕಾರು ನೀರಿನಲ್ಲಿ ಸಿಲುಕಿಕೊಂಡಿದೆ, ಅಪಾಯದ ಮುನ್ಸೂಚನೆಯರಿತ ಸ್ಥಳೀಯರು...

ಶಿವಮೊಗ್ಗ | ಲಂಚ ಕೇಳಿದ ವಸತಿ ಶಾಲೆ ಪ್ರಿನ್ಸಿಪಾಲ್‌ ಲೋಕಾಯುಕ್ತ ಬಲೆಗೆ

ಶಿವಮೊಗ್ಗ ಜಿಲ್ಲೆಯ ಹುಣಸೇಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್ ನಾಮದೇವ ಅವರು ತರಗತಿಗೆ ವಿದ್ಯಾರ್ಥಿನಿಯನ್ನು ದಾಖಲಿಸಿಕೊಳ್ಳಲು 20,000 ರೂಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಲೆಗೆ ಡ್ರಮ್ ಸೆಟ್ ಬೇಕೆಂಬ...

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: NBWL ತಿರಸ್ಕಾರದ ಬೆನ್ನಲ್ಲೇ ನಿಯಾಸ್ ಹೊಸ ವರದಿ

ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ನಿರ್ಮಿಸುವ ಪ್ರಸ್ತಾಪವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ತಿರಸ್ಕರಿಸಿದ ಬೆನ್ನಲ್ಲೇ ಸರ್ಕಾರವು ಯೋಜನೆಗೆ ಅನುಮೋದನೆ ನೀಡುವುದರ ಜೊತೆಗೆ ಕಾನೂನು ತಿದ್ದುಪಡಿ ಶಿಫಾರಸು ಮಾಡುವ...

ಲಕ್ಕವಳ್ಳಿ | ಭದ್ರಾ ನೀರು ಕುಡಿಯುವ ಬಳಕೆಗೆ ಮೀಸಲು: ರೈತರಲ್ಲಿ ಹೆಚ್ಚಿದ ಆತಂಕ

ಲಕ್ಕವಳ್ಳಿಯ ಭದ್ರಾ ಜಲಾಶಯದ ನೀರು ಕುಡಿಯಲು ಮಾತ್ರ ಬಳಸುವಂತೆ ಶಿವಮೊಗ್ಗ ಜಿಲ್ಲಾಡಳಿತ ಸೂಚಿಸಿದೆ. ಮುಂಗಾರು ಕೊರತೆಯ ಪರಿಣಾಮ ಜಲಾಶಯದ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯ...

ಶಿವಮೊಗ್ಗ | ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ. ವಂಚನೆ: ಓರ್ವ ಆರೋಪಿ ಬಂಧನ, ಉಳಿದವರಿಗೆ ಶೋಧ

ನಕಲಿ ಚಿನ್ನಾಭರಣಗಳನ್ನು ಅಸಲಿ ಚಿನ್ನವೆಂದು ನಂಬಿಸಿ ವಿವಿಧ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಲ್ಲಿ ಅಡಮಾನ ಇಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಬೃಹತ್ ಜಾಲವನ್ನು ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸರು ಭೇದಿಸಿದ್ದು,...

ಜುಲೈ 11ಕ್ಕೆ ರೈತ ಸಂಘಟನೆಗಳಿಂದ ಬಿಡದಿ ಚಲೋ ಚಳವಳಿ: ಕೆ ಟಿ ಗಂಗಾಧ‌ರ್

'ಬಿಡದಿಯಲ್ಲಿ ನಡೆಯುತ್ತಿರುವ ರೈತರ ಭೂ ಸ್ವಾಧೀನ ವಿರೋಧಿ ಹೋರಾಟವನ್ನು ಬೆಂಬಲಿಸುವುದಕ್ಕಾಗಿ ರೈತ ಸಂಘಟನೆಗಳ ಸಾಮೂಹಿಕ ನಾಯಕತ್ವದೊಂದಿಗೆ ಜುಲೈ 11ರಂದು 'ಬಿಡದಿ ಚಲೋ' ಚಳವಳಿ ಹಮ್ಮಿಕೊಳ್ಳಲಾಗಿದೆ' ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು...

ಶಿವಮೊಗ್ಗ | ತುಂಗಾ ಏತ ನೀರಾವರಿ ಸ್ಥಗಿತ: ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ ಸರ್ಕಾರಕ್ಕೆ ರೈತ ಸಂಘ ಒತ್ತಾಯ

ವಿದ್ಯುತ್ ಬಿಲ್ ಬಾಕಿ ಇರುವ ಕಾರಣ ತುಂಗಾ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರನ್ನು ಹರಿಸಲು ಆಗುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ಲನ್ನು ನೀಡಿ ನೀರು ತುಂಬಿಸಲು ಅವಕಾಶ...

ಈ ಹೊತ್ತಿನ ಪ್ರಮುಖ ಸುದ್ದಿ