ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಾಯಿ ಆದಿಲಕ್ಷ್ಮಮ್ಮ(85) ಶನಿವಾರ ರಾತ್ರಿ ಅನಾರೋಗ್ಯದ ಕಾರಣ
ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೇರಿದಂತೆ ನಾಲ್ಕು ಗಂಡು ಒಂದು ಹೆಣ್ಣು ಮಕ್ಕಳನ್ನು ಆಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ತಾಲೂಕಿನ ಗೂಳೂರು ಹೋಬಳಿ ಗ್ರಾಮದ ಚಿನ್ನಕಾಯಿಲಪಲ್ಲಿ ಗ್ರಾಮದ ತೋಟದಲ್ಲಿ
ಸಹಸ್ರಾರು ಜನರ ಹಾಗೂ ಮುಖಂಡರ ಸಮ್ಮುಖದಲ್ಲಿ ನೆರವೇರಿತು.
ಇದನ್ನು ಓದಿದ್ದೀರಾ..? ಬಾಗೇಪಲ್ಲಿ | ಎಸ್. ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟ ರಾಜ್ಯಕ್ಕೆ 4ನೇ ಟಾಪರ್ ಆದ ಬಾಗೇಪಲ್ಲಿ ಯಶಸ್ವಿನಿ
ಬಾಗೇಪಲ್ಲಿ ಪಟ್ಟಣದ ಶಾಸಕರ ಗೃಹದಲ್ಲಿ ಭಾನುವಾರ ಸಾರ್ವಜನಿಕರ ಮೃತರ ಅಂತಿಮ ದರ್ಶನದಲ್ಲಿ ರಾಜ್ಯ ಉಗ್ರಾಣ
ನಿಗಮದ ಅಧ್ಯಕ್ಷ ಎನ್.ಸಂಪಂಗಿ,ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್.ಶಿಡ್ಲಘಟ್ಟ ಶಾಸಕ
ರವಿಕುಮಾರ್.ಮಾಲೂರು ಶಾಸಕ ಕೆ.ವೈ.ನಂಜೇಗೌಡ,ಕೇಂದ್ರ ಮಾಜಿ ಸಚಿವ ಡಾ.ಎಂ.ವೀರಪ್ಪಮೊಯಿಲಿ,ಜಿಲ್ಲಾಧಿಕಾರಿ ಜಿ.ಪ್ರಭು,ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ನವೀನ್ಭಟ್,ಜಿಲ್ಲಾ ರಕ್ಷಣಾದಿಕಾರಿ ಕುಶಾಲ್ ಚೌಕ್ಸಿ,ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರಿದ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ,ಚಿಮೂಲ್ ಅಧ್ಯಕ್ಷ ವಿ.ಮಂಜುನಾಥಡ್ಡಿ,ತಾಲೂಕು ಗ್ಯಾರೆಂಟಿ ಯೋಜನಾಧಿಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷ ಹೆಚ್.ಎಸ್.ನರೇಂದ್ರ,ಕೆಡಿಪಿ ಮಾಜಿ ಸದಸ್ಯ ಅಮರನಾಥರೆಡ್ಡಿ,ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು,ಬಾಗೇಪಲ್ಲಿ ತಹಸೀಲ್ದಾರ್ ಮನೀಷ್ಎ ನ್.ಪತ್ರಿ,ಗುಡಿಬಂಡೆ ತಹಸೀಲ್ದಾರ್ ಸಿಬ್ಗುತುಲ್ಲಾ,ಚೇಳೂರು ತಹಸೀಲ್ದಾರ್ ಬಿ.ಕೆ.ಶ್ವೇತ,ತಾಪಂಇಒಗಳಾ ಜಿ.ವಿ.ರಮೇಶ್,ನಾಗಮಣಿ,ಪೊಲೀಸ್ ನಿರೀಕ್ಷಕ ಆಜಯ್ ಸಾರಥಿ, ದರ್ಶನವನ್ನು ಪಡೆದರು.

