ಮಿಜೋರಾಂ | ಝೆಡ್‌ಪಿಎಂಗೆ ಬಹುಮತ: ಇಂದಿರಾ ಭದ್ರತಾ ಉಸ್ತುವಾರಿಯಾಗಿದ್ದವ ನೂತನ ಸಿಎಂ !

Date:

Advertisements

ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಒಟ್ಟು 40 ಕ್ಷೇತ್ರಗಳಲ್ಲಿ ಝೆಡ್‌ಪಿಎಂ 27 ಕ್ಷೇತ್ರಗಳು ಗೆಲ್ಲುವುದರೊಂದಿಗೆ ಸ್ಪಷ್ಟ ಬಹುಮತ ಸಾಧಿಸಿದೆ.

ಆಡಳಿತಾರೂಢ ಎಂಎನ್ಎಫ್ 10 ಸ್ಥಾನಗಳಲ್ಲಿ ಜಯ ಗಳಿಸಿದೆ. ಉಳಿದಂತೆ ಕಾಂಗ್ರೆಸ್ 1 ಹಾಗೂ ಬಿಜೆಪಿ 2 ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿವೆ.

ಹಾಲಿ ಮುಖ್ಯಮಂತ್ರಿ ಝೋರಂತಂಗಾ ಅವರು ಐಜ್ವಾಲ್ ಪೂರ್ವ-1 ಕ್ಷೇತ್ರದಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ಝೆಡ್‌ಪಿಎಂ) ನಾಯಕ ಲಾಲ್ತನ್ಸಂಗ ವಿರುದ್ಧ 2,101 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಮಿಜೋರಾಂ ಉಪಮುಖ್ಯಮಂತ್ರಿ ತೌನ್ಲುಯಾ ಕೂಡ ಟುಯಿಚಾಂಗ್ನಲ್ಲಿ ಸೋಲುವುದರೊಂದಿಗೆ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.

ಸೋಲಿನ ಬೆನ್ನಲ್ಲೇ ಮಿಜೋರಾಂ ಹಾಲಿ ಸಿಎಂ ಝೋರಂತಂಗಾ ಅವರು ಇಂದು ಸಂಜೆ 4 ಗಂಟೆ ನಂತರ ಗಂಟೆಗೆ ರಾಜ್ಯಪಾಲ ಹರಿ ಬಾಬು ಕಂಬಂಪತಿ ಅವರನ್ನು ಭೇಟಿ ಮಾಡಲಿದ್ದು, ರಾಜೀನಾಮೆ ನೀಡಲಿದ್ದಾರೆಂದು ವರದಿಗಳು ತಿಳಿಸಿವೆ.

ಝೆಡ್‌ಪಿಎಂ ಮುಖ್ಯಸ್ಥ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸರ್ಚಿಪ್‌ನಿಂದ ಗೆಲುವು ಸಾಧಿಸಿದ್ದಾರೆ. ಎಂಎನ್ಎಫ್‌ನ ಜೆ ಮಲ್ಸಾಮ್ಜುವಾಲಾ ವಂಚವಾಂಗ್ ಅವರನ್ನು 2,982 ಮತಗಳಿಂದ ಸೋಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸಿನ ಚಳಿ ಬಿಡಿಸಲಿದೆಯೇ ಬಿಜೆಪಿ?

ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿದ್ದವ ಈಗ ನೂತನ ಸಿಎಂ       

ಝೆಡ್‌ಪಿಎಂ ಮುಖ್ಯಸ್ಥ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರ ರಾಜಕೀಯ ಜೀವನ ಒಂದು ಹೋರಾಟದ ಹಾದಿಯಾಗಿದೆ. ಐಪಿಎಸ್‌ ಅಧಿಕಾರಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭದ್ರತಾ ಅಧಿಕಾರಿ, ಕಾಂಗ್ರೆಸ್ ಸಂಸದ ಸೇರಿದಂತೆ ಇನ್ನು ಹಲವು ಬದುಕಿನ ದಾರಿಗಳು ಲಾಲ್ದುಹೋಮ ಅವರದ್ದಾಗಿದೆ.

74 ವರ್ಷದ ಲಾಲ್ಡುಹೋಮ ಅವರು ಎಪ್ಪತ್ತರ ದಶಕದಲ್ಲಿಯೇ ಐಪಿಎಸ್‌ ಅಧಿಕಾರಿಯಾಗಿ ಗೋವಾ ರಾಜ್ಯದ ಕೇಡರ್‌ ಆಗಿ ಸೇರ್ಪಡೆಗೊಂಡರು. ಅವರ ಸೇವೆ ಗುರುತಿಸಿದ ಅಂದಿನ ಕೇಂದ್ರ ಸರ್ಕಾರ ಅವರನ್ನು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಭದ್ರತಾ ಅಧಿಕಾರಿಯನ್ನಾಗಿ ನೇಮಿಸಿತ್ತು.

ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರಿಂದ ಐಪಿಎಸ್‌ ಹುದ್ದೆಗೆ ಎಂಬತ್ತರ ದಶಕದಲ್ಲಿಯೇ ರಾಜೀನಾಮೆ ನೀಡಿದರು. ಆನಂತರ 1984ರಲ್ಲಿ ಮಿಜೋರಾಂನಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು.

ಆದರೆ ಕೆಲವೇ ಸಮಯದಲ್ಲಿ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹತೆ ಎದುರಿಸಿದ ಮೊದಲ ಸಂಸದರಾಗಿ ಲಾಲ್ದುಹೋಮ ಅವರ ರಾಜಕೀಯ ಹಾದಿ ಮಹತ್ವದ ತಿರುವು ಪಡೆಯಿತು. ಪಕ್ಷಾಂತರ ನಿಷೇಧ ಕಾಯಿದೆ ಅಡಿ ಶಿಕ್ಷೆಗೆ ಗುರಿಯಾದ ದೇಶದ ಮೊದಲ ಸಂಸದರು ಇವರಾದರು. ಆದರೆ ಮಿಜೋರಾಂನಲ್ಲಿ ಶಾಂತಿ ಹೋರಾಟವನ್ನು ಮುಂದುವರೆಸಿದರು.

ಜೋರಾಮ್‌ ನ್ಯಾಷನಲ್‌ ಪಾರ್ಟಿ ಸ್ಥಾಪನೆ

1997ರಲ್ಲಿ ಜೋರಾಮ್‌ ನ್ಯಾಷನಲ್‌ ಪಾರ್ಟಿಯನ್ನು ಲಾಲ್ಡುಹೋಮ ಆರಂಭಿಸಿ ವಿಧಾನಸಭೆಗೆ ಆಯ್ಕೆಯಾದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಲಿಲ್ಲ. ಆನಂತರ ಇದನ್ನು ಜೋರಾಮ್‌ ಪೀಪಲ್ಸ್‌ ಮೂವ್ ಮೆಂಟ್‌ ಎಂದು ಬದಲಿಸಿ 2018ರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಎರಡನೇ ಬಾರಿವೂ ತಾವೂ ಎರಡು ಕಡೆ ಗೆದ್ದರೂ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದರು.

ಆದರೆ ಅವರ ಪಕ್ಷಕ್ಕೆ ಮಾನ್ಯತೆ ಇಲ್ಲದ್ದರಿಂದ ಪಕ್ಷೇತರ ಶಾಸಕರಾಗಿ ಲಾಲ್ಡುಹೋಮ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಲಾಯಿತು. ಇದು ಸರಿಯಲ್ಲವೆಂದು ಪಕ್ಷಾಂತರ ಕಾಯಿದೆಯಡಿ ರಾಜ್ಯ ಸರ್ಕಾರ ದೂರು ನೀಡಿತ್ತು. ಇದರಿಂದಾಗಿ ಎರಡನೇ ಬಾರಿಗೆ ಪಕ್ಷಾಂತರ ಕಾಯಿದೆಯಡಿ ಮತ್ತೆ ಸ್ಥಾನ ಕಳೆದುಕೊಂಡರು.

ನ್ಯಾಯಾಲಯದ ಮೊರೆ ಹೋಗಿ ಮರು ಚುನಾವಣೆ ಎದುರಿಸಿ ಗೆದ್ದು ಬಂದರು. ಇದಾದ ಬಳಿಕ ಎಂಎನ್‌ಎಫ್‌ ಆಡಳಿತದ ವಿರುದ್ದ ಸದನದ ಹೊರಗೆ ಹಾಗೂ ಸಾರ್ವಜನಿಕರೊಂದಿಗೆ ಹೋರಾಟ ಮಾಡಿಕೊಂಡು ಬಂದ ಲಾಲ್ಡುಹೋಮ ಈ ಬಾರಿ ಭಾರೀ ಅಂತರದೊಂದಿಗೆ ಜಯಗಳಿಸಿ ಮುಖ್ಯಮಂತ್ರಿಯಾಗಲಿದ್ದಾರೆ. ನಾಲ್ಕು ದಶಕದ ಕನಸು ಈಗ ನನಸಾಗಲಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಾತಿ ಧರ್ಮ ಭಾಷೆಗಳ ಸಂಘರ್ಷ ತಡೆಗೆ ಗಾಂಧೀಜಿ ದಾರಿ ಮುಖ್ಯ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ʼʼಜಾತಿ,ಧರ್ಮಗಳ, ಮಧ್ಯೆ, ಭಾಷೆ ಮತ್ತು ಪ್ರದೇಶಗಳ ಮಧ್ಯೆ ವೈಷಮ್ಯ ಮಾಡಿಕೊಂಡು ಸಂಘರ್ಷ...

ಒಳ ಮೀಸಲಾತಿ | ಎಐಸಿಸಿ ಹಸ್ತಕ್ಷೇಪಕ್ಕೆ ಹೆಚ್ಚಿದ ಆಗ್ರಹ, ದೆಹಲಿ ಬಿಡದಿರಲು ಅಲೆಮಾರಿ ಸಂಸತ್ತು ತೀರ್ಮಾನ

ಒಳ ಮೀಸಲಾತಿ ವಿತರಣೆಯಲ್ಲಿ ಕರ್ನಾಟಕದ ಅಸ್ಪೃಶ್ಯ ದಲಿತ ಅಲೆಮಾರಿ ಸಮುದಾಯಗಳಿಗೆ ಆಗಿರುವ...

RSSಅನ್ನು ‘ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಕೋಮುವಾದಿ ಸಂಸ್ಥೆ’ ಎಂದಿದ್ದರು ಗಾಂಧಿ

ಆರ್‌ಎಸ್‌ಎಸ್‌ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆರ್‌ಎಸ್‌ಎಸ್‌ಅನ್ನು ಹೊಗಳಿರುವ ಪ್ರಧಾನಿ ಮೋದಿ ಅವರು,...

Download Eedina App Android / iOS

X