ವಿಜಯಪುರ | ‘ಅಪ್ಪು ಎಕ್ಸ್‌ಪ್ರೆಸ್‌’ ಆ್ಯಂಬುಲೆನ್ಸ್‌ಗೆ ಚಾಲನೆ

0
219

ನಟ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ನಟ ಪ್ರಕಾಶ್‌ ರಾಜ್ ಅವರ ಪ್ರಕಾಶ್‌ ರಾಜ್ ಫೌಂಡೇಷನ್‌ ವಿಜಯಪುರ ಆಸ್ಪತ್ರೆಗೆ ‘ಅಪ್ಪು ಎಕ್ಸ್‌ಪ್ರೆಸ್‌’ ಆ್ಯಂಬುಲೆನ್ಸ್‌ ಒದಗಿದ್ದಾರೆ. ಇದು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆಎಂದು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ, ಫಾದರ್ ಟಿಯೊಲ್ ಮಚಾದೊ ಹೇಳಿದ್ದಾರೆ.

ವಿಜಯಪುರದಲ್ಲಿ ಆ್ಯಂಬುಲೆನ್ಸ್‌ಗೆ ಚಾಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪ್ರಕಾಶ್ ರಾಜ್ ಫೌಂಡೇಶನ್ ಹಾಗೂ ಕೆವಿಎನ್‌ ಸಂಸ್ಥೆಯಿಂದ ಆ್ಯಂಬುಲೆನ್ಸ್‌ಗೆ ಚಾಲನೆ ಸಿಕ್ಕಿರುವುದು ಬಡ ಜನರಿಗೆ ನೆರವಾಗಲಿದೆ. ದೇಶದಲ್ಲಿ ಎಷ್ಟೋ ಜನಗಳಿಗೆ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್‌ ಸಿಗುವುದಿಲ್ಲ. ವೈದ್ಯರು ಸಿಗುವುದಿಲ್ಲ. ಅಪ್ಪು ಎಕ್ಸ್‌ಪ್ರೆಸ್‌ ಬಂದಿರುವುದರಿಂದ ದೂರದ ಹಳ್ಳಿಯವರಿಗೂ ಅನುಕೂಲವಾಗಲಿದೆ” ಎಂದರು.

ಅಪ್ಪು ಎಕ್ಸ್‌ಪ್ರೆಸ್‌ ಆ್ಯಂಬುಲೆನ್ಸ್‌ ಸೇವೆಗಾಗಿ 9844786108 ನಂಬರ್‌ಗೆ ಕರೆ ಮಾಡಬಹುದು ಎಂದು ತಿಳಿಸಿದರು.

Advertisements

ಚಾಲನಾ ಕಾರ್ಯಕ್ರಮದಲ್ಲಿ ಫಾದರ್ ಫ್ರಾನ್ಸಿಸ್ ಮ್ಯಾನೆಜಸ್, ಡಾ. ಜಿಲಾನಿ ಅವಟಿ,ಸಿಸ್ಟರ್, ಶಾಂತಿ, ಸಿಸ್ಟರ್ ಅಮುಲಾ ಇತರರು ಇದ್ದರು.

LEAVE A REPLY

Please enter your comment!
Please enter your name here