ಯಾದಗಿರಿ ಜಿಲ್ಲೆಯ ರೈತರಿಗಾಗಿ ಉತ್ತಮ ಬೇಸಾಯ ಕಾರ್ಯಕ್ರಮಗಳ ವಾರ್ಷಿಕ ಸಮ್ಮೇಳನವನ್ನು ನಗರದ ಎನ್.ವಿ.ಎಂ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಉತ್ತಮ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡ ರೈತರಿಗೆ ಸನ್ಮಾನ ಮಾಡಿ, ಪ್ರಶಸ್ತಿ ವಿತರಿಸಿ ರೈತರನ್ನು ಪ್ರೋತ್ಸಾಹಿಸಲಾಯಿತು.
ಕಲಿಕೆ ಟಾಟಾ ಟ್ರಸ್ಟ್ಸ್, ಟೆಸ್ಕೋ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾಲಯ ರಾಯಚೂರು ಹಾಗೂ ಪಶು ಸಂಗೋಪನೆ ಇಲಾಖೆ ಸಹಯೋಗದಲ್ಲಿ, ಜೀವನೋಪಾಯ ಕಾರ್ಯಕ್ರಮ ವತಿಯಿಂದ ಉತ್ತಮ ಬೇಸಾಯ ಕಾರ್ಯಕ್ರಮಗಳ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಕೃಷಿ ನಿರ್ದೇಶಕರು ಸುನಿಲ್ ಕುಮಾರ್, ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆಗಳ ಬಗ್ಗೆ ಮತ್ತು ರೈತರು ಕೃಷಿಯಲ್ಲಿ ಹೊಸ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿನ್ನು ಪಡೆಯುವ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಯಾದಗಿರಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅಜ್ಮುದ್ದೀನ್, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವಿವಿಧ ಯೋಜನೆಗಳ ಬಗ್ಗೆ ಹಾಗೂ ತರಹೇವಾರಿ ತರಕಾರಿ ಬೆಳೆಗಳನ್ನು ಬೆಳೆಯುವುದರಿಂದ ರೈತರ ಆದಾಯದಲ್ಲಿ ಬದಲಾವಣೆ ತರುವುದು ಸಾಧ್ಯ ಎಂದು ರೈತರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅತಿಥಿಗಳಾದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕೀಟಶಾಸ್ತ್ರಜ್ಞರು ಡಾ. ಸೋಮಶೇಖರ್, ಹಿಂಗಾರು ಹಂಗಾಮಿನ ಶೇಂಗಾ ಬೆಳೆಯಲ್ಲಿ ಕೀಟ ನಿರ್ವಹಣೆ ಮತ್ತು ರೋಗ ನಿರ್ವಹಣೆ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಲಿಕೆ ಟಾಟಾ ಟ್ರಸ್ಟ್ಸ್, ಟೆಸ್ಕೋ ಕಾರ್ಯಕ್ರಮ ವತಿಯಿಂದ ವಿವಿಧ ಉತ್ತಮ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡ ರೈತರಿಗೆ ಸನ್ಮಾನ ಮಾಡಿ ರೈತರಿಗೆ ಪ್ರಶಸ್ತಿಯನ್ನು ವಿತರಣೆ ಮಾಡಲಾಯಿತು.
ಪಶುಪಾಲನಾ ವೈದ್ಯ ಅಧಿಕಾರಿಗಳು ಡಾ.ಪ್ರಜ್ವಲ್ ವಡಗೇರ, ಆಡುಸಾಕಾಣಿಕೆ ಮಾಡುವುದರಿಂದ ರೈತರು ಹೆಚ್ಚಿನ ಲಾಭಪಡೆಯಬಹುದು, ಮತ್ತು ಪಶುಗಳಿಗೆ ಬರುವ ರೋಗಗಳ ಬಗ್ಗೆ ಮತ್ತು ಅದರ ಹತೋಟಿಯ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಗ್ರಾಮಿಣ ಜೀವನೂಪಾಯ ಮಿಷನ್ ಯಾದಗಿರಿ ಜಿಲ್ಲೆಯ ಕಾರ್ಯಕ್ರಮ ವ್ಯವಸ್ಥಾಪಕ ಕಾಶಿನಾಥ, ರೈತ ಮಹಿಳಾ ಗುಂಪುಗಳ ಬಲವರ್ಧನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮ ದಲ್ಲಿ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ್, ಶಾಂತುಗೌಡ ಬಿರಾದಾರ, ಸಂಪತ್, ಅನುರಾಧಾ, ಸುಧಾರಾಣಿ, ಹಸನ್, ಅರುಣ್ ಗುಬ್ಬಿ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ, ಕುಮಾರ್.ಎಸ್, ತುಮಕೂರು, ಕೃಷ್ಣ, ಶಿವರಾಜ, ರಫಿ, ಸ್ಯಾಂಡಿ ಉಳ್ಳೆಸೂಗೂರು, ಮಾಂತೇಶ್, ಹಣಮಂತ, ಬೀರಲಿಂಗ, ಭೀಮಶಂಕರ್, ಸೈದಪ್ಪ, ಮಲ್ಲೇಶ್, ಸಲೀಂ ಬಾಲಪ್ಪ, ಶಂಕರ್ ಇನ್ನೀತರರು ಉಪಸ್ಥಿತರಿದ್ದರು.