ವಿಜಯನಗರ | ರೈತ ವಿರೋಧಿ ಕೇಂದ್ರ ಬಜೆಟ್ ಖಂಡಿಸಿ ರೈತ ಸಂಘ ಪ್ರತಿಭಟನೆ

Date:

Advertisements

ರೈತ ವಿರೋಧಿ ಕೇಂದ್ರ ಬಜೆಟ್ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಫೆ.16ರಂದು ವಿಜಯನಗರ-ಹೊಸಪೇಟೆಯಲ್ಲಿ ಬೃಹತ್ ರೈತ-ಕಾರ್ಮಿಕರು ಪ್ರತಿಭಟನೆ ನಡೆಸಿದೆ.

ಕೃಷಿ ರಂಗ ಸೇರಿದಂತೆ ದೇಶದ ಎಲ್ಲ ಕ್ಷೇತ್ರಗಳನ್ನು ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸುವ, ವಿವೇಚನಾ ರಹಿತ ಖಾಸಗೀಕರಣಕ್ಕೆ ಒಳಪಡಿಸುವ, ನಿರುದ್ಯೋಗ, ಬಡತನ ತೀವ್ರಗೊಳಿಸುವ, ರೈತರನ್ನು ದಿವಾಳಿ ಮಾಡುವ, ಗ್ರಾಮೀಣಾಭಿವೃದ್ಧಿ, ಉದ್ಯೋಗ ಖಾತರಿ, ಆಹಾರ ಭದ್ರತೆಗೆ ತೀವ್ರ ಹಣ ಕಡಿತ ಮಾಡಿರುವ ಒಟ್ಟಾರೆಯಾಗಿ ದುಡಿಮೆಗಾರರನ್ನು ಹಿಂಡಿ ಕಾರ್ಪೊರೇಟ್ ತಿಜೋರಿ ತುಂಬಿಸುವ ನರೇಂದ್ರ ಮೋದಿ ನೇತೃತ್ವದ 10ನೇ  ಕೇಂದ್ರ ಬಜೆಟ್ಟನ್ನು ಪ್ರತಿಭಟನಾಕಾರರು ಖಂಡಿಸಿದರು.

ಸತತ ಹತ್ತು ವರ್ಷಗಳ ಕಾರ್ಪೊರೇಟ್ ಪರವಾದ ನೀತಿಗಳಿಂದ ಹಾಗೂ ಕೋವಿಡ್ ಜಾಗತಿಕ ಪಿಡುಗು ,ಆರ್ಥಿಕ ಬಿಕ್ಕಟ್ಟು ಗಳಿಂದ ನೊಂದು ಬಸವಳಿದಿರುವ ಜನರಿಗೆ ಯಾವುದೇ ಪರಿಹಾರ ಒದಗಿಸಲು ಈ ಬಜೆಟ್ ವಿಫಲವಾಗಿದೆ. ಈಗಾಗಲೇ ಹಿಂದೆಂದೂ ಕಾಣದ ನಿರುದ್ಯೋಗ, ಬೆಲೆ ಏರಿಕೆ -ಹಣದುಬ್ಬರ ದಿಂದ ಜೀವನದ ಕನಿಷ್ಠ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿರುವ ಜನರಲ್ಲಿ ಆತ್ಮ ವಿಶ್ವಾಸ ತುಂಬುವ ಬದಲು ವಾಸ್ತವಿಕ ಜನರ ಬದುಕನ್ನು ಕ್ರೂರ ತಮಾಷೆಗೆ ಒಳಪಡಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹೊಸಪೇಟೆ ವಿಜಯನಗರ ಕಟುವಾಗಿ ಟೀಕಿಸುತ್ತದೆ.

ನಕಲಿ ಕಥನ , ಸುಳ್ಳುಗಳ  ಹಾಗೂ ದಾರಿ ತಪ್ಪಿಸುವ ಅಂಕಿ ಅಂಶಗಳ ಬಜೆಟ್ ಭಾಷಣದಲ್ಲಿ ಸತತವಾಗಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯ ವಾಸ್ತವವನ್ನು ಮರೆ ಮಾಚಲಾಗಿದೆ.  ಕಳೆದ ಐದು ವರ್ಷಗಳಲ್ಲೇ 2023-24 ರ ವರ್ಷದಲ್ಲಿ ಕೃಷಿ ರಂಗಕ್ಕೆ ಅತಿ ಕಡಿಮೆ ವೆಚ್ಚ ಮಾಡಲಾಗಿದೆ.ಈ ಹಿಂದಿನ ವರ್ಷಕ್ಕೆ ಮಾಡಲಾದ ವೆಚ್ಚದಲ್ಲಿ ಶೇ 22.3 ರಷ್ಟು ಇಳಿಕೆ ಯಾಗಿದ್ದನ್ನು 2024-25 ಕ್ಕೂ ಮತ್ತಷ್ಟು ವೆಚ್ಚ ಇಳಿಕೆಯ ಕ್ರಮವನ್ನೇ ಮುಂದುವರೆಸಲಾಗಿದೆ.

ಕೃಷಿ ಲಾಗುವಾಡುಗಳ ಬೆಲೆ ಏರಿಕೆಗೆ ಅವಕಾಶ ನೀಡುವಂತಹ ಪ್ರಸ್ತಾಪಗಳ ಮೂಲಕ ರೈತಾಪಿ ಕೃಷಿಯನ್ನು ಮತ್ತಷ್ಟು ದುಬಾರಿಗೊಳಿಸಿ ರೈತರನ್ನು ದಿವಾಳಿ ಮಾಡುವ ಕ್ರಮಗಳನ್ನೇ ಈ ಬಜೆಟ್ ನಲ್ಲೂ ಮುಂದುವರೆಸಲಾಗಿದೆ. ಚುನಾವಣಾ ವರ್ಷದಲ್ಲೂ ಕೂಡ ಕೃಷಿ ಗಾಗಲಿ ,ರೈತರಿಗಾಗಲಿ ಯಾವುದೇ ನೆರವು ನೀಡಿಲ್ಲ, ಅದೇ ರೀತಿ ಬೆಲೆ ಏರಿಕೆಯಿಂದ ನೊಂದ ಜನಸಾಮಾನ್ಯರಿಗೂ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹೊಸಪೇಟೆ ವಿಜಯನಗರ ಆಕ್ರೋಶ ವ್ಯಕ್ತಪಡಿಸುತ್ತದೆ.

ಕಳೆದ ಹತ್ತು ವರ್ಷಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂ ಗೂ ಹೆಚ್ಚು ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ ದೇಶ ಹಾಗೂ ವಿದೇಶ ಕಾರ್ಪೊರೇಟ್ ಕಂಪನಿಗಳಿಗೆ ಭಾರತವನ್ನೇ ಇಡಿಯಾಗಿ ಮಾರಾಟ ಮಾಡುವ ಈ ಹಿಂದಿನ ವಿವೇಚನಾ ಹೀನ ಖಾಸಗೀಕರಣ ಪ್ರಕ್ರಿಯೆ ಯನ್ನು ಈ ಬಜೆಟ್ ನಲ್ಲೂ ಕೂಡ ಮುಂದುವರೆಸಿದ್ದು ಸುಮಾರು ಐವತ್ತು ಸಾವಿರ ಕೋಟಿ ರೂ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ವಲಯದ ಖಾಸಗೀಕರಣ ಕ್ಕೆ ಉತ್ತೇಜನ ನೀಡಲು, ಖಾಸಗಿ ಕಂಪನಿಗಳಿಗೆ ಸಾಲ ಒದಗಿಸುವ ಒಂದು ಲಕ್ಷ ಕೋಟಿ ಮೀಸಲು ನಿಧಿಯ ಪ್ರಸ್ತಾಪವು ಅತ್ಯಂತ ಆಯಕಟ್ಟಿನ ಮತ್ತು ನಮ್ಮ ದೇಶದ ಸ್ವಾವಲಂಬನೆ ಹಾಗೂ ರಕ್ಷಣಾ ವಿಷಯದಲ್ಲಿ ಮಾಡಿಕೊಂಡಿರುವ ಗಂಭೀರ ರಾಜಿಯಾಗಿದೆ. ಭಾರತೀಯರೆಲ್ಲರಿಗೂ ರಾಮ ಭಜನೆಯ ಹೆಸರಿನಲ್ಲಿ ಕಣ್ಣು ಮುಚ್ವಿಸಿ ,ದೇಶದ ಆರ್ಥಿಕತೆ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣ ವಿದೇಶಿ ಕಾರ್ಪೊರೇಟ್ ಗಳಿಗೆ ತೆರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹೊಸಪೇಟೆ ವಿಜಯನಗರ ತೀವ್ರವಾಗಿ ಖಂಡಿಸುತ್ತದೆ.

ಕಾರ್ಪೊರೇಟ್ ಹಿಂದುತ್ವ ಆಳ್ವಿಕೆಯ ಈ ಜನ ವಿರೋಧಿ ಬಜೆಟ್ ಮುಂದೆ ಬರಲಿರುವ ಪೂರ್ಣ ಪ್ರಮಾಣದ್ ಬಜೆಟ್ ನ ಸ್ವರೂಪದ ಪರಿಚಯ ಮಾಡಿಕೊಟ್ಟಿದ್ದು ,ಸ್ವತಂತ್ರ ಭಾರತದ ಅತಿ ಹೆಚ್ಚು ಕಾರ್ಪೊರೇಟ್  ಪರ ಸರ್ಕಾರವನ್ನು  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹೊಸಪೇಟೆ ವಿಜಯನಗರ ತಿಳಿಸುತ್ತದೆ.

ತೆರಿಗೆ ಪಾಲು ಹಂಚಿಕೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ,ಮೋಸ ವಂಚನೆ ಖಂಡಿಸಿ ರಾಜ್ಯ ಸರ್ಕಾರದ ದೆಹಲಿ ಪ್ರತಿಭಟನೆಗೆ ಕೆಆರ್‌ಆರ್‌ಎಸ್‌ ಬೆಂಬಲ ಸೂಚಿಸಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದಲ್ಲಿ ಸಂಗ್ರಹವಾದ ಜಿಎಸ್ ಟಿ ತೆರಿಗೆ ಪಾಲು, ಅನುಮಾನಗಳನ್ನು ಅನ್ನು ಹಂಚಿಕೆ ಮಾಡುವ ವಿಧಾನವು ಒಕ್ಕೂಟ ತತ್ವ ( ಪೆಡರಿಲಿಸಂ) ಗೆ ವಿರುದ್ದವಾಗಿದ್ದು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ತೀವ್ರವಾದ ಆನ್ಯಾಯ ವೆಸಗಿದೆ. ರಾಜ್ಯದಿಂದ ಪಡೆದ ಪ್ರತಿ ನೂರು ರೂ ಗಳಿಗೆ ಕೇವಲ ಹನ್ನೆರಡು ರೂಗಳನ್ನು ಮಾತ್ರ ನೀಡುತ್ತಿದೆ. ಅದೇ ಬಿಜೆಪಿ ಅಡಳಿತದ ಉತ್ತರ ಪ್ರದೇಶ, ಗುಜರಾತ್ ಗಳಿಗೆ ಪ್ರತಿ ನೂರು ಗಳಿಗೆ —— ರೂಗಳನ್ನು ನೀಡುತ್ತಿದೆ. ಇದು ದೇಶದ ಒಟ್ಟಾರೆ ಅಭಿವೃದ್ಧಿ ಯಲ್ಲಿ ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ ವಿಧಾನ ಅಲ್ಲ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಡುವೆ ಅಪನಂಬಿಕೆ ಹಾಗೂ ಅವಿಶ್ವಾಸ ಮೂಡಿಸುವ ಕ್ರಮ ವಾಗಿದೆ.

ಸಹಕಾರ ಒಕ್ಕೂಟ ತತ್ವದ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತಾನಾಡುವ ಮೋದಿಯವರು ಭಾರತೀಯರನ್ನು ದಕ್ಷಿಣ ಭಾರತ ಮತ್ತು ಉತ್ತರ ಭಾರತ ಎಂದು ತಾರತಮ್ಯ ಸೃಷ್ಟಿಸುತ್ತಿದೆ. ಉತ್ತರ ಭಾರತದ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ದಕ್ಷಿಣ ರಾಜ್ಯಗಳ ತೆರಿಗೆ ಹಣ ವನ್ನು ಅತ್ಯಂತ ಅಸಮರ್ಥನೀಯ ರೀತಿಯಲ್ಲಿ ಬಳಸುತ್ತಿರುವುದು ಸರಿಯಲ್ಲ ಎಂದುಕರ್ನಾಟಕ ರಾಜ್ಯ ರೈತ ಸಂಘ ಹೊಸಪೇಟೆ ವಿಜಯನಗರ ತಿಳಿಸುತ್ತದೆ.

‘ಬಗರ್ ಹುಕಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕ್ರಮ ನಿಲ್ಲಿಸಲು ಆಗ್ರಹ’

ರಾಜ್ಯದಾದ್ಯಂತ ಲಕ್ಷಾಂತರ ಬಡ ಬಗರ್ ಹುಕಂ ಸಾಗುವಳಿದಾರರು ಪಾರಂ ನಂ 50,53 ಹಾಗೂ 57 ರಲ್ಲಿ ಅರ್ಜಿ ಸಲ್ಲಿಸಿ ಭೂಮಿ ಹಕ್ಕಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಭೂಮಿ ಹಕ್ಕು ನೀಡುವ ಯಾವುದೇ ಕ್ರಮ ವಹಿಸದೇ ಬಹುತೇಕ ದಲಿತ ಹಾಗೂ ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವಲ್ಲಿ ವಿಫಲ, ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಬಡ ಬಗರ್ ಹುಕಂ ಸಾಗುವಳಿದಾರರಿಗೆ ಭೂಮಿ ಹಕ್ಕು ಪತ್ರ ಒದಗಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಘೋಷಿಸಿತ್ತು.

ಆದರೆ, ಅಧಿಕಾರಕ್ಕೆ ಬಂದ ನಂತರ ಹಲವಾರು ನೆಪಗಳ ಮೂಲಕ ಬಡ ಸಾಗುವಳಿದಾರರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಕ್ರಮ ಅನುಸರಿಸುತ್ತಿದೆ. ಕೂಡಲೇ ಬಡ ರೈತರನ್ನು ಒಕ್ಕಲೆಬ್ಬಿಸುವ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆ ನೀಡಬೇಕು. ಸರ್ಕಾರಿ ಕಂದಾಯ ಭೂಮಿಗಳ ಅರಣ್ಯ ಇಂಡೀಕರಣ ನಿಲ್ಲಿಸಬೇಕು.

ಅರಣ್ಯ ಇಲಾಖೆಗೆ ಹಸ್ತಾಂತರಿಸಿರುವ ಎಲ್ಲಾ ಸರ್ಕಾರಿ ಕಂದಾಯ ಭೂಮಿಗಳನ್ನು ವಾಪಸು ಪಡೆಯಬೇಕು. ರಾಜ್ಯದಾದ್ಯಂತ ಇರುವ ಸುಮಾರು ನಾಲ್ಕು ಲಕ್ಷ ಎಕರೆ ಸರ್ಕಾರಿ ಬಂಜರು ಭೂಮಿಯನ್ನು ಭೂ ಹೀನ ರೈತ -ಕೃಷಿ ಕೂಲಿಕಾರರಿಗೆ ಹಂಚಬೇಕು ಎಂದು  ಕರ್ನಾಟಕ ರಾಜ್ಯ ರೈತ ಸಂಘ ಹೊಸಪೇಟೆ-ವಿಜಯನಗರ ಆಗ್ರಹಿಸಿದೆ.

ಈ ವೇಳೆ ರೈತ ಸಂಘದ ಜಿಲ್ಲಾ ಮುಖಂಡ ಗಂಟೆ ಸೋಮ ಶೇಖರ್ , ಹಾಗೂ  ಇನ್ನಿತರರು ಹಾಜರಿದ್ದರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

Download Eedina App Android / iOS

X