ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿ ಖರೀದಿಯ ನಫೆಡ್ ಕೇಂದ್ರಗಳ ಮುಂದೆ ಮಹಿಳೆಯರು ರಾತ್ರಿಯೆಲ್ಲಾ ಸರದಿಯ ಸಾಲಿನಲ್ಲಿನಿಂತು ಕಷ್ಟುಪಡುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ಇನ್ನು 2-3 ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲು ನಫೆಡ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಹೆಚ್ಚು ಕೊಬ್ಬರಿ ಖರೀದಿ ಮಾಡಲಾಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆಯೂ ನಾನು ಅಧಿಕಾರಿಗಳಿಗೆ ಸೂಚನೆ ನೀಡಿ, ಹೆಚ್ಚು ಕೊಬ್ಬರಿ ಖರೀದಿಸುವಂತೆ ತಿಳಿಸಿದ್ದೇನೆ ಎಂದರು.
ಕೊಬ್ಬರಿ ಕೇಂದ್ರದ ಬಳಿ ರೈತರು ನೋಂದಣಿ ಮಾಡಿಸಲು ರಾತ್ರಿ ಮತ್ತು ಹಗಲಿನಲ್ಲಿ ಠಿಕಾಣಿ ಹೂಡಿ ಟೋಕನ್ ಪಡೆಯಲು ಹರಸಾಹಸಪಡುತಿದ್ದರು ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕೌಂಟರ್ ತೆರೆಯುವ ನಿರ್ಧಾರ ರೈತರಿಗೆ ವರದಾನವಾಗಲಿದೆ ಎಂದರು.
