ಬೆಂಗಳೂರು | 625 ಅಂಗಡಿಗಳಲ್ಲಿ ಇನ್ನು ಕನ್ನಡ ನಾಮಫಲಕ ಅಳವಡಿಕೆ ಬಾಕಿ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಾದ್ಯಂತ ಇರುವ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಎಂದು ಸರ್ಕಾರ ಆದೇಶಿಸಿದೆ. ಅಲ್ಲದೇ, ನಾಮಫಲಕ ಬದಲಾವಣೆಗೆ ಫೆ.28ರವರೆಗೆ ನೀಡಿದ್ದ ಗಡುವನ್ನು ವಿಸ್ತರಣೆ ಮಾಡಿದೆ. ಕನ್ನಡ ಬಳಕೆ ಮಾಡದಿರುವವರಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಇದೀಗ, “ಬೆಂಗಳೂರಿನ 49,732 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಕನ್ನಡ ಬಳಕೆ ಮಾಡಿ ನಿಯಮ ಪಾಲಿಸಿವೆ. ಇನ್ನು 625 ಅಂಗಡಿಗಳು ನಿಯಮ ಪಾಲಿಸಿಲ್ಲ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬುಧವಾರ ತಿಳಿಸಿದೆ.

ಈ ಬಗ್ಗೆ ಪಾಲಿಕೆ ಮಾಹಿತಿ ನೀಡಿದೆ. ಮಾರ್ಚ್‌ 13ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 50,357 ವಾಣಿಜ್ಯ ಸಂಸ್ಥೆಗಳು 49,732 ತಮ್ಮ ನಾಮಫಲಕಗಳಲ್ಲಿ ಕನ್ನಡ ಬಳಕೆ ಮಾಡಿವೆ. ಇನ್ನು 625 ಕಡೆಗಳಲ್ಲಿ ಕನ್ನಡ ಬಳಕೆ ಮಾಡುವುದು ಬಾಕಿ ಇದೆ ಎಂದು ಬಿಬಿಎಂಪಿಯು ಮಾಹಿತಿ ನೀಡಿದೆ.

  • ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 8,341 ವಾಣಿಜ್ಯ ಮಳಿಗೆಗಳು ಕನ್ನಡ ಬಳಕೆ ಮಾಡಿದ್ದರೇ, ಇನ್ನು 70 ಅಂಗಡಿಗಳು ಶೇ.60 ಇರುವ ಕನ್ನಡ ನಾಮಫಲಕ ಬಳಕೆ ಮಾಡುವುದು ಬಾಕಿ ಇದೆ.
  • ದಾಸರಹಳ್ಳಿ ವಲಯದಲ್ಲಿ ನೋಟಿಸ್ ಪಡೆದ 1548ರ ಮಳಿಗೆಗಳಲ್ಲಿ 1,522 ಅಂಗಡಿಗಳಲ್ಲಿ ಕನ್ನಡ ಅನುಷ್ಠಾನಗೊಂಡಿದೆ. ಇನ್ನು 26 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
  • ಪೂರ್ವ ವಲಯದಲ್ಲಿ 8,634 ಉದ್ದಿಮೆಗಳಿಗೆ ಬಿಬಿಎಂಪಿ ನೋಟಿಸ್ ನೀಡಿತ್ತು. ಇದೀಗ, ಮಾರ್ಚ್ 13ರವರೆಗೆ 8,487 ಮಳಿಗೆಗಳಲ್ಲಿ ಕನ್ನಡ ಬಳಕೆಯ ನಾಮಫಲಕ ಅನುಷ್ಠಾನಗೊಂಡಿದ್ದು, 147 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
  • ಮಹದೇವಪುರ ವಲಯದಲ್ಲಿ ಒಟ್ಟು 5,967 ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿತ್ತು. ಅದರಲ್ಲಿ 5,893 ಅನುಷ್ಠಾನಗೊಂಡಿವೆ. 74 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
  • ರಾಜರಾಜೇಶ್ವರಿ ನಗರ ವಲಯದಲ್ಲಿ 6,537 ಉದ್ದಿಮೆಗಳಲ್ಲಿ 6492 ಅನುಷ್ಠಾನಗೊಂಡಿವೆ. 45 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
  • ದಕ್ಷಿಣ ವಲಯದಲ್ಲಿ 5933 ಉದ್ದಿಮೆಗಳಲ್ಲಿ ಕನ್ನಡ ಅನುಷ್ಠಾನಗೊಂಡಿದೆ. 49 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
  • ಪಶ್ಚಿಮ ವಲಯದಲ್ಲಿ ನೋಟಿಸ್ ಪಡೆದ 7113 ಉದ್ದಿಮೆಗಳಲ್ಲಿ 7074 ಅನುಷ್ಠಾನಗೊಂಡಿವೆ, 39 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.
  • ಯಲಹಂಕ ವಲಯದಲ್ಲಿ ನೋಟಿಸ್ ಪಡೆದ 6165 ಉದ್ದಿಮೆಗಳಲ್ಲಿ 5900 ಅನುಷ್ಠಾನಗೊಂಡಿವೆ. 175 ಉದ್ದಿಮೆಗಳಲ್ಲಿ ಕನ್ನಡ ಕಡ್ಡಾಯ ಬಾಕಿ ಉಳಿದಿವೆ.

ಈ ಸುದ್ದಿ ಓದಿದ್ದೀರಾ? ರಾಜ್ಯದಾದ್ಯಂತ ತಾಪಮಾನ ಹೆಚ್ಚಳ; ಮಳೆ ಮುನ್ಸೂಚನೆ ಸದ್ಯಕ್ಕಿಲ್ಲ

ನಗರದಲ್ಲಿರುವ ಅಂಗಡಿ ಮುಂಗಟ್ಟುಗಳು, ಮಳಿಗೆಗಳು, ಶಾಪಿಂಗ್ ಮಾಲ್‌ಗಳು ಸೇರಿದಂತೆ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಮಾಡಿ ಆದೇಶಿಸಲಾಗಿದೆ. ಕೊನೆ ದಿನವಾಗಿದ್ದ ಫೆಬ್ರುವರಿ 28 ಅನ್ನು ಮಾರ್ಚ್ 15ರವರೆಗೆ ವಿಸ್ತರಣೆ ಮಾಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

Download Eedina App Android / iOS

X