ಜೈಲಿನಿಂದಲೇ ಅರವಿಂದ್ ಕೇಜ್ರಿವಾಲ್ ಅವರ 2ನೇ ಆದೇಶ

Date:

Advertisements

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೊದಲ ಆದೇಶದ ಎರಡು ದಿನಗಳ ನಂತರ, ಜಾರಿ ನಿರ್ದೇಶನಾಲಯದ ಜೈಲಿನಿಂದಲೇ ತಮ್ಮ ಎರಡನೇ ಆದೇಶವನ್ನು ಹೊರಡಿಸಿದ್ದಾರೆ.

ದೆಹಲಿ ಸಚಿವ ಸೌರಭ್ ಭಾರದ್ವಾಜ್ ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಸರ್ಕಾರಿ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಉಚಿತ ಔಷಧಿಗಳು ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಎರಡನೇ ಆದೇಶ ಹೊರಡಿಸಿದ್ದಾರೆ” ಎಂದು ತಿಳಿಸಿದ್ದಾರೆ.

“ಮುಖ್ಯಮಂತ್ರಿಯವರು ಜೈಲಿನಲ್ಲಿದ್ದರೂ ಕೂಡ ದೆಹಲಿಯ ನಿವಾಸಿಗಳು ಯಾವುದೇ ರೀತಿಯ ತೊಂದರೆ ಎದುರಿಸದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಭಾರದ್ವಾಜ್ ಹೇಳಿದರು.

“ದುರ್ಬಲ ವರ್ಗದವರು, ದಲಿತ ಸಮುದಾಯದವರು ಔಷಧಿಗಳನ್ನು ಪಡೆಯಲು ಸರ್ಕಾರಿ ಆಸ್ಪತ್ರೆಗೆ ಹೋದಾಗ, ಅವರಿಗೆ ಔಷಧಿಗಳು ದೊರೆಯಬೇಕು. ಮಧ್ಯಮ ವರ್ಗದವರು ಔಷಧಿಗಳನ್ನು ಖರೀದಿಸಬಹುದು. ಆದರೆ ದೆಹಲಿಯ ಲಕ್ಷಾಂತರ ದೀನದಲಿತ ಕುಟುಂಬಗಳು ಔಷಧಿಗಳಿಗಾಗಿ ಸರ್ಕಾರಿ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ” ಎಂದು ಆರೋಗ್ಯ ಖಾತೆಯ ಉಸ್ತುವಾರಿ ಭಾರದ್ವಾಜ್ ಹೇಳಿದರು.

“ನಿಯಮಿತ ರಕ್ತ ಪರೀಕ್ಷೆಗಳಿಗಾಗಿ ಅನೇಕ ಜನರು ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್‌ಗಳನ್ನು ಅವಲಂಬಿಸಿದ್ದಾರೆ. ಕೆಲವು ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಉಚಿತ ಪರೀಕ್ಷಾ ಸೌಲಭ್ಯದಲ್ಲಿನ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ಬಂದಿದೆ. ಆದ್ದರಿಂದ, ಎಲ್ಲ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳು ಉಚಿತವಾಗಿ ಪರೀಕ್ಷೆಗಳು ಹಾಗೂ ಔಷಧಿಗಳನ್ನು ಒದಗಿಸುತ್ತಿರುವ ಕುರಿತು ಮಾಹಿತಿ ನೀಡುವಂತೆ ನನಗೆ ತಿಳಿಸಿದ್ದಾರೆ. ನಮಗೆ, ಅವರ ನಿರ್ದೇಶನವು ದೇವರ ಆಜ್ಞೆಯಂತಿದೆ. ನಾವೂ ಕೂಡ ಈ ಬಗ್ಗೆ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕೇಜ್ರಿವಾಲ್ ಬಂಧನ ಖಂಡಿಸಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಎಎಪಿ ಸಜ್ಜು; ಹೆಚ್ಚಿದ ಭದ್ರತೆ

“ಕೇಜ್ರಿವಾಲ್ ಜೈಲಿನಲ್ಲಿದ್ದರೂ ಪ್ರತಿ ಕ್ಷಣವೂ ದೆಹಲಿ ನಿವಾಸಿಗಳ ಬಗ್ಗೆ ಯೋಚಿಸುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಯಾವುದೇ ಸೇವೆಗೆ ತೊಂದರೆಯಾಗಬಾರದೆಂಬುದು ಅವರ ಏಕೈಕ ಕಾಳಜಿಯಾಗಿದೆ. ಅವರ ಹೋರಾಟದಲ್ಲಿ ನಾವು ಅವರ ಸೈನಿಕರಿದ್ದಂತೆ. ಹಾಗಾಗಿ ನಾವೂ ಕೂಡಾ ಹಗಲಿರುಳು ಕೆಲಸ ಮಾಡಿ, ದೆಹಲಿ ಜನತೆಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇದೇ ಮೊದಲ ಬಾರಿಗೆ ಭಾರತಕ್ಕೆ ತಾಲಿಬಾನ್ ಸಚಿವರ ಭೇಟಿ; ಐತಿಹಾಸಿಕ ಹೆಜ್ಜೆ

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಖಾನ್ ಮುತ್ತಖಿ...

ದಾವಣಗೆರೆ | ಜಾತಿ ಧರ್ಮ ಭಾಷೆಗಳ ಸಂಘರ್ಷ ತಡೆಗೆ ಗಾಂಧೀಜಿ ದಾರಿ ಮುಖ್ಯ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ʼʼಜಾತಿ,ಧರ್ಮಗಳ, ಮಧ್ಯೆ, ಭಾಷೆ ಮತ್ತು ಪ್ರದೇಶಗಳ ಮಧ್ಯೆ ವೈಷಮ್ಯ ಮಾಡಿಕೊಂಡು ಸಂಘರ್ಷ...

ಒಳ ಮೀಸಲಾತಿ | ಎಐಸಿಸಿ ಹಸ್ತಕ್ಷೇಪಕ್ಕೆ ಹೆಚ್ಚಿದ ಆಗ್ರಹ, ದೆಹಲಿ ಬಿಡದಿರಲು ಅಲೆಮಾರಿ ಸಂಸತ್ತು ತೀರ್ಮಾನ

ಒಳ ಮೀಸಲಾತಿ ವಿತರಣೆಯಲ್ಲಿ ಕರ್ನಾಟಕದ ಅಸ್ಪೃಶ್ಯ ದಲಿತ ಅಲೆಮಾರಿ ಸಮುದಾಯಗಳಿಗೆ ಆಗಿರುವ...

Download Eedina App Android / iOS

X