ಇನ್ಮುಂದೆ ರಾಜಕಾರಣ ಖಂಡಿತ ಕಲಿಯುವೆ: ಪ್ರತಾಪ ಸಿಂಹ ಮಾರ್ಮಿಕ ಹೇಳಿಕೆ

Date:

Advertisements

“ನಾನು ಇದುವರೆಗೂ ರಾಜಕಾರಣ ಕಲಿತಿರಲಿಲ್ಲ. ಹೀಗಾಗಿ ಒಬ್ಬ ರಾಜಕಾರಣಿಯಾಗಿ ನಾನು ಫೇಲ್ ಆಗಿದ್ದೇನೆ. ಆದರೆ, ಇನ್ನು ಮುಂದೆ ಖಂಡಿತ ರಾಜಕಾರಣ ಕಲಿಯುತ್ತೇನೆ” ಎಂದು ಸಂಸದ ಪ್ರತಾಪ್ ಸಿಂಹ ಮಾರ್ಮಿಕವಾಗಿ ಹೇಳಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತ, “ಒಬ್ಬ ರಾಜಕಾರಣಿಯಾಗಿ ನಾನು ಫೇಲ್ ಆಗಿದ್ದರೂ ಒಬ್ಬ ಸಂಸದನಾಗಿ ಸಕ್ಸಸ್ ಆಗಿದ್ದೇನೆ. ರಾಜಕಾರಣಕ್ಕೂ ಅಭಿವೃದ್ಧಿಗೂ ಬಹಳ ವ್ಯತ್ಯಾಸವಿದೆ ಎಂಬುದು ಅರ್ಥವಾಗಿದೆ” ಎಂದರು.

“ರಾಜಕಾರಣಿಯಾದವರು ಕೇವಲ ಚುನಾವಣಾ ಟಿಕೆಟ್‌ಗಾಗಿ ಹೋರಾಟ ಮಾಡಬಾರದು. ಒಳ್ಳೆಯ ಕೆಲಸ ಮಾಡುವುದಕ್ಕಾಗಿ ಹೋರಾಡಬೇಕು. ನಾನು ಕೇವಲ ಕೆಲಸದ ಬಲದಿಂದಲೇ ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಅದೇ ರೀತಿ ನಾಗಾಲೋಟದಿಂದ ಓಡಾಡಿ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ” ಎಂದರು.

“ಜನರು ಎರಡು ಬಾರಿ ಸಂಸದನನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಇವುಗಳ ಮಧ್ಯೆ ರಾಜಕಾರಣ ಇರುತ್ತದೆ ಎಂಬುದು ಅರಿತುಕೊಳ್ಳುವಲ್ಲಿ ನಾನು ಎಡವಿದೆ” ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯ ಟಿಕೆಟ್‌ ಕೈತಪ್ಪಿದೆ. ಇವರ ಬದಲು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧಿಸುತ್ತಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಮೊದಲು ಮನುವ್ಯಾಧಿಗಳ ತಾಳಕ್ಕೆ ಕುಣಿಯದೆ ಕ್ಷೇತ್ರದಲ್ಲಿ ಹಿಂದುಳಿದವರು ದಲಿತರು ತಳವರ್ಗದ ಜನರ ಕಡೆಗೆ ಗಮನ ಕೊಡಿ ಸ್ವಾಭಿಮಾನ ಬಿಡಬಾರದು,,,ನಂತರ ರಾಜಕಾರಣ ಕಲಿತರೆ ಗೌರವವೂ ಸಿಗುವುದು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?

ಅಧಿಕಾರಿಗಳ ಸ್ಥಳ ಪರಿಶೀಲನೆ, ಸಾಂತ್ವನ, ಸ್ಪಂದನೆಗಳು ಕೇವಲ ಕಾಗದಕ್ಕೆ ಸೀಮಿತವಾಗದೆ ರೈತರಿಗೆ...

ಮಳೆ ಹಾನಿ ಪ್ರದೇಶಗಳಿಗೆ ಸಚಿವರು, ಅಧಿಕಾರಿಗಳು ಭೇಟಿ ನೀಡುತ್ತಿಲ್ಲ: ಪ್ರತಿಪಕ್ಷ ನಾಯಕ ಆರ್‌ ಅಶೋಕ

ಮಳೆ ಹಾನಿ ಪ್ರದೇಶಗಳಿಗೆ ಸಚಿವರು, ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಎಲ್ಲರೂ ಜಾತಿ...

ಕೊಪ್ಪಳ | ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ; ಎಲ್ಲ 9 ಆರೋಪಿಗಳು ಖುಲಾಸೆ

ಒಂದು ದಶಕದ ಹಿಂದೆ ರಾಜ್ಯದ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ವಿದ್ಯಾರ್ಥಿ...

Download Eedina App Android / iOS

X