ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಚುನಾವಣೆ ಮತದಾನ ಬಹಿಷ್ಕಾರ ಹಾಕಿದ್ದು, ತಹಸೀಲ್ದಾರ್ ನಡೆಸಿದ ಸಂಧಾನ ಪ್ರಯತ್ನ ವಿಫಲವಾಗಿದೆ.
ಹದಿನೆಂಟು ಜನ ಹುತಾತ್ಮರ ನೆಲವಾದ ಕೋಗನೂರಿಗೆ ಶಿರಹಟ್ಟಿ ತಹಸೀಲ್ದಾರ್ ಭೇಟಿ ಕೊಟ್ಟು. ಚುನಾವಣೆ ಬಹಿಷ್ಕಾರಕ್ಕೆ ಕಾರಣ ತಿಳಿದು, ಗ್ರಾಮಸ್ಥರ ಸಮಸ್ಯೆ ಬಗೆಹರಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು. ಆದರೆ, ಗ್ರಾಮಸ್ಥರು ತಹಸೀಲ್ದಾರರಿಗೆ ನಿಮ್ಮ ಮಾತು ಹೇಗೆ ನಂಬುವುದು? ನಮಗೆ ಮೌಖಿಕ ಪರಿಹಾರದ ಉತ್ತರಬೇಡ. ಖಚಿತವಾದ ಬರದ ಮೂಲಕ ನಮಗೆ ಗ್ಯಾರಂಟಿ ಕೊಡಿ ಎಂದು ಪಟ್ಟು ಹಿಡಿದರು.
ನಂತರ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತುಕತೆ ನಡೆದು ಗ್ರಾಮಸ್ಥರು ಚುನಾವಣೆ ಮತ ಬಹಿಷ್ಕಾರ ಸಂಧಾನಕ್ಕೆ ಒಪ್ಪದಿದ್ದಾಗ, ತಹಸೀಲ್ದಾರರು ಸ್ಥಳದಿಂದ ನಿರ್ಗಮಿಸಿದರು.
