ಅಶ್ಲೀಲವಾಗಿ ಎಡಿಟ್ ಮಾಡಿದ ತಾಯಿ ಫೋಟೋಗಳನ್ನು ಮಗಳಿಗೆ ಕಳುಹಿಸಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಆಕೆಯಿಂದ ನಗ್ನ ಫೋಟೋ ಪಡೆಯುತ್ತಿದ್ದ ಆರೋಪಿಯ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
18 ವರ್ಷ ವಯಸ್ಸಿನ ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾಮುಕನೊಬ್ಬ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಇನ್ಸ್ಟಾಗ್ರಾಂ ಖಾತೆಯೊಂದರಿಂದ ಅಶ್ಲಿಲ್ವಾಗಿ ಎಡಿಟ್ ಮಾಡಲಾದ ಸಂತ್ರಸ್ತೆಯ ತಾಯಿಯ ಫೋಟೋಗಳನ್ನು ಆಕೆಗೆ ಕಳುಹಿಸಿದ್ದಾನೆ.
ನಿನ್ನ ನಗ್ನ ಫೋಟೋಗಳನ್ನು ಕಳಿಸದೇ ಇದ್ದರೇ, ನಿನ್ನ ತಾಯಿಯ ಫೋಟೋಗಳನ್ನು ಎಲ್ಲೆಡೆ ವೈರಲ್ ಮಾಡಿ ನಿನ್ನ ತಾಯಿಯ ಮಾನ ಮರ್ಯಾದೆ ತೆಗೆದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಇದಕ್ಕೆ ಹೆದರಿದ ಯುವತಿ ತನ್ನ ನಗ್ನ ಫೋಟೋಗಳನ್ನು ವಂಚಕನಿಗೆ ಕಳುಹಿಸಿದ್ದಾಳೆ. ಆರೋಪಿ ಬಳಿಕ ಯುವತಿಯ ನಗ್ನ ಫೋಟೋವನ್ನು ತನ್ನ ಸ್ನೇಹಿತರಿಗೆ, ಸೋದರ ಮಾವನಿಗೆ ಶೇರ್ ಮಾಡಿದ್ದಾನೆ. ಕಳೆದ ಆರು ತಿಂಗಳಿನಿಂದ ಅಪರಿಚಿತ ವಂಚಕನೊಬ್ಬ ಯುವತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಎಎಪಿ ಜೊತೆ ಮೈತ್ರಿಗೆ ವಿರೋಧ : ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ
ಈ ಬಗ್ಗೆ ಸಂತ್ರಸ್ತ ಯುವತಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತೆಯ ಪರಿಚಿತರಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ, ಆಕೆಗೆ ಪರಿಚಿತರಿರುವ ಸ್ನೇಹಿತರ ವಿಚಾರಣೆ ಆರಂಭ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.