ಪ್ರವಾಸಕ್ಕೆಂದು ಹೋಗಿದ್ದ ಐವರು ವಿದ್ಯಾರ್ಥಿಗಳು ಕಾವೇರಿ ನದಿಗೆ ಬಿದ್ದಿದ್ದು, ಮೇಲೆ ಬರಲಾರದೆ ಸಾವನ್ನಪ್ಪಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮೇಕೆದಾಟು ಬಳಿ ವಿದ್ಯಾರ್ಥಿಗಳು ಕಾವೇರಿ ನದಿಗೆ ಬಿದ್ದಿದು, ನೀರು ಪಾಲಾಗಿದ್ದಾರೆ. ಮೃತರನ್ನು ಬೆಂಗಳೂರು ಮೂಲದ ಹರ್ಷಿತ, ಅಭಿಷೇಕ್, ತೇಜಸ್, ವರ್ಷ ಹಾಗೂ ಸ್ನೇಹ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳು ಇಂಜಿನಿಯರಿಂಗ್ ಓದುತ್ತಿದ್ದರು. ಐವರೂ ಪ್ರವಾಸಕ್ಕೆಂದು ಮೇಕೆದಾಟುಗೆ ತೆರಳಿದ್ದರು. ನೀರಿನಲ್ಲಿ ಆಟವಾಡುವಾಗಿ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಾತನೂರು ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.