ಬಿಹಾರ ಮತ್ತು ಯುಪಿಯಲ್ಲಿ ‘ಇಂಡಿಯಾ’ದತ್ತ ಮತದಾರರ ಚಿತ್ತ; ರಾಹುಲ್ ಪ್ರತಿಪಾದನೆ

Date:

Advertisements

ಲೋಕಸಭಾ ಚುನಾವಣೆಯ ನಂತರ ಕೈಗಾರಿಕೋದ್ಯಮಿಗಳ ಕುರಿತು ಜಾರಿ ನಿರ್ದೇಶನಾಲಯ (ಇಡಿ) ಕೇಳುವ ಪ್ರಶ್ನೆಗಳ ಬಗೆಗಿನ ವಿಚಾರವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲು ಪ್ರಧಾನಿ ಮೋದಿ, ‘ದೇವರು ನನ್ನನ್ನು ಕಳುಹಿಸಿದ್ದಾನೆ’ ಎಂಬ ಹೇಳಿಕೆ ನೀಡಿದ್ದಾರೆ ಎಂದು ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮೋದಿ, “ನನ್ನ ತಾಯಿ ಜೀವಂತವಾಗಿದ್ದಾಗ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಾನು ನಂಬುತ್ತಿದ್ದೆ. ಅವಳು ತೀರಿಕೊಂಡ ನಂತರ, ನನ್ನ ಎಲ್ಲ ಅನುಭವಗಳನ್ನು ಗಮನಿಸಿದಾಗ, ‘ದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಕಳುಹಿಸಿದ್ದಾನೆ’ ಎಂಬುದು ನನಗೆ ಮನವರಿಕೆಯಾಯಿತು. ಅದಕ್ಕಾಗಿಯೇ ನಾನು ನನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ ಹೇಳಿಕೆಯನ್ನು ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, “ಅವರು (ಮೋದಿ) ಈ ದೇವರ ಕಥೆಯನ್ನು ಏಕೆ ತಂದರು ಎಂಬುದು ನಿಮಗೆ ತಿಳಿದಿದೆಯೇ? ಏಕೆಂದರೆ, ಲೋಕಸಭೆ ಚುನಾವಣೆಯ ನಂತರ ನರೇಂದ್ರ ಮೋದಿಯವರಿಗೆ ಕೈಗಾರಿಕೋದ್ಯಮಿಗಳ ಬಗ್ಗೆ ಇಡಿ ಪ್ರಶ್ನೆಗಳನ್ನು ಕೇಳಬಹುದು ಎಂಬ ವಿಚಾರವನ್ನು ಪ್ರಸ್ತಾಪಿಸಿದಾಗ, ಮೋದಿ, ‘ನನಗೆ ಗೊತ್ತಿಲ್ಲ, ನನ್ನನ್ನು ‘ಪರಮಾತ್ಮ’ ಕಳುಹಿಸಿದ್ದಾನೆ’ ಎಂದಿದ್ದಾರೆ. ಇದು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಯತ್ನ” ಎಂದು ಆರೋಪಿಸಿದ್ದಾರೆ.

“ಇಂತಹ ಭಾಷಣಗಳನ್ನು ನಿಲ್ಲಿಸಿ. ಮೊದಲು, ಕಳೆದ ಹತ್ತು ವರ್ಷಗಳಲ್ಲಿ ಬಿಹಾರ ಮತ್ತು ದೇಶದ ಜನರಿಗೆ ನೀವು (ಮೋದಿ) ಎಷ್ಟು ಉದ್ಯೋಗಗಳನ್ನು ಒದಗಿಸಿದ್ದೀರಿ ಎಂಬುದರ ಬಗ್ಗೆ ಮಾತನಾಡಿ” ಎಂದು ರಾಹುಲ್ ಹೇಳಿದ್ದಾರೆ.

“ನರೇಂದ್ರ ಮೋದಿ ಮುಂದಿನ ಅವಧಿಗೆ ಪ್ರಧಾನಿಯಾಗುವುದಿಲ್ಲ ಎಂಬುದನ್ನು ನೀವು ಗಮನಿಸಬಹುದು. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ ಬಣದ ಪರವಾಗಿ ‘ಅಲೆ’ ಇದೆ” ಎಂದು ಅವರು ಪ್ರತಿಪಾದಿಸಿದರು.

“ಎರಡು ಜಾತಿಗಳು ಮಾತ್ರ ಇವೆ ಎಂದು ಹೇಳಿಕೊಳ್ಳುವ ಪ್ರಧಾನಿ ತನ್ನನ್ನು ತಾನು ಒಬಿಸಿ ಎಂದು ಏಕೆ ಗುರುತಿಸಿಕೊಳ್ಳುತ್ತಾರೆ. ನಾನು ಜಾತಿ ಗಣತಿ ವಿಷಯವನ್ನು ಪ್ರಸ್ತಾಪಿಸಿದಾಗ ಮೋದಿ ಹೇಳಿದರು, ಭಾರತದಲ್ಲಿ ಕೇವಲ ಎರಡು ಜಾತಿಗಳಿವೆ-ಶ್ರೀಮಂತ ಮತ್ತು ಬಡವ. ಕೇವಲ ಎರಡು ಜಾತಿಗಳಿದ್ದರೆ, ಅವರು (ಮೋದಿ) ಹೇಗೆ ಒಬಿಸಿ ಆಗುತ್ತಾರೆ. ಇಂಡಿಯಾ ಬ್ಲಾಕ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿಯನ್ನು ನಡೆಸುತ್ತದೆ” ಎಂದರು.

 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇದೇ ಮೊದಲ ಬಾರಿಗೆ ಭಾರತಕ್ಕೆ ತಾಲಿಬಾನ್ ಸಚಿವರ ಭೇಟಿ; ಐತಿಹಾಸಿಕ ಹೆಜ್ಜೆ

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಖಾನ್ ಮುತ್ತಖಿ...

ದಾವಣಗೆರೆ | ಜಾತಿ ಧರ್ಮ ಭಾಷೆಗಳ ಸಂಘರ್ಷ ತಡೆಗೆ ಗಾಂಧೀಜಿ ದಾರಿ ಮುಖ್ಯ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ʼʼಜಾತಿ,ಧರ್ಮಗಳ, ಮಧ್ಯೆ, ಭಾಷೆ ಮತ್ತು ಪ್ರದೇಶಗಳ ಮಧ್ಯೆ ವೈಷಮ್ಯ ಮಾಡಿಕೊಂಡು ಸಂಘರ್ಷ...

ಒಳ ಮೀಸಲಾತಿ | ಎಐಸಿಸಿ ಹಸ್ತಕ್ಷೇಪಕ್ಕೆ ಹೆಚ್ಚಿದ ಆಗ್ರಹ, ದೆಹಲಿ ಬಿಡದಿರಲು ಅಲೆಮಾರಿ ಸಂಸತ್ತು ತೀರ್ಮಾನ

ಒಳ ಮೀಸಲಾತಿ ವಿತರಣೆಯಲ್ಲಿ ಕರ್ನಾಟಕದ ಅಸ್ಪೃಶ್ಯ ದಲಿತ ಅಲೆಮಾರಿ ಸಮುದಾಯಗಳಿಗೆ ಆಗಿರುವ...

Download Eedina App Android / iOS

X