ಮುಂಗಾರು ಬಿತ್ತನೆ ಬೀಜ ಖರೀದಿಸಿ ಊರಿಗೆ ತೆರಳುವ ವೇಳೆ ಅಪಘಾತ ಸಂಭವಿಸಿ ಇಬ್ಬರು ರೈತರು ಮೃತಪಟ್ಟಿರುವ ಘಟನೆ ಅಫಜಲಪುರ ತಾಲೂಕಿನ ಬಳ್ಳೂರಗಿ-ಬಡದಾಳ ರಸ್ತೆ ಮಧ್ಯೆ ಬುಧವಾರ ನಡೆದಿದೆ.
ಬಡದಾಳ ಗ್ರಾಮದ ಸುರೇಶ ನಿಲಂಗೆ (45) ಹಾಗೂ ಅಲ್ಲಾವುದ್ದಿನ್ ಆವೇರಿ (60) ಮೃತ ರೈತರು. ಇಬ್ಬರು ರೈತರು ಅಫಜಲಪುರ ಪಟ್ಟಣದಿಂದ ಬಿತ್ತನೆ ಬೀಜ ಖರೀದಿಸಿ ಬೈಕ್ ಮೇಲೆ ಊರಿಗೆ ತೆರಳುವ ವೇಳೆ ಎದುರಿಗೆ ಬಂದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್‍ಐ ಮಹಿಬೂಬ ಅಲಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.