ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಪರಾಕ್ರಮ ತೋರಿದ್ದಾರೆ. ತಮ್ಮ ಮೊದಲ ಎಸೆತದಲ್ಲಿಯೇ ವಿಕೆಟ್ ಕಿತ್ತುಕೊಂಡಿದ್ದಾರೆ. ಮಾತ್ರವಲ್ಲದೆ, ಕೇವಲ 48 ರನ್‌ಗಳನ್ನು ಕೊಟ್ಟು 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನ ಮೊದಲ ಇನ್ನಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ಗೆ ಟೀಮ್ ಇಂಡಿಯಾ ಕಂಗಾಲಾಗಿಹೋಗಿದೆ. ಕೇವಲ 180 ರನ್‌ಗಳಿಗೆ ಆಲ್‌ಔಟ್ ಆಗಿದೆ. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಎಚ್ಚರಿಕೆಯಿಂದ ಆಟವಾಡುವ ಅಗತ್ಯವಿದೆ ಎಂದು ಸ್ಟಾರ್ಕ್ ಎಚ್ಚರಿಸಿದ್ದಾರೆ.
ಇನ್ನು, ಟೀಮ್ ಇಂಡಿಯಾದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಇತರ ಬೌಲರ್‌ಗಳು ತಮ್ಮ ಟ್ರ್ಯಾಕ್‌ನಲ್ಲಿ ಎಡವಿದ್ದಾರ ಎಂಬ ಪ್ರಶ್ನೆಗೆ ಉತ್ತರಿಸಿರುವ ಸ್ಟಾರ್ಕ್, ‘ನಾನು ಅವರ ಬೌಲಿಂಗ್ ಕೋಚ್ ಅಲ್ಲ’ ಎಂದಿದ್ದಾರೆ.
ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 180ಕ್ಕೆ ಆಲೌಟ್ ಆಗಿದೆ. ನಿತೀಶ್ ರೆಡ್ಡಿ 42 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ ಮೊದಲ ಬಾಲ್‌ಗೆ ಔಟ್ ಆಗುವ ಮೂಲಕ ಶೂನ್ಯ ಸಾಧನೆ ಮಾಡಿದ್ದಾರೆ. ಕೆಎಲ್ ರಾಹುಲ್ 37, ಶುಭ್ಮನ್ ಗಿಲ್ 31, ಕೊಹ್ಲಿ 7, ಪಂತ್ 21, ರೋಹಿತ್ 3, ಅಶ್ವಿನ್ 22, ಹರ್ಷಿತ್ 0, ಬುಮ್ರಾ 0, ಸಿರಾಜ್ 4 ರನ್ ಗಳಿಸಿದರು. ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 1 ವಿಕೆಟ್ ನಷ್ಟಕ್ಕೆ 86 ರನ್ಗಳಿಸಿದೆ.