ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬ್ಲಡ್‌ ಬಾತ್‌! ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಗರಿಷ್ಠ ಕುಸಿತ

Date:

Advertisements

ಜನವರಿ 27ರ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ, ಸೆನ್ಸೆಕ್ಸ್‌ ಸೇರಿದಂತೆ ಇನ್ನೂಅನೇಕ ಬೆಂಚ್‌ ವಲಯಗಳಲ್ಲಿ ಭಾರೀ ಕುಸಿತ ಕಂಡಿವೆ. ಸೆನ್ಸೆಕ್ಸ್‌ 824(1.08%), ನಿಫ್ಟಿ 263% (1.14%)ನಷ್ಟು ಕುಸಿತ ಕಂಡು ಮಧ್ಯಮ ಮತ್ತು ಸಣ್ಣ ಕಂಪನಿಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ.

ತೀವ್ರವಾದ ಮಾರಾಟದ ಒತ್ತಡಕ್ಕೆ ಸಿಲುಕಿದ ಮಿಡ್‌ಕ್ಯಾಪ್‌(3.84%) ಸನಿಹ ಶೇ.4ರಷ್ಟು ಕುಸಿದು, ಸ್ಮಾಲ್‌ ಕ್ಯಾಪ್‌ ಕಂಪನಿಗಳಲ್ಲಿಯೂ 4% ನಷ್ಟು ನಷ್ಟಕಂಡಿತು.

ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನ ಬಂಡವಾಳ ಮಾರುಕಟ್ಟೆಯಲ್ಲಿ ಬರೋಬ್ಬರಿ ₹410 ಲಕ್ಷ ಕೋಟಿಯಷ್ಟು ನಷ್ಟವನ್ನು ಅನುಭವಿಸಿ ಮತ್ತಷ್ಟು ಜಾರುವ ಸಂಭವವನ್ನು ತಜ್ಞರು ಅಂದಾಜಿಸುತ್ತಿದ್ದಾರೆ.

ಪ್ರಾಥಮಿಕವಾಗಿ ಮುಂಬರುವ ಕೇಂದ್ರ ಬಜೆಟನ್ನೇ ಮುಖ್ಯವಾಗಿಸಿಕೊಂಡಿರುವ ಹೂಡಿಕೆದಾರರು, ಸರ್ಕಾರದಿಂದ ಹೆಚ್ಚಾಗಿ ಜನಪ್ರಿಯ ಯೋಜನೆಗಳಿಗೆ ಅನುವಾಗುವಂತೆ ಟ್ಯಾಕ್ಸ್‌ನಲ್ಲಿ ಸಡಿಲತೆಯನ್ನು ಎದುರು ನೋಡುತ್ತಿದ್ದಾರೆಂದರೆ ತಪ್ಪಾಗಲಾರದು. ಏಕೆಂದರೆ ಹೆಚ್ಚಾಗಿ ವಿದೇಶಿ ಹೂಡಿಕೆದಾರರ ಜತೆಗೆ ಭಾರತದ ಸಣ್ಣ ಸಣ್ಣ ಹೂಡಿಕೆದಾರರು ಹೆಚ್ಚು ಹಣ ಹಿಂಪಡೆಯುತ್ತಿದ್ದು, ಮರುಹೂಡಿಕೆ ಮಾಡಬೇಕಾದರೆ ಅದಕ್ಕೆ ಸರ್ಕಾರದ ಬಜೆಟ್‌ನಲ್ಲಿ ಸಡಿಲತೆಯ ಅಗತ್ಯ ಹೆಚ್ಚಿದೆ ಎಂಬುದನ್ನು ಕಾಣಬೇಕಾಗುತ್ತದೆ.

ಗ್ರಾಹಕರ ಖರ್ಚಿಗೆ ಅನುಗುಣವಾಗುವ, ಹೆಚ್ಚೆಚ್ಚು ಉಳಿತಾಯದ ಜತೆಗೆ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಸರ್ಕಾರದ ಬಜೆಟ್‌ ಸಹಕಾರ ಮಾಡದೇ ಇದ್ದಲ್ಲಿ, ಭಾರತೀಯ ಕಂಪನಿಗಳ ಲಾಭವೂ ಕಡಿಮೆಯಾಗುವ ಅಥವಾ ವೃದ್ದಿಸಲು ಸಾಧ್ಯವಿಲ್ಲ ಎಂಬುದನ್ನು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?

ಕಳೆದ ವರ್ಷದ ಅಕ್ಟೋಬರ್‌ನಿಂದ ಜನವರಿವರೆಗೆ ಸುಮಾರು ₹2 ಲಕ್ಷ ಕೋಟಿ ಹಣವನ್ನು ಹಿಂಪಡೆದಿದ್ದು, ವಿದೇಶಿ ಹೂಡಿಕೆದಾರು ಮತ್ತು ದೇಶೀಯ ಹೂಡಿಕೆದಾರರ ನಡುವೆ ಕಾದಾಟ ಏರ್ಪಟ್ಟಿದೆ.

ಯಾವ ಷೇರುಗಳು ಕುಸಿತ?

ನಿಫ್ಟಿಯಲ್ಲಿನ ICICI 1.55%, Britannia 1.46%, M&M 1.08% ಮಾತ್ರ ಮೇಲಕ್ಕೆ ಆಮೆಗತಿಯಲ್ಲಿ ಏರಿಕೆ ಕಂಡರೆ, HCL, Tech Market, Wipro ಷೇರುಗಳು ತಲಾ -4% ನಷ್ಟು ನಷ್ಟ ಕಂಡಿವೆ. Hindalco, Shriram Finance, Power Grid, TATA motors ಷೇರುಗಳೂ -3.50% ಗೂ ಹೆಚ್ಚು ಕುಸಿದಿವೆ.

ನಿಫ್ಟಿಯ ಮಿಟ್‌ ಕ್ಯಾಪ್‌ನ ಷೇರುಗಳಲ್ಲಿ ಫೆಡರಲ್‌ ಬ್ಯಾಂಕ್‌ 1.61%, ಯೆಸ್‌ ಬ್ಯಾಂಕ್‌ 1.37%, ಎಲ್‌ ಅಂಡ್‌ ಟಿ ಫೈನಾನ್ಸ್‌ 1.34% ಮಾತ್ರ ಏರಿಕೆ ಕಂಡರೆ ಉಳಿದ ಎಲ್ಲ ಷೇರುಗಳು ಗರಿಷ್ಟ ಕುಸಿದಿವೆ. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ 9%, Supreme Ind -6.75%, ಟೆಲಿಕಾಂ ಕಂಪನಿಯಾದ VI 6%, ಕುಸಿದು ಗಣನೀಯ ನಷ್ಟಕಂಡಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಿಎಸ್‌ಟಿ – ಜನರ ರಕ್ತ ಹೀರುವ ಕ್ರೂರ ತೆರಿಗೆ

ಹೋಟೆಲಿನ ಊಟದ ಮೇಲಿನ ಜಿಎಸ್‌ಟಿ ಶೇ.10 ರಷ್ಟಿದ್ದರೆ ಅದನ್ನು ಕೋಟ್ಯಾಧೀಶರು ನೀಡುತ್ತಾರೆ...

ಸಣ್ಣ ವ್ಯಾಪಾರಿಗಳ ಮೇಲೆ ಜಿಎಸ್‌ಟಿ: ಆತಂಕ ಬೇಡ ಎನ್ನುತ್ತಾರೆ ತಜ್ಞರು

ಜಿಎಸ್‌ಟಿ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸಲು 'NO GST' ಎನ್ನುತ್ತಿದ್ದಾರೆ. ಈ...

1 ಡಾಲರ್ = 86.16 ರೂ.: ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ

ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ತನ್ನ ವಹಿವಾಟುಗಳನ್ನು ಶುಕ್ರವಾರ ದುರ್ಬಲವಾಗಿ ಮುಗಿಸಿದೆ. ಅಮೆರಿಕದ...

ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು: ಇಟಲಿಯ ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಲಿಡ್ಕರ್

ಪಾರಂಪರಿಕ ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸ ನಕಲು ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಇಟಲಿ...

Download Eedina App Android / iOS

X