ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹3 ಲಕ್ಷ ಮೌಲ್ಯದ ಗುಟ್ಕಾವನ್ನು ಹುಮನಾಬಾದ್ ಹೊರವಲಯದ ಹಳೆ ಚೆಕ್ ಪೋಸ್ಟ್ ಹತ್ತಿರದಲ್ಲಿ ಹುಮನಾಬಾದ್ ಪೊಲೀಸರು ಗುರುವಾರ ಸಂಜೆ ಜಪ್ತಿ ಮಾಡಿದ್ದಾರೆ.
ತೆಲಂಗಾಣದ ಹೈದರಾಬಾದ್ ಕಡೆಯಿಂದ ಹುಮನಾಬಾದ್ ಮಾರ್ಗವಾಗಿ ಕಲಬುರಗಿಗೆ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹುಮನಾಬಾದ್ ಠಾಣೆ ಪಿಎಸ್ಐ ಸುರೇಶ್ ಚವ್ಹಾಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ₹3 ಲಕ್ಷ ಮೌಲ್ಯದ 50 ಕೆ.ಜಿ.ತಂಬಾಕು ಮಿಶ್ರಿತ 57 ಗುಟ್ಕಾ ಚೀಲ ಹಾಗೂ ಒಂದು ವಾಹನ ಸೇರಿ ಒಟ್ಟು ₹13 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚನ್ನಬಸವ, ಶೀಲಸಾಗರ ಹಾಗೂ ಸೂರ್ಯಕಾಂತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.