ಮೈಸೂರು | ಪಾತಾಳಕ್ಕಿಳಿದ ಶುಂಠಿ ಬೆಲೆ; ಬೆಳೆಗಾರರ ಆದಾಯಕ್ಕೆ ಪೆಟ್ಟು

Date:

Advertisements

ಕಳೆದ ವರ್ಷ 60 ಕೆಜಿ ಚೀಲಕ್ಕೆ ₹5,000ದಿಂದ ₹6,000ದವೆರಗೆ ಇದ್ದ ಶುಂಠಿ ಬೆಲೆ ಈ ಬಾರಿ ₹1000ರಿಂದ ₹1,400ಕ್ಕೆ ಕುಸಿದಿದ್ದು, ಶುಂಠಿ ಬೆಳೆಗಾರರ ಆದಾಯದ ಮೇಲೆ ಪರಿಣಾಮ ಬೀರಿದೆ. ಈ ತಿಂಗಳು ಸುಗ್ಗಿ ಪ್ರಾರಂಭವಾಗುತ್ತಿದ್ದಂತೆ ಮತ್ತಷ್ಟು ಬೆಲೆ ಕುಸಿಯುವ ನಿರೀಕ್ಷೆಯಿದೆ.

2023ರಲ್ಲಿ, ಶುಂಠಿ ದರವು 60 ಕೆಜಿ ಚೀಲಕ್ಕೆ ದಾಖಲೆಯ ಬೆಲೆ ಗರಿಷ್ಠ ₹9,000ಕ್ಕೆ ತಲುಪಿತ್ತು. ಈ ವೇಳೆ ಶುಂಠಿ ಕಳ್ಳತ ಹೆಚ್ಚಾಗಿ ಪೊಲೀಸರಿಗೆ ಬಹುತೇಕ ದೂರುಗಳು ಬಂದಿದ್ದವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಔಷಧೀಯ ಮತ್ತು ಮಸಾಲೆ ತಯಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಶುಂಠಿಯನ್ನು ಈ ವರ್ಷ ತೆಗೆದುಕೊಳ್ಳುವವರು ಯಾರೂ ಇಲ್ಲ. ಕಳೆದ ವರ್ಷವೂ ಬೆಲೆಗಳು ಸರಾಸರಿಯಾಗಿತ್ತು. ಆದರೆ ಈ ವರ್ಷ ಯಾವ ಮಟ್ಟಕ್ಕೆ ದರ ಕುಸಿದಿದೆಯೆಂದರೆ ಕಟಾವಿನ ಕೂಲಿ ಕೊಡುವಷ್ಟೂ ಬೆಳೆಗಾರರಿಗೆ ಸಿಗುವುದಿಲ್ಲ. ಆ ಮಟ್ಟಕ್ಕೆ ಶುಂಠಿ ಬೆಲೆ ಕುಸಿತ ಕಂಡಿದೆ ಎಂಬುದು ಬೆಳೆಗಾರರ ಅಭಿಪ್ರಾಯವಾಗಿದೆ.

ಶುಂಠಿ ಮುರಿಯುವುದು
ಶುಂಠಿ ಮುರಿಯುತ್ತಿರುವುದು

ಹಳೆಯ ಮೈಸೂರು ಪ್ರದೇಶ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಶುಂಠಿ ಕೃಷಿಯನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಶುಂಠಿ ಬೆಳೆಯಲು ವಾರ್ಷಿಕ ಒಪ್ಪಂದದ ಮೇಲೆ ಭತ್ತದ ಗದ್ದೆಯನ್ನು ತೆಗೆದುಕೊಂಡು ಹೊರಗಿನವರು ಶುಂಠಿಯನ್ನು ಬೆಳೆಯುತ್ತಾರೆ. ಶುಂಠಿ ಬಿತ್ತನೆಯಿಂದ ಕಟಾವಿನವರೆಗೆ 8 ತಿಂಗಳು ತೆಗೆದುಕೊಳ್ಳುತ್ತದೆ. ಈ ಭೂಮಿಯಲ್ಲಿ ಮುಂದಿನ ಐದು ವರ್ಷಗಳವರೆಗೆ ಮತ್ತೆ ಶುಂಠಿ ಬೆಳೆಯಲು ಆಗುವುದಿಲ್ಲ. ಇಳುವರಿ ಬರುವುದಿಲ್ಲ. ಬೇರೆಯವರ ಭೂಮಿಯನ್ನು ತೆಗೆದುಕೊಂಡು ಶುಂಠಿ ಬೆಳೆದಿರುವವರಿಗೆ ಅಧಿಕ ಖರ್ಚು ಬಂದಿರುತ್ತದೆ. ಇವತ್ತಿನ ಬೆಲೆಯಲ್ಲಿ ಅಂತಹ ಬೆಳಗಾರರು ತುಂಬಾ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶುಂಠಿ ಹಾಕುತ್ತಿರುವುದು
ಶುಂಠಿ ನಾಟಿ ಮಾಡುತ್ತಿರುವುದು

ಹುಣಸೂರಿನ ಶುಂಠಿ ಬೆಳೆಗಾರ ಮೊಹಮ್ಮದ್‌ ಮಥೀನ್‌ ಮಾತನಾಡಿ, “ಈ ಬಾರಿ ಅಧಿಕ ಮಳೆ, ಅಧಿಕ ಬಿಸಿಲು ಎರಡರ ಕಾರಣಕ್ಕೂ ಶುಂಠಿ ಬೆಳೆ ಇಳುವರಿ ಕಡಿಮೆಯಾಗಿದೆ. ಅಂತೆಯೇ ಬೆಲೆಯೂ ಕುಸಿತ ಕಂಡಿದೆ. ವಾಶಿಂಗ್‌ ಮಾಡಿ ಕೊಟ್ಟರೆ 1100 ರೂಪಾಯಿ ಬೆಲೆಯಿದು, ಡ್ರೈ ಶುಂಠಿಗೆ 900 ರೂ. ಇದೆ” ಎಂದು ತಿಳಿಸಿದರು.

ಒಂದು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಬೇಕಾದರೆ 4 ಲಕ್ಷ ರೂ. ವೆಚ್ಚವಾಗುತ್ತದೆ. ಒಂದು ಎಕರೆಗೆ ಶುಂಠಿ ಬಿತ್ತನೆ ಮಾಡಲು 60 ಕೆಜಿ ಚೀಲದ 25 ಚೀಲ ಶುಂಠಿ ಬೇಕಾಗುತ್ತದೆ. ಕಳೆದ ಬಾರಿ ಬೀಜದ ಶುಂಠಿ ಚೀಲಕ್ಕೆ 6500 ರೂ. ಇತ್ತು. ಹೊಲ ಉಳುಮೆ‌ ಮಾಡಿ, ಬೆಡ್‌ ಮಾಡುವಷ್ಟರಲ್ಲಿ 15,000 ರೂ. ಖರ್ಚು ಬಂದಿತ್ತು. ಮೇಲೊದಿಕೆಗೆ ಕಬ್ಬಿನ ಸೋಗೆ ಹಾಕಿಸುವುದಕ್ಕೆ 15,000 ರೂ. ಡ್ರಿಪ್ಸ್‌ ಅಳವಡಿಕೆಗೆ 2,500 ರೂ. ಖರ್ಚಾಗಿತ್ತು ಎಂದು ತಿಳಿಸಿದರು.

ಶುಂಠಿಗೆ ಹೊದಿಕೆ
ಶುಂಠಿ ಬೆಡ್‌ಗೆ ಹುಲ್ಲಿನ ಹೊದಿಕೆ

“ಟ್ರಂಚಿಂಗ್, ಸ್ಪ್ರೇ, ಕಳೆ ಮೊದಲ ಬಾರಿ ಕಳೆ ತೆಗೆಯುವುದು, ಮಣ್ಣು ಹಾಕುವಂತಹ ಕೆಲಸವಿರುತ್ತದೆ. ಶುಂಠಿ ಹಾಕಿದ 20 ದಿನದ ಒಳಗಾಗಿ ಕಳೆನಾಶಕ ಹೊಡೆಯುತ್ತೇವೆ. 20 ದಿನಗಳ ನಂತರ ಶುಂಠಿ ಮೊಳಕೆ ಹೊಡೆದಿರುತ್ತದೆ. ಇಂತಹ ಸಂದರ್ಭದಲ್ಲಿ ಕೈಯಿಂದ ಕಳೆ ತೆಗೆಸಬೇಕಾಗುತ್ತದೆ” ಎಂದು ಹೇಳಿದರು.

ಮಣ್ಣು ಹಾಕುತ್ತಿರುವುದು
ಶುಂಠಿಗೆ ಮಣ್ಣು ಹಾಕುತ್ತಿರುವುದು

“ಕಳೆ ತೆಗೆಸಲು ದಿನಕ್ಕೆ 1000 ರೂ. ಕೂಲಿ, ಊಟ, ಎಲೆ ಅಡಿಕೆ ಎಲ್ಲವನ್ನೂ ಕೊಡಬೇಕು. ಮತ್ತೆ ಹಿಂದಿನಿಂದ ಮಣ್ಣು ಹಾಕಿಸಬೇಕು. ಅದರದ್ದು ಬೇರೆ ಕೂಲಿ ಕೊಡಬೇಕು. ಶುಂಠಿ ಹಾಕಿದ ದಿನದಿಂದ ಕಟಾವಿಗೆ ಬರುವವರೆಗೂ ಅದರೊಳಗೆ ಕೆಲಸ ಇದ್ದೇ ಇರುತ್ತದೆ. ನಾಲ್ಕು ಲಕ್ಷ ಖರ್ಚಾಗಿದೆ. ಬೆಲೆ ಇಲ್ಲ, ರೈತರ ಜೀವನ ಯಾರಿಗೂ ಬೇಡದಂತಾಗಿದೆ. ಬೆಂಬಲ ಬೆಲೆಯನ್ನೂ ನೀಡುವುದಿಲ್ಲ, ಕೃಷಿ ಇಲಾಖೆಗಳಿಂದ ಬೀಜಗಳನ್ನೂ ನೀಡುವುದಿಲ್ಲ. 6500 ರೂ ಕೊಟ್ಟು ಬೀಜ ತಂದುಹಾಕಿ, 900 ರೂಪಾಯಿಗೆ ಮಾರುವುದು ಅಂದರೆ ರೈತರು ಬದುಕುವುದಕ್ಕೆ ಆಗುತ್ತ. ಬೆಳೆ ನಂಬಿಕೊಂಡು ಸಾಲಸೋಲ ಮಾಡಿ ಬೆಳೆ ಪೋಷಿಸಿರುತ್ತೇವೆ. ದಿಢೀರ್‌ ಅಂತ ಬೆಲೆ ಇಲ್ಲದಿದ್ದರೆ ಏನು ಮಾಡೋದು?” ಎಂದು ಕಳವಳ ವ್ಯಕ್ತಪಡಿಸಿದರು.

ಶುಂಠಿಗೆ ಔಷಧಿ ಸಿಂಡಣೆ
ಶುಂಠಿ ಬೆಳೆಗೆ ಔಷಧಿ ಸಿಂಪಡಿಸುತ್ತಿರುವುದು

ಸ್ವಂತ ಭೂಮಿಯಲ್ಲಿ, ತಮ್ಮದೆ ಪಂಪ್‌ಸೆಟ್‌ ಬಾವಿ ಇದ್ದರೆ ಪರಾಗಿಲ್ಲ, ಹೇಗೋ ಸುಧಾರಿಸಿಕೊಳ್ಳಬಹುದು, ಇನ್ನೊಂದು ಬೆಳೆಲಿ ತಗೊಳೋಣ ಎನ್ನಬಹುದು. ಆದರೆ ಬೇರೆಯವರ ಜಮೀನು ಮಾಡಿಕೊಂಡು ಹೀಗಾದರೆ ದೇವರೇಗತಿ. ಶುಂಠಿ ಬೆಳೆಯುವ ಖರ್ಚಿನ ಜತೆಗೆ ಜಮೀನುದಾರರಿಗೆ ದುಡ್ಡು ಕೊಡಬೇಕು. ನೀರಿಗೂ ದುಡ್ಡು ಕೊಡಬೇಕು. ಲಾಭ ಆಗದೆ ಲಾಸ್‌ ಆದರೆ ಮನೆ ಮಠ ಮಾರಿಕೊಳ್ಳಬೇಕಾದ ಸಂದರ್ಭ ಬರಬಹುದು, ಹೀಗಾಗಿದೆ ರೈತರ ಪರಿಸ್ಥಿತಿ” ಎಂದು ಅವಲತ್ತುಕೊಂಡರು.

ಕಳೆ ತೆಗೆಯುವುದು
ಶುಂಠಿಯಲ್ಲಿ ಕಳೆ ತೆಗೆಯುತ್ತಿರುವುದು
ಶುಂಠಿಗೆ ಸ್ಪ್ರಿಂಕ್ಲರ್
ಸ್ಪ್ರಿಂಕ್ಲರ್‌ ಮೂಲಕ ಶುಂಠಿ ಬೆಳೆಗೆ ನೀರು ಹಾಯಿಸುತ್ತಿರುವುದು

‘ಶುಂಠಿಗೆ ಮೀಸಲಾದ ಮಾರುಕಟ್ಟೆ ಇಲ್ಲ’

“ಬೆಲೆ ಏಕೆ ಕುಸಿಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಮೈಸೂರಿನಲ್ಲಿ ಶುಂಠಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಇತರ ರಾಜ್ಯಗಳ ವ್ಯಾಪಾರಿಗಳು ಬಂದು ಅವರು ನಿಗದಿಪಡಿಸಿದ ಬೆಲೆಗೆ ಖರೀದಿಸುತ್ತಾರೆ. ಬೆಲೆ ನಿಗದಿಪಡಿಸಲು ಯಾವುದೇ ವ್ಯವಸ್ಥೆ ಇಲ್ಲ. ಅನೇಕ ಬಾರಿ, ಅಂತಹ ವ್ಯಾಪಾರಿಗಳು ರೈತರಿಗೆ ಪಾವತಿಸುವುದಿಲ್ಲ” ಎಂದು ಶುಂಠಿ ಬೆಳೆಗಾರರಾಗಿರುವ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಹೊಸೂರು ಕುಮಾರ್ ಆರೋಪಿಸಿದರು.

ಶುಂಠಿ ಕೀಳುತ್ತಿರುವುದು
ಶುಂಠಿ ಕಟಾವು ಮಾಡುತ್ತಿರುವುದು

“ಮಾರುಕಟ್ಟೆಯನ್ನು ಸ್ಥಿರಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರವು ಯೋಜನೆಯನ್ನು ರೂಪಿಸಬೇಕೆಂದು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ. ಶುಂಠಿಗೆ ಮೀಸಲಾದ ಮಾರುಕಟ್ಟೆಯನ್ನು ಕೋರಿ ನಾವು ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿದ್ದೀರಾ? ತುಮಕೂರು | ರೈತ ಮಹಿಳೆಯ ಕೈಹಿಡಿದ ಅಣಬೆ ಕೃಷಿ

“ಪ್ರಸ್ತುತ, ಅಪರಿಚಿತ ವ್ಯಾಪಾರಿಗಳು ಶುಂಠಿಯನ್ನು ಖರೀದಿಸುವಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ, ಇದು ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಾರುಕಟ್ಟೆಯನ್ನು ನಿಯಂತ್ರಿಸುವ ವ್ಯವಸ್ಥೆ ಪ್ರಸ್ತುತದಲ್ಲಿ ಅಗತ್ಯವಾಗಿದೆ” ಎಂದು ಹುಣಸೂರಿನ ಬೆಳೆಗಾರ ಗಂಗಣ್ಣ ಹೇಳಿದರು.

ಈ ಕುರಿತು ಈ ದಿನ.ಕಾಮ್‌ ಮೈಸೂರು ಜಿಲ್ಲೆಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕರನ್ನು ಸಂಪರ್ಕಿಸಿತ್ತಾದರೂ ಅವರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿರುವುದಿಲ್ಲ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಎಂ ಎಚ್.ಪಟ್ಟಣ ಗ್ರಾಪಂ ನಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಎಂ. ಎಚ್.ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ...

ಸಂವಿಧಾನದ ಧರ್ಮನಿರಪೇಕ್ಷ ಸಿದ್ಧಾಂತ ಅವಮಾನಿಸಿದ ಮೋದಿ: ಬಿ ಕೆ ಹರಿಪ್ರಸಾದ್‌ ಕಿಡಿ

ಸಾಂವಿಧಾನಿಕ ಹುದ್ದೆಯಲ್ಲಿದ್ದೂ, ಸಂವಿಧಾನ ವಿರೋಧಿ ಸಂಘಟನೆಯ ಪ್ರಚಾರ ನಡೆಸುವುದು ಪ್ರಧಾನಿ ಹುದ್ದೆಗೆ...

ವಿಜಯನಗರ | ಭಾರತ ಸ್ವಾವಲಂಬಿಯಾಗಲು ಗೃಹ ಕೈಗಾರಿಕೆಗಳು ಮುಂಚೂಣಿಗೆ ಬರಬೇಕು: ಡಾ. ವೀರೇಶ ಬಡಿಗೇರ

ವರ್ಣ, ವರ್ಗ, ಲಿಂಗರಹಿತ ಸಮಾಜ ಸ್ಥಾಪನೆಯು ಗಾಂಧಿಯ ಕನಸಾಗಿತ್ತು. ಸ್ವದೇಶಿ ಚಳವಳಿ,...

ತುಮಕೂರು ದಸರಾ ಜಂಬೂಸವಾರಿ : ಸಾಂಸ್ಕೃತಿಕ ವೈಭವ

 ತುಮಕೂರು ದಸರಾ ಉತ್ಸವದ ಅಂಗವಾಗಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ...

Download Eedina App Android / iOS

X