ವಿಜಯಪುರ | ಮಹಿಳಾ ದಿನಾಚರಣೆ ಅಂಗವಾಗಿ ಮಾ.6ರಿಂದ ʼಮಹಿಳಾ ಸಾಂಸ್ಕೃತಿಕ ಹಬ್ಬʼ

Date:

Advertisements

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 6 ರಿಂದ ಮಾರ್ಚ್ 8ರವರೆಗೆ ʼಮಹಿಳಾ ಸಾಂಸ್ಕೃತಿಕ ಹಬ್ಬ-2025″ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಕವಿ-ಕವಯತ್ರಿಯರಿಂದ ಮಹಿಳಾ ಕೇಂದ್ರಿತ ಕವನ ವಾಚನಗಳನ್ನು ಆಹ್ವಾನಿಸಲಾಗಿದೆ. ಬಂದ ಕವನಗಳಲ್ಲಿ ಅತ್ಯುತ್ತಮ 3 ಕವನಗಳನ್ನು ಆಯ್ಕೆ ಮಾಡಿ. ರಚನೆ ಮಾಡಿದ ಕವಿ/ಕವಯಿತ್ರಿಯರನ್ನು ಮಾರ್ಚ್ 8ರಂದು ವಾಚನಕ್ಕೆ ಅವಕಾಶ ನೀಡಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು.

ಈ ಸುದ್ದಿ ಓದಿದ್ದೀರಾ?: ವಿಜಯಪುರ | ಇಂಡಿ ಠಾಣೆಗೆ ನೂತನ CPI ಆಗಿ ಪ್ರದೀಪ ಭಿಸೆ ಅಧಿಕಾರ ಸ್ವೀಕಾರ

ಆಸಕ್ತರು ಫೆ.25ರೊಳಗಾಗಿ ತಮ್ಮ ಕವನಗಳನ್ನು ಪ್ರೊ. ಲಕ್ಷ್ಮಿದೇವಿ ಪೈ, ನಿರ್ದೇಶಕಿ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಜ್ಞಾನಶಕ್ತಿ ಆವರಣ, ತೊರವಿ, ಕ.ರಾ.ಅ.ಮ.ವಿವಿ, ವಿಜಯಪುರ-586108, ಮೊ.ಸಂ.9902234469 ಈ ವಿಳಾಸಕ್ಕೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬಹುದಾಗಿದೆ. ವಿಶ್ವವಿದ್ಯಾನಿಲಯದಿಂದ ಯಾವುದೇ ರೀತಿಯ ಪ್ರಯಾಣ ಭತ್ಯೆ, ದಿನ ಭತ್ಯೆ ಮತ್ತು ಸಂಭಾವನೆಯನ್ನು ನೀಡಲಾಗುವುದಿಲ್ಲ ಎಂದು ವಿವಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ: 9845442828, 9481706330, 7975560095 ಹಾಗೂ 8861677052ನ್ನು ಸಂಪರ್ಕಿಸಬಹುದಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗಕ್ಕೆ ರಾಷ್ಟ್ರೀಯ ಪ್ರಶಸ್ತಿ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ...

ವಿಜಯಪುರ | ಮಹದೇವಪ್ಪ ಹರಿಜನ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗೆ ಕಾಲಾವಕಾಶ ಕೇಳಿದ ಎಸ್‌ಪಿ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನೆಟ್ಟಿ ಪಿ ಎ ಗ್ರಾಮದ ಮಹಾದೇವಪ್ಪ...

Download Eedina App Android / iOS

X