ಕರಾಚಿಯಿಂದ ಜೈಪುರದವರೆಗೆ; ಸಚಿನ್‌ರಿಂದ ವೈಭವ್‌ವರೆಗೆ…

Date:

Advertisements
ಫ್ರಾಂಚೈಸಿ ಒಂದು ವೈಭವ್‌ನ ಪ್ರತಿಭೆ ಗುರುತಿಸಿತು. ಪುಟ್ಟ ಹುಡುಗನೊಬ್ಬ ಶತಕ ಸಿಡಿಸಿದರೆ ತಂಡಕ್ಕೆ ಸಿಗುವ ಪಾಪ್ಯುಲಾರಿಟಿಯನ್ನು ಸರಿಯಾಗಿ ಲೆಕ್ಕಹಾಕಿತ್ತು. ಎಲ್ಲವೂ ಅವರೆಂದುಕೊಂಡಂತೆ ಆಯಿತು. That was the right investment.

15 ನವೆಂಬರ್ 1989. ಕರಾಚಿ ಪಾಕಿಸ್ತಾನ. ಭಾರತದ ಹದಿನಾರು ವರ್ಷದ ಹುಡುಗನೊಬ್ಬ ಕರಾಚಿಯ ಕ್ರೀಡಾಂಗಣದಲ್ಲಿ ಬ್ಯಾಟ್ ಮಾಡುತ್ತಿದ್ದ. ಅವನ ಚೊಚ್ಚಲ ಪಂದ್ಯವದು. ಅಂದು ಇಮ್ರಾನ್ ಖಾನ್, ವಸೀಂ ಅಕ್ರಂ, ವಖಾರ್ ಯೂನಿಸ್‌ರಂತಹ ವೇಗಿಗಳನ್ನು ಆತ ಎದುರಿಸಿದ್ದ.

ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಶೇಷ ಪ್ರದರ್ಶನವನ್ನು ತೋರದ ಆ ಹುಡುಗ ತನ್ನ ನಿಲುವು, ಸಮತೋಲನ, ಟೈಮಿಂಗ್‌ನಿಂದ ಕ್ರಿಕೆಟ್ ಉತ್ಸಾಹಿಗಳ ಗಮನ ಸೆಳೆದಿದ್ದ. ಅವನನ್ನು ನೋಡಿ ಎಲ್ಲರಿಗೂ ಅನಿಸಿತ್ತು, ಆ ಹುಡುಗನಲ್ಲಿ ಭಾರೀ ಕ್ಷಮತೆ ಇದೆ ಎಂದು.

ಮೂರನೇ ಪಂದ್ಯ ಪಾಕಿಸ್ತಾನದ ಸಿಯಾಲ್ಕೊಟದಲ್ಲಿ. ಪಿಚ್ ಮೇಲೆ ಎರಡು ಇಂಚಿನಷ್ಟು ಉದ್ದದ ಹಸಿರು ಹುಲ್ಲಿತ್ತು. ಚೆಂಡು ಊಹೆಗೂ ಮೀರಿ ಪುಟಿಯುತ್ತಿತ್ತು. ವಸೀಂ ಅಕ್ರಂ ಅವರ ವೇಗದ ಎಸೆತ ಆ ಹುಡುಗನ ಗಲ್ಲಕ್ಕೆ ಬಡಿಯಿತು. ಗಲ್ಲ ಹರಿದು ರಕ್ತ ಸುರಿಯತೊಡಗಿತು. ಕ್ರೀಡಾಂಗಣ ಪಾಕಿಸ್ತಾನದ ಸಮರ್ಥಕರಿಂದ ತುಂಬಿ ತುಳುಕುತ್ತಿತ್ತು. 1989ರಲ್ಲಿ ಪಾಕಿಸ್ತಾನ ಭಾರತದ ರಾಜತಾಂತ್ರಿಕ ಸಂಬಂಧಗಳು ಬಿಗಡಾಯಿಸಿದ್ದರಿಂದ ಕ್ರಿಕೆಟ್ ಕ್ರೀಡಾಂಗಣವನ್ನು ರಣರಂಗವೆಂಬಂತೆ ಜನ ನೋಡುತ್ತಿದ್ದರು. ಆ ದಿನ ರಣರಂಗದಲ್ಲಿ ರಕ್ತವೂ ಹರಿದಿತ್ತು! ಗಾಯಗೊಂಡ ಹುಡುಗ ಸೋಲೊಪ್ಪಲಿಲ್ಲ. ಬ್ಯಾಂಡೇಡ್ ಹಾಕಿಕೊಂಡು ಆಟ ಮುಂದುವರೆಸಿದ. ಆ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ!

ಅಂದು ಆ ಧೈರ್ಯ ತೋರಿದ ಪುಟ್ಟ ಹುಡುಗ ಸಚಿನ್ ತೆಂಡೂಲ್ಕರ್. ಪಾಕಿಸ್ತಾನ ಪ್ರವಾಸದಲ್ಲಿದ್ದ ಭಾರತ ಕ್ರಿಕೆಟ್ ತಂಡದ ಸಚಿನ್‌ಗೆ ಹದಿನಾರು ವರುಷ ಎಂದರೆ ನಂಬಲು ಯಾರು ತಯಾರಿರಲಿಲ್ಲ. ಆತನಿಗೆ ಹನ್ನೆರಡು ಅಥವಾ ಹದಿಮೂರು ಇದ್ದಿರಬಹುದು ಎಂದು ಎಲ್ಲರೂ ಅಂದಾಜಿಸಿ ನಗುತ್ತಿದ್ದರು!

ಸಚಿನ್ ಆಡಲು ಕಣಕ್ಕೆ ಇಳಿದಾಗ ನನಗೆ ಎಂಟು ವರುಷ. ಅದೇ ಪ್ರವಾಸದ ಒಂದು ಎಕ್ಸಿಬಿಷನ್ ಪಂದ್ಯದಲ್ಲಿ ಸಚಿನ್ ಅಬ್ದುಲ್ ಖಾದೆರ್ ಅವರ ಓವರ್ ಒಂದರಲ್ಲಿ ಸತತ ನಾಲ್ಕು ಸಿಕ್ಸ್ ಬಾರಿಸಿದ್ದು ನನಗೆ ನೆನಪಿದೆ. ಆ ದಿನಗಳಲ್ಲಿ ಕ್ರಿಕೆಟ್ ಅಂದ್ರೆ ಟೆಸ್ಟ್ ಕ್ರಿಕೆಟ್! ವೇಗ, ರಭಸದ ಹೊಡೆತಗಳಿಗಿಂತ ನಿಧಾನ ಗತಿಯಲ್ಲಿ ಇನ್ನಿಂಗ್ಸ್ ಕಟ್ಟುವ, ರಕ್ಷಣಾತ್ಮಕ ಆಟ ಆಡುವ ಆಟಗಾರರನ್ನು ಶ್ರೇಷ್ಠರೆಂದು ಪರಿಗಣಿಸುವ ದಿನಗಳವು. ಏಕದಿನ ಪಂದ್ಯಗಳ ಪ್ರಾಮುಖ್ಯತೆ ಹೆಚ್ಚಾಗುತ್ತಿದ್ದ ದಿನಗಳಲ್ಲಿ ಸಚಿನ್ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಎರಡನ್ನೂ ಆಡಬಲ್ಲವರಾಗಿ ನನ್ನಲ್ಲಿ ಅಚ್ಚರಿ ಮೂಡಿಸಿದ್ದರು. ಅವರಲ್ಲಿ ಗವಾಸ್ಕರ್, ಕಪಿಲ್, ದಿಲೀಪ್ ವೆಂಗ್ಸರ್ಕಾರ್ ಮತ್ತು ಕ್ರಿಶ್ ಶ್ರೀಕಾಂತ್ ಕಾಣಬಹುದಿತ್ತು. ಹಾಗಾಗಿ ಈಗಿನ ಟಿ 20 ರಂಗು, ಅಬ್ಬರ, ಜಾಹೀರಾತು, ಮೀಡಿಯಾ ಕವರೇಜ್ ಎಲ್ಲಕ್ಕಿಂತ ಹೆಚ್ಚಾಗಿ ಕ್ವಿಕ್ ಬಕ್ (ಹಣ) ಮಾಡಿಕೊಳ್ಳುವ ಅವಕಾಶ ಇಲ್ಲದಿರುವ ಕಾಲದಲ್ಲಿ ಪ್ರತಿಭಾನ್ವಿತ ಸಚಿನ್ ಯಶಸ್ಸು ನಿರೀಕ್ಷಿತವೇ ಆಗಿತ್ತು.

Fast forward to 2025. ಐಪಿಎಲ್. ಇಲ್ಲೊಬ್ಬ ಹದಿನಾಲ್ಕು ವರುಷ ಹುಡುಗ ಎಲ್ಲರ ಗಮನ ಸೆಳೆದಿದ್ದಾನೆ. ಹೆಸರು ವೈಭವ್ ಸೂರ್ಯವಂಶಿ. 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾನೆ. ಸಚಿನ್ ವೈಭವ್ ಹೋಲಿಕೆ ಸರಿಯಲ್ಲ. ಅದು ನನಗೆ ತಿಳಿದಿದೆ. ಇಬ್ಬರು ಆಡುತ್ತಿರುವ ಕಾಲಘಟ್ಟ ಬೇರೆ ಬೇರೆ. ಇಂದು ಕ್ರಿಕೆಟ್ ವಿಕಸನಗೊಂಡಿದೆ. ಕ್ರಿಕೆಟ್‌ನಲ್ಲಿ ಹೇರಳ ಹಣವಿದೆ. ನಿಜ.

ಇದನ್ನು ಓದಿದ್ದೀರಾ?: ಐಪಿಎಲ್ 2025 | ರಿವ್ಯೂ ತೆಗೆದುಕೊಳ್ಳದೆ ಪಂದ್ಯ ಸೋತರೇ ಡೆಲ್ಲಿ ಕ್ಯಾಪಿಟಲ್ಸ್?

ವೈಭವ್ ಮೊದಲ ಶತಕ ಅವನನ್ನು ಜನಪ್ರಿಯಗೊಳಿಸಿದೆ. ಕ್ರಿಕೆಟ್ ಆಡುವ ರಾಷ್ಟ್ರಗಳೆಲ್ಲ ಅವನನ್ನು ಗಮನಿಸುವಂತೆ ಆತ ಆಡಿದ್ದಾನೆ. ಸೋ… ಆತನ ಆಟದ ವೈಖರಿ ಹೇಗಿದೆ, ಅವನ ಸ್ಟ್ರೆಂಥ್ ಏನು, ಅವನ ವೀಕ್ನೆಸ್ ಏನೆಂದು ಈಗಾಗಲೇ ವಿಶ್ಲೇಷಣೆ ನಡೆದಿರುತ್ತದೆ. ಆ ವಿವರಗಳನ್ನು ಖಂಡಿತ ಬೌಲರ್‍‌ಗಳು ಗಮನಿಸಲಿದ್ದಾರೆ. ಈ ವಯಸ್ಸಿನಲ್ಲಿ ಇಷ್ಟೊಂದು ಯಶಸ್ಸು, ಹಣ, ಜನಪ್ರಿಯತೆ, ಕ್ಯಾಮೆರಾ ಕಣ್ಣುಗಳನ್ನು ನಿಭಾಯಿಸುವುದು ಮತ್ತೊಂದು ಸವಾಲು. Its a daunting task.

ಬಿಹಾರದ ಸಣ್ಣ ಪಟ್ಟಣದ ಹುಡುಗ ತನ್ನ ತಂದೆಯ ಪ್ರೋತ್ಸಾಹದಿಂದ ಇಲ್ಲಿಯವರೆಗೆ ಬಂದಿದ್ದಾನೆ. ಟೆಸ್ಟ್, ಏಕದಿನ ಪಂದ್ಯಗಳನ್ನು ತಾಳ್ಮೆಯಿಂದ ಆಡಿ ತಂಡದಲ್ಲಿ ಜಾಗ ಗಟ್ಟಿ ಮಾಡಿಕೊಳ್ಳುವ ಜರೂರತ್ತು ಅವನಿಗೆ ಬೀಳಲಿಲ್ಲ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಾಗ ಇರುವ ಪೈಪೋಟಿಯನ್ನು ಈತ ಎದುರಿಸಬೇಕಾಗಲಿಲ್ಲ. ಸಚಿನ್, ಸೌರವ್, ದ್ರಾವಿಡ್‌ರಂತೆ ಪರದೇಶದಲ್ಲಿ ಕ್ರಿಕೆಟ್ ಪಾದಾರ್ಪಣೆ ಮಾಡುವ, hostile crowd ಅನ್ನು ನೋಡಿ ಭಾವನೆಗಳನ್ನು ಮ್ಯಾನೇಜ್ ಮಾಡಿಕೊಳ್ಳುವ ಅಗತ್ಯ ಬೀಳಲಿಲ್ಲ. ಬದಲಾಗಿ ಲಾಭಕ್ಕಾಗಿ ಇರುವ ಫ್ರಾಂಚೈಸಿ ಒಂದು ಈತನ ಪ್ರತಿಭೆ ಗುರುತಿಸಿತು. ಪುಟ್ಟ ಹುಡುಗನೊಬ್ಬ ಶತಕ ಸಿಡಿಸಿದರೆ ತಂಡಕ್ಕೆ ಸಿಗುವ ಪಾಪ್ಯುಲಾರಿಟಿಯನ್ನು ಸರಿಯಾಗಿ ಲೆಕ್ಕಹಾಕಿತ್ತು. ಎಲ್ಲವೂ ಅವರೆಂದುಕೊಂಡಂತೆ ಆಯಿತು. That was the right investment.

ಜನಪ್ರಿಯತೆ, ಮೀಡಿಯಾ ಗ್ಲಿಟ್ಜ್, ಕ್ರಿಕೆಟ್ ಉದ್ಯಮದ ಲಾಭ ನಷ್ಟಗಳ ಲೆಕ್ಕಾಚಾರ ಮೀರಿ ವೈಭವ್ ಬೆಳೆಯಬೇಕು. ಪುಟ್ಟ ವಯಸ್ಸಿನಲ್ಲಿ ಅವರು ನಿಭಾಯಿಸಬೇಕಾದ್ದು ಬಹಳ ಇದೆ. ದಾರಿ ತೋರಲು ರಾಹುಲ್ ದ್ರಾವಿಡ್ ಇದ್ದಾರೆ ಎಂಬುದೊಂದೇ ಹರುಷದ ಸಂಗತಿ. ಶುಭವಾಗಲಿ.

ವೈಭವ್
ವೈಭವ್
ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

Download Eedina App Android / iOS

X