ಅಪ್ಪನ ಎದುರೇ ಮಗಳನ್ನು ಕಾರಿನಲ್ಲಿ ಅಪಹರಿಸಿದ ಆರೋಪ ಕೇಳಿ ಬಂದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ, ಅರೇಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಚನ್ನರಾಯಪಟ್ಟಣ ಮೂಲದ ಯುವಕ ಪ್ರಜ್ವಲ್ ಮತ್ತು ಮಲಸಾವರ ಗ್ರಾಮದ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ (19) ಪ್ರೇಮಿಗಳು. ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ಈ ವಿಚಾರ ತಿಳಿದ ಯುವತಿ ಪ್ರಸ್ಟಲ್ ಡಿಯಲಾರ ತಂದೆ-ತಾಯಿ ಮರಳಿ ಮನೆಗೆ ಬರುವಂತೆ ಮಗಳಿಗೆ ತಿಳಿಸಿದ್ದಾರೆ. ಪೋಷಕರ ಒತ್ತಡ ಹಿನ್ನೆಲೆಯಲ್ಲಿ ಯುವತಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಮರಳಿ ಮನೆಗೆ ಬಂದಿದ್ದಾರೆ. ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಮನೆಗೆ ಮರಳುತ್ತಿದ್ದಂತೆ ಯುವತಿಯ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪ್ರೇಮ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿರುವುದರ ಬಗ್ಗೆ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಪತಿ ಪ್ರಜ್ವಲ್ಗೆ ಹೇಳಿದ್ದಾರೆ
ಅರೇಹಳ್ಳಿ ಗ್ರಾಮಕ್ಕೆ ಪ್ರಜ್ವಲ್ ಬಂದು ಪತ್ನಿಯನ್ನು ತನ್ನ ಜೊತೆ ಕಳಸಿಕೊಡುವಂತೆ ಪ್ರಜ್ವಲ್ ಹೇಳಿದಾಗ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ (ಮೇ.13) ರಂದು ತಂದೆ ಜೊತೆ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ಅರೇಹಳ್ಳಿ ಪಟ್ಟಣದ ಹೈಸ್ಕೂಲ್ ಮುಂಭಾಗ ನಡೆದುಕೊಂಡು ಹೋಗುತ್ತಿರುವ ವೇಳೆ ಕಾರಿನಲ್ಲಿ ಬಂದ ಪ್ರಜ್ವಲ್, ತನ್ನ ಪತ್ನಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ರನ್ನು ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ತಹಶೀಲ್ದಾರರ ಭ್ರಷ್ಟಾಚಾರ ವಿರೋಧಿಸಿ ಕಚೇರಿಗೆ ಮುತ್ತಿಗೆ; ಪ್ರತಿಭಟನಾಕಾರರ ಬಂಧನ
ಈ ವೇಳೆ ತಡೆಯಲು ಹೋಗಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ ರ ತಂದೆ ಕಾರಿನ ಡೋರ್ಗೆ ಜೋತು ಬಿದ್ದಿದ್ದಾರೆ. ಚಾಲಕ ಮಾತ್ರ ಕಾರು ನಿಲ್ಲಿಸದೆ ಸುಮಾರು 200 ಮೀಟರ್ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ರ ತಂದೆಯನ್ನು ಎಳೆದೊಯ್ದಿದ್ದಾನೆ. ದಂಪತಿಗಳು ಚನ್ನರಾಯಪಟ್ಟಣ ಶಹರ ಠಾಣೆ ಪೊಲೀಸರ ಎದುರು ಹಾಜಾರಾಗಿದ್ದಾರೆ.