(ಮುಂದುವರಿದ ಭಾಗ..) ಕೃಷಿಯಲ್ಲಿ ಬಂಡವಾಳಶಾಹಿ ಉತ್ಪಾದನಾ ಸಂಬಂಧಗಳ ಬೆಳವಣಿಗೆ, ಸಾಮ್ರಾಜ್ಯಶಾಹಿ ಪ್ರೇರಿತ ಜಾಗತೀಕರಣ, ಉದಾರೀಕರಣ ನೀತಿಗಳ ಪರಿಣಾಮಗಳು ಕೃಷಿ ಬಿಕ್ಕಟ್ಟನ್ನು ತೀವ್ರಗೊಳಿಸಿತು. ಬಂಡವಾಳಶಾಹಿ ರೈತರು, ದೊಡ್ಡ ವ್ಯಾಪಾರಿಗಳು, ಗ್ರಾಮೀಣ ಶ್ರೀಮಂತರು ಒಂದು ಕಡೆ ಹಾಗೂ ಕೃಷಿ ಕೂಲಿಕಾರರು, ಬಡ ರೈತರು, ದೈಹಿಕ ದುಡಿಮೆಗಾರರು, ಕುಶಲಕರ್ಮಿಗಳು ಮತ್ತೊಂದು ಕಡೆ ವಿಭಜನೆಗೊಂಡ ಒಂದು ಗ್ರಾಮೀಣ ಚಿತ್ರಣ ಸ್ಪಷ್ಟವಾಗಿ ಎದ್ದುಕಾಣುವ ಬೆಳವಣಿಗೆ ಈ ಅವಧಿಯ ಪ್ರಧಾನ ಗುಣಲಕ್ಷಣವಾಯಿತು. ಗ್ರಾಮೀಣ ಶ್ರೀಮಂತರ ವಿಭಾಗಗಳೂ ಜಾಗತೀಕರಣ ಧೋರಣೆಗಳಿಂದಾಗಿ ತೀವ್ರ ಸಂಕಟವನ್ನು ಎದುರಿಸುವ ಪರಿಸ್ಥಿತಿ ಉಂಟಾಯಿತು….

ಟಿ. ಯಶವಂತ್
ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಟಿ.ಯಶವಂತ್‌ರವರು ಎಸ್‌ಎಫ್‌ಐ ಮುಖಂಡರಾಗಿದ್ದರು. ಸದ್ಯ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಡಪಂಥೀಯ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅವರು ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.