ದೇಶದ ನಿಜವಾದ ಸಂಪತ್ತು ಯುವಕರು ಹಾಗಾಗಿ ಯುವಕರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಚ್ಚು ಶಕ್ತಿ ಹೊಂದಬೇಕು. ಸದೃಢ ಭಾರತಕ್ಕೆ ಯುವಜನತೆಯೇ ಶಕ್ತಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದ ಯುವಸಮಾಲೋಚಕ ಹರ್ಷವರ್ಧನ್ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದ ಚಿತ್ರಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್ ಎಸ್. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ ಮೂಲಕ ಮಾಹಿತಿಯನ್ನು ತಿಳಿಸಿದರು.
“ಜೊತೆಗೆ ಯುವಜನತೆಗೆ ಸುರಕ್ಷತೆಯ ಬಗ್ಗೆ ಗಮನವಿರಬೇಕು ಹಾಗೆ ಇತ್ತೀಚೆಗೆ ಯುವಜನತೆ ಲೈಂಗಿತೆಯ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿರಬೇಕು. ಜೊತೆಗೆ ನಮ್ಮ ಭವಿಷ್ಯದ ಜೀವನಕ್ಕಾಗಿ ಇಂದು ಉತ್ತಮವಾದ ಮಾರ್ಗದರ್ಶನ ಪಡೆದು ವೃತ್ತಿಯ ಆಯ್ಕೆಗೆ ಅವಕಾಶ ಪಡೆಯುವಂತರಾಗಬೇಕು. ಆರೋಗ್ಯ ಮತ್ತು ಜೀವನ ಶೈಲಿ ಯುವಕರ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಯುವ ಜನತೆ ಹೆಚ್ಚು ದೈಹಿಕ ಚಟುವಟಿಕೆಗಳಿಗೆ ಗಮನ ಕೊಡಬೇಕು” ಎಂದು ಅಭಿಪ್ರಾಯಪಟ್ಟರು.

“ಮೊಬೈಲ್ ಬಳಕೆ ಕಡಿಮೆ ಮಾಡಿ ಮನುಷ್ಯರ ಜೊತೆ ಮನಸ್ಸಿಂದ ಮುಕ್ತವಾಗಿ ಮಾತನಾಡಿ ಹೆಚ್ಚು ಕ್ರಿಯಾಶೀಲವಾಗಿ ಸಬಲೀಕರಣದತ್ತ ಮುಂದುವರಿಯಬೇಕು. ಹಾಗೆ ನಮ್ಮ ಆತ್ಮೀಯರೊಟ್ಟಿಗೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪ್ರಯತ್ನ ಮಾಡಬೇಕು ಹಾಗೆ ಈ ಎಲ್ಲಾ ಅಂಶಗಳಿಂದ ಸದೃಡ ಯುವಕನಾಗಲು ಸಾಧ್ಯ” ಎಂದು ಮಾಹಿತಿ ನೀಡಿದರು.
ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಮೋಹನ್ ಮಾತನಾಡಿ “ವಿದ್ಯಾರ್ಥಿಗಳು ದೇಶದ ಯುವಶಕ್ತಿ ಪ್ರೇರಣೆಗೆ ಜೀವನ ಕೌಶಲ್ಯ ತರಬೇತಿ ತುಂಬಾ ಹೆಚ್ಚು ಪರಿಣಾಮ ಬೀರುವ ತರಬೇತಿಯಾಗಿದೆ. ನಿಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ, ಆಯ್ಕೆ ನಿಮ್ಮದು” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎನ್ ಎಸ್ ಎಸ್ ಅಧಿಕಾರಿಗಳಾದ ಮಂಜುನಾಥನಾಯ್ಕ್ ಹಾಗೂ ಪ್ರಾಧ್ಯಾಪಕರಾದ ರಮ್ಯ, ಹಾಗೂ ಯುವ ಪರಿವರ್ತಕಿಯರಾದ ಅಂಜಲಿ, ಮೇಘ, ಸುಷ್ಮಾ ಕಾಲೇಜಿನ ಬೋದಕ ಮತ್ತು ಬೋದಕೇತರ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.