ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಸಿಕೆರೆ ಗ್ರಾಮ ಸೇರಿದಂತೆ ಚಳ್ಳಕೆರೆ ನಗರ ಮತ್ತು ಇತರ ಗ್ರಾಮಗಳಲ್ಲಿ ಹಿಂದೂ ಮುಸ್ಲಿಮರ ಭಾವೈಕ್ಯತಾ ಹಬ್ಬ ಮೊಹರಂ ಹಬ್ಬವನ್ನು ಜನ ಸಡಗರದಿಂದ ಪಾಲ್ಗೊಂಡು ಆಚರಿಸಿದರು.

ಕಳೆದ ಮೂರು ದಿನಗಳ ಹಿಂದೆಯೇ ಪ್ರಾರಂಭವಾಗಿರುವ ಮೊಹರಂ ಹಬ್ಬವನ್ನು ಸೋಮವಾರದವರೆಗೆ ಐದು ದಿನಗಳು ಆಚರಿಸುವ ಸಂಪ್ರದಾಯವಿದ್ದು, ಮೊಹರಂ ಅನ್ನು ಪೀರ ದೇವರ ಹಬ್ಬ ಎಂದು ಕೂಡ ಈ ಭಾಗದಲ್ಲಿ ಕರೆಯುತ್ತಾರೆ. ಪೀರ ದೇವರು, ಅಲಿ, ಲಾಲ್, ಚಾಂದ್, ಹುಸೇನ್ ಸೇರಿದಂತೆ ಐದು ದೇವರುಗಳನ್ನು ಪ್ರತಿಷ್ಠಾಪಿಸಿ, ಮೆರವಣಿಗೆಯನ್ನು ಕೂಡ ಮಾಡುವುದು ಭಾವೈಕ್ಯತೆ ಹಬ್ಬ ಮೊಹರಂ ವಿಶೇಷವಾಗಿದ್ದು, ಇದರಲ್ಲಿ ಯಾವುದೇ ಅಡೆತಡೆ ಇಲ್ಲದೆ ಹಿಂದು ಮುಸ್ಲಿಮರು ಭಾವೈಕ್ಯತೆಯಿಂದ ಪಾಲ್ಗೊಂಡು ಭಕ್ತಿ ಸಮರ್ಪಿಸುತ್ತಾರೆ.

ಅಲಾಯಿ ಕುಣಿಯನ್ನು ಮಾಡಿ ಅದರ ಸುತ್ತ ದೇವರೊಂದಿಗೆ ಭಕ್ತರು ಪ್ರದಕ್ಷಿಣೆ ಹಾಕಿ ದೇವರಿಗೆ ಭಕ್ತಿ ಸಲ್ಲಿಸಿ ಬೇಡಿಕೊಳ್ಳುವುದು ವಾಡಿಕೆ. ಶನಿವಾರ ಚಳ್ಳಕೆರೆ ತಾಲೂಕಿನ ಗೋಸಿಕೆರೆ ಗ್ರಾಮದಲ್ಲಿ ಅಲಾಯಿ ಕುಣಿ ಮಾಡಿ ಅದರ ಸುತ್ತ ಪ್ರದಕ್ಷಿಣೆ ಹಾಕಿ ಸಾವಿರಾರು ಭಕ್ತರು ಪ್ರೀತಿ ಸಮರ್ಪಿಸಿದರು. ಕಷ್ಟಗಳನ್ನು ಸುಡುವ ಪ್ರತೀಕವಾಗಿ ಅಲಾಯಿ ಕುಣಿಗೆ ಬೆಂಕಿಯನ್ನು ಹಾಕಿ ಅದರ ಸುತ್ತ ಕಷ್ಟಗಳನ್ನು ಕಳೆಯಲೆಂದು ಬೇಡಿಕೆ ಈಡೇರಿಕೆಗೆ ಪ್ರದಕ್ಷಿಣೆ ಹಾಕುತ್ತಾ ಭಕ್ತಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ದಾವಣಗೆರೆ ಮುಸ್ಲಿಂ ಒಕ್ಕೂಟ ಮಾನವ ಸರಪಳಿ ರಚಿಸಿ ಫ್ರತಿಭಟನೆ
ಅಲ್ಲದೆ ಹೊಳಲ್ಕೆರೆ ತಾಲೂಕಿನ ಬಿದುರ್ಗ, ಚಿಕ್ಕಜಾಜೂರು, ಹೊಸದುರ್ಗ ತಾಲೂಕಿನ ಜಾನಕಲ್ಲು,
ಹಿರಿಯೂರು ತಾಲೂಕಿನ ಹಲವು ಗ್ರಾಮಗಳು ಸೇರಿದಂತೆ ಹಲವೆಡೆ ಮೊಹರಂ ಹಬ್ಬವನ್ನು ವಿಶೇಷವಾಗಿ ಭಾವೈಕ್ಯತೆಯಿಂದ ಆಚರಿಸಲಾಗುತ್ತದೆ.