ಗಾಜಾ | 100 ಗಂಟೆಗಳಲ್ಲಿ ಇಸ್ರೇಲ್‌ನಿಂದ 59 ಹತ್ಯಾಕಾಂಡ; 288 ಪ್ಯಾಲೆಸ್ತೀನಿಯರ ನರಮೇಧ

Date:

Advertisements

ಕಳೆದ 100 ಗಂಟೆಗಳಲ್ಲಿ ಇಸ್ರೇಲ್ ಪಡೆಗಳು ಗಾಜಾದಲ್ಲಿ 59 ಹತ್ಯಾಕಾಂಡಗಳನ್ನು ನಡೆಸಿದೆ. 288 ಪ್ಯಾಲೆಸ್ತೀನಿ ನಾಗರಿಕರು ಮೃತಪಟ್ಟಿದ್ದಾರೆ. ಅವರಲ್ಲಿ 99 ಮಂದಿ ನೆರವು ವಿತರಣಾ ಕೇಂದ್ರಗಳಲ್ಲಿ ಮೃತಪಟ್ಟಿದ್ದಾರೆ ಎಂದು ಗಾಜಾದ ಸರಕಾರಿ ಮಾಧ್ಯಮ ಕಚೇರಿ ಹೇಳಿದೆ.

“ಗಾಜಾದ ನೆರವು ವಿತರಣಾ ಕೇಂದ್ರಗಳಲ್ಲಿ ಆಹಾರ ಮತ್ತು ಆಶ್ರಯವನ್ನು ಪಡೆಯಲು ಪ್ರಯತ್ನಿಸುತ್ತಿದ್ದ ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿಯನ್ನು ನಡೆಸಿದೆ. ಈ ದಾಳಿಯು ಉದ್ದೇಶಪೂರ್ವಕ ಕೃತ್ಯ. ಇತ್ತೀಚಿನ ದಾಳಿಗಳ ವೇಳೆ ಒಟ್ಟು 1,088 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಾನವೀಯ ನೆರವು ವಲಯಗಳೆಂದು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಗಾಯಗೊಂಡಿದ್ದಾರೆ. ನೆರವು ಕೇಂದ್ರಗಳು ಸಾವಿನ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇಸ್ರೇಲ್ ಉದ್ದೇಶಪೂರ್ವಕವಾಗಿ ನಿರಾಶ್ರಿತರ ಕೇಂದ್ರಗಳು, ಕಿಕ್ಕಿರಿದ ಆಶ್ರಯಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡಿದೆʼ ಎಂದು ಗಾಜಾದಲ್ಲಿನ ಸರಕಾರಿ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಉದ್ದೇಶಪೂರ್ವಕವಾಗಿ ಸಾವಿರಾರು ಸ್ಥಳಾಂತರಗೊಂಡ ಜನರು ಸೇರಿದ್ದ ಆಶ್ರಯ ತಾಣಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ಮಾಡಿದೆ. ದಾಳಿಗೊಳಗಾದ ಪ್ರದೇಶಗಳಲ್ಲಿ ʼಅಲ್-ಮವಾಸಿʼ ಕೂಡ ಒಂದು. ಇದನ್ನು ಇಸ್ರೇಲ್ ಪಡೆಗಳು ಈ ಹಿಂದೆ “ಸುರಕ್ಷಿತ ವಲಯ” ಎಂದು ಘೋಷಿಸಿತ್ತು. ಈ ಪ್ರದೇಶದಲ್ಲಿ ಆಹಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದ ನಾಗರಿಕರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ. ಇಸ್ರೇಲ್ ಕ್ರಮವು ʼಕ್ರೂರ ಅಪರಾಧʼವಾಗಿದ್ದು, ಅಂತಾರಾಷ್ಟ್ರೀಯ ಮಾನವೀಯ ಮತ್ತು ಕಾನೂನು ಸಂಸ್ಥೆಗಳು ಮಧ್ಯಪ್ರವೇಶಿಸಿ “ವ್ಯವಸ್ಥಿತ ದೈನಂದಿನ ನರಮೇಧ”ವನ್ನು ನಿಲ್ಲಿಸುವಂತೆ ಗಾಜಾದ ಸರಕಾರಿ ಮಾಧ್ಯಮ ಕಚೇರಿಯು ಆಗ್ರಹಿಸಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ‘ಅಚ್ಛೇ ದಿನ’ದಲ್ಲಿ ಸಾಮಾನ್ಯರಿಗೆ ಸಾಲದ ಹೊರೆ

ಪ್ಯಾಲೆಸ್ತೀನಿ ಆರೋಗ್ಯ ಸಚಿವಾಲಯ ರಕ್ತ ಪೂರೈಕೆಯ ತೀವ್ರ ಕೊರತೆಯ ಬಗ್ಗೆ ಎಚ್ಚರಿಕೆ ನೀಡಿದೆ. ಕಳೆದ ತಿಂಗಳಲ್ಲಿ ಗಾಜಾ ಆಸ್ಪತ್ರೆಗಳು 10,000 ಯೂನಿಟ್ ರಕ್ತವನ್ನು ಬಳಸಿವೆ. ಆದರೆ ಕೇವಲ 3,500 ಯೂನಿಟ್‌ಗಳನ್ನು ಮರುಹೊಂದಿಕೆ ಮಾಡಲಾಗಿದೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ಮಾಡಲಾಗಿದೆ. ಇದು ತುರ್ತು ಪ್ರತಿಕ್ರಿಯೆ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಿದೆ ಎಂದು ಗಾಜಾದ ಸರಕಾರಿ ಮಾಧ್ಯಮ ಕಚೇರಿ ತಿಳಿಸಿದೆ.

ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆ ಬಳಿಕ ಒಟ್ಟು 57,418 ಪ್ಯಾಲೆಸ್ತೀನಿ ನಾಗರಿಕರು ಮೃತಪಟ್ಟಿದ್ದಾರೆ ಮತ್ತು 1,36,261 ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಹಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ 700ಕ್ಕೂ ಹೆಚ್ಚು ಪ್ಯಾಲೆಸ್ತೀನಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ʼಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ʼನ (ಜಿಎಚ್‌ಎಫ್‌) ನೆರವು ವಿತರಣಾ ಕೇಂದ್ರಗಳಲ್ಲಿ ಕನಿಷ್ಠ 743 ನಾಗರಿಕರು ಮೃತಪಟ್ಟಿದ್ದಾರೆ. 4,891 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ | ಟ್ರಂಪ್ ಬಜೆಟ್‌ಗೆ ಸಿಗದ ಅನುಮೋದನೆ; ಸರ್ಕಾರದ ಕೆಲಸಗಳು ಸ್ಥಗಿತ!

ಅಮೆರಿಕ ಸೆನೆಟ್‌ನಲ್ಲಿ ಮಂಡಿಸಲಾದ ತಾತ್ಕಾಲಿಕ ಹಣಕಾಸು ಮಸೂದೆಗೆ (ಬಜೆಟ್‌) ಅನುಮೋದನೆ ದೊರೆಯದ...

ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ: 69 ಸಾವು, 140ಕ್ಕೂ ಹೆಚ್ಚು ಮಂದಿಗೆ ಗಾಯ

ಫಿಲಿಪೈನ್ಸ್‌ನ ಮಧ್ಯ ಭಾಗದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ 69...

ಸೌದಿ ಅರೇಬಿಯಾ | ವಿಸಿಟಿಂಗ್ ವೀಸಾದಲ್ಲಿರುವವರಿಗೆ ‘ವಿಸಿಟರ್ ಐಡಿ’ ಬಳಸಿ ಬ್ಯಾಂಕ್ ಖಾತೆ ತೆರೆಯಲು ಅವಕಾಶ

ಸೌದಿ ಅರೇಬಿಯಾಕ್ಕೆ ವಿಸಿಟಿಂಗ್ ವೀಸಾದ ಮೂಲಕ ಭೇಟಿ ನೀಡುವವರು ಇನ್ನು ಮುಂದೆ...

ಪಾಕಿಸ್ತಾನ | ಬಲೂಚಿಸ್ತಾನದಲ್ಲಿ ಬಾಂಬ್ ದಾಳಿ: 10 ಮಂದಿ ಸಾವು

ಪಾಕಿಸ್ತಾನದ ವಿವಾದಿತ ರಾಜ್ಯವಾದ ಬಲೂಚಿಸ್ತಾನದಲ್ಲಿ ಅರೆಸೈನಿಕ ಪಡೆಗಳ ಮೇಲೆ ಬಾಂಬ್‌ ದಾಳಿ...

Download Eedina App Android / iOS

X