ಮೈಸೂರು ಜಿಲ್ಲೆ, ಸರಗೂರು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ತುಂಬಸೋಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ, ಚುನಾಯಿತ ಜನ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಮ್ಮುಖದಲ್ಲಿ ‘ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ” ಸಭೆ ನಡೆಯಿತು.
ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್ ಮಾತನಾಡಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಗಳಿಗೆ 2025-26ನೇ ಸಾಲಿನ ಆರ್ಥಿಕ ವರ್ಷದ ಅನುದಾನವನ್ನು ಆರೋಗ್ಯ ಕೇಂದ್ರ ಎಸ್ ಎನ್ ಎ ಖಾತೆಗೆ ಬಿಡುಗಡೆ ಮಾಡುವ ಹಿನ್ನೆಲೆಯಲ್ಲಿ, ಲಭ್ಯವಿರುವ ಅನುದಾನವನ್ನು ನಿಯಮಾನುಸಾರ ಬಳಕೆ ಮಾಡಿಕೊಳ್ಳಲು ತಿಳಿಸಿದರು.

- ಗ್ರಾಮ ಆರೋಗ್ಯ ಕುರಿತು ಚರ್ಚಿಸುವುದು ಹಾಗೂ 2025-26ನೇ ಸಾಲಿಗೆ ಸಂಬಂಧಿಸಿದಂತೆ ಗ್ರಾಮಗಳ ಕ್ರಿಯಾ ಯೋಜನೆಯ ಬಗ್ಗೆ ಚರ್ಚಿಸಿ, ತಯಾರಿಸುವುದು.
- ಜುಲೈ. 11 ರಂದು ವಿಶ್ವ ಜನ ಸಂಖ್ಯೆ ದಿನಾಚರಣೆ ಯನ್ನೂ ಕಡ್ಡಾಯವಾಗಿ ಮಾಡಬೇಕು
- ವಿಶ್ವಾಸ್ ಆಂದೋಲನದ ವ್ಯಾಪ್ತಿಯಲ್ಲಿ ಕೈ ತೊಳೆಯುವ ವಿಧಾನ ಮತ್ತು ಮಹತ್ವದ ಕುರಿತು VHSNC ಸಭೆಗಳಲ್ಲಿ ಅರಿವು ಮೂಡಿಸುವುದು ಹಾಗೂ ಅಣುಕು ಪ್ರದರ್ಶನ ಕೈಗೊಳ್ಳುವುದು.
- 2025-26ರ ಆರ್ಥಿಕ ವರ್ಷದಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ಸಮುದಾಯ ಮಟ್ಟದಲ್ಲಿ ಅನುಷ್ಠಾನ ಮಾಡುವ ಬಗೆ ರೂಪುರೇಷೆಗಳ ಕುರಿತು ಚರ್ಚೆ.
- ಕುಷ್ಠರೋಗ ಪತ್ತೆ ಹಚ್ಚುವಿಕೆ ಮತ್ತು ನಿರ್ಮೂಲನೆಗೆ ಇರುವ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು.
- ಗೃಹ ಆರೋಗ್ಯ ಕಾರ್ಯಕ್ರಮದ ರೂಪುರೇಷೆ, ಸೌಲಭ್ಯ ಮತ್ತು ಸವಲತ್ತುಗಳು ಹಾಗೂ ಕಾರ್ಯಕ್ರಮದ ಅನುಷ್ಠಾನ ಕುರಿತ ಸಭೆಯಲ್ಲಿ ಚರ್ಚಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸುವುದು.
- ಕಿಲ್ಕಾರಿ ದೂರವಾಣಿ ಕರೆ ಬಗ್ಗೆ, ಗ್ರಾಮದಲ್ಲಿರುವ ಎಲ್ಲಾ ಗರ್ಭಿಣಿಯರ ನೋಂದಾಯಿತ ಮೊಬೈಲ್ ಫೋನ್ ನಲ್ಲಿ ಕಿಲ್ಕಾರಿ ಸಂಖ್ಯೆಯಾದ 01244451660 ಸೇರಿಸುವಂತೆ ಮಾಡಿಸುವುದು ಹಾಗೂ ಆ ಕೆರೆಯನ್ನು ಸ್ವೀಕರಿಸಿ ಕನಿಷ್ಠ 3 ನಿಮಿಷಗಳ ಮಾಹಿತಿಯನ್ನು ಕೇಳಿಸಿಕೊಳ್ಳಲು ಪ್ರೇರಿಪಿಸುವುದು. ಪುನಃ ಕೇಳಲು ಕಿಲ್ಕಾರಿ ಸಹಾಯವಾಣಿ ಸಂಖ್ಯೆ:14423
- ಕ್ಷಯರೋಗ ಬಗ್ಗೆ ಮಾಹಿತಿ ನೀಡಿದರು.
- ಸಮುದಾಯ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಡೆಂಗ್ಯೂ, ಮಲೇರಿಯಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು.
- ಗರ್ಭಿಣಿ ಮತ್ತು ಬಾಣಂತಿಯ ಮಹಿಳೆಯರಿಗೆ ಅನೀಮಿಯಾ ಮತ್ತು ಪೌಷ್ಟಿಕ ಆಹಾರ ಬಗ್ಗೆ ಮಾಹಿತಿ ನೀಡುವುದು.
- ಬಾಲ್ಯ ವಿವಾಹ ನಿಷೇಧ, ಭ್ರೂಣ ಹತ್ಯೆಗಳು ಮತ್ತು ಪೋಕ್ಸೋ ಕಾಯ್ದೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
- ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆ ಹಾಗೂ ಸವಲತ್ತು ಮತ್ತು ಸೌಲಭ್ಯಗಳ ಕುರಿತು ಚರ್ಚಿಸಲಾಯಿತು.
A) ಅರ್ಹ ಫಲಾನುಭವಿಗಳಿಗೆ ಜೆ.ಎಸ್.ವೈ ಸೌಲಭ್ಯ ಒದಗಿಸಲು ಕ್ರಮ ವಹಿಸುವುದು.
B) ಟಿ.ಬಿ/ಹೆಚ್.ಐ.ವಿ ರೋಗಿಗಳಿಗೆ ಪೌಷ್ಟಿಕ ಆಹಾರಗಳ ಕಿಟ್ ವಿತರಣೆಗೆ ಸಂಬಂಧಿಸಿದಂತೆ (ದಾನಿಗಳಿಂದ) ಕ್ರಮವಹಿಸುವುದು.
C) ತಾಯಿ ಕಾರ್ಡ್ ನಲ್ಲಿ ಆರೋಗ್ಯ ಸೇವೆಗಳ ಎಲ್ಲಾ ಮಾಹಿತಿಗಳು ದಾಖಲೀಕರಣ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು.
D) ಎನ್.ಸಿ.ಡಿ ಕಾರ್ಯಕ್ರಮದಡಿಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು. (BP, diabetic, ಇತ್ಯಾದಿ (ವೃದ್ಧಾಪ್ಯದಲ್ಲಿ ಕಂಡುಬರುವ ಸಾಮಾನ್ಯ ಖಾಯಿಲೆಗಳ ಬಗ್ಗೆ ಮಾಹಿತಿ ನೀಡುವುದು.)
E) ಪ್ರತಿ ಮಾಹೆ 9ನೇ ತಾರೀಖು ನಡೆಯುವ PMSMA ಮತ್ತು ಪ್ರತಿ ಮಾಹೆ 24ನೇ ತಾರೀಖು ನಡೆಯುವ ePMSMA ಕಾರ್ಯಕ್ರಮದಲ್ಲಿ (ಸಾರ್ವತ್ರಿಕ ರಜೆಗಳ ಬದಲಾಗಿ ಸರ್ಕಾರ ನಿಗಧಿ ಪಡಿಸಿದ ದಿನದಂದು) ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ ಯನ್ನು ಎಲ್ಲ ಸಮುದಾಯ ಆರೋಗ್ಯ ಕೇಂದ್ರ,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುತ್ತದೆ,ಅದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದರು.
F) ಅರ್ಹ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆನ್ನು ಹಾಕಿಸುವಂತೆ ತಿಳಿಸಿದರು .
G) ಅಂಧತ್ವ ಕಾರ್ಯಕ್ರಮದಡಿಯಲ್ಲಿ ಹಿರಿಯ ನಾಗರಿಕರಿಗೆ 40 ವರ್ಷ ಮೇಲ್ಪಟ್ಟವರಿಗೆ ಉಚಿತ ಕನ್ನಡಕ ವಿತರಣೆ. ಮಾಡುತ್ತೇವೆ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಪಡೆದುಕೊಳ್ಳಿ ಎಂದು ತಿಳಿಸಿದರು.
H) ಪ್ಲೋರೋಸಿಸ್ ಕಾರ್ಯಕ್ರಮದಡಿಯಲ್ಲಿ ಕುಡಿಯುವ ನೀರಿನ ಮಾದರಿ ಸಂಗ್ರಹಣೆ ಮತ್ತು ಪರೀಕ್ಷೆಗೆ ಒಳಪಡಿಸುತ್ತಿದೇವೆ, ಎಂದರು .
I) ಪೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಮನವರಿಕೆ ಮಾಡಿ ಕೊಡಲಾಯಿತು.
J) ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭವಾಗಿರುವ District early intervention centre ಕುರಿತು ಮಾಹಿತಿ ರವಾನೆ ಮಾಡುವುದು ಹಾಗೂ ಇತರೆ ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಸರ್ಕಾರದ ಯೋಜನೆಗಳು, ಸವಲತ್ತುಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮಹರ್ಷಿ ವಾಲ್ಮೀಕಿ, ಭಗೀರಥ ಮಹರ್ಷಿ, ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡಿದ ಸಚಿವ ಕೆ ವೆಂಕಟೇಶ್
ಈ ಸಭೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಮಧುರ, ಗ್ರಾಮ ಪಂಚಾಯತಿ ಸದಸ್ಯರಾದ ಚೆನ್ನ ನಾಯ್ಕ ,ನಾಗೇಂದ್ರ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರಾದ ನಾಗೇಂದ್ರ, ಅರ್ಚನಾ, ಪುಷ್ಪ, ರೇಖಾ ರವಿರಾಜ್, ಸಮುದಾಯ ಆರೋಗ್ಯ ಅಧಿಕಾರಿ ಮಾನಸ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಇನ್ನಿತರರು ಇದ್ದರು.