ರಾಯಚೂರು | ಹತ್ತಿ ಬೀಜೋತ್ಪಾದನೆ ರೈತರಿಗೆ ವಂಚನೆ; ಅಕ್ರಮ ಖಾಸಗಿ ಕಂಪನಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ

Date:

Advertisements

ರೈತರಿಗೆ ವಂಚನೆ ಮಾಡುತ್ತಿರುವ ಸದರಿ ಅನಧಿಕೃತ ಖಾಸಗಿ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ವತಿಯಿಂದ ಲಿಂಗಸುಗೂರು ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು .

ತಾಲ್ಲೂಕಿನ ಈಚಿನಾಳ, ಹಲ್ಕಾವಟಗಿ, ತೊಂಡಿಹಾಳ, ಸಜ್ಜಲಗುಡ್ಡ, ಕೋಮನೂರು ಹಾಗೂ ಗುರುಗುಂಟಾ ಹೋಬಳಿಯ ಹಲವಾರು ದೊಡ್ಡಿಗಳಲ್ಲಿ ನಾನಾ ಬಗೆಯ ಕಂಪನಿಗಳ ಹೆಸರು ಹೇಳಿಕೊಂಡು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬೀಜ ಉತ್ಪಾದನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

100 ಹೆಕ್ಟರ್‌ಗೂ ಅಧಿಕ ಕೃಷಿ ಜಮೀನಿನಲ್ಲಿ ಅಂದಾಜು 200 ರಿಂದ 250 ರೈತರಿಗೆ ಹತ್ತಿ ಬೀಜೋತ್ಪದನೆಗಾಗಿ ಅಧಿಕಾರಿಗಳ ಗಮನಕ್ಕಿಲ್ಲದೇ ತಾಲೂಕಿನಲ್ಲಿ ರೈತರಿಗೆ ವಂಚನೆ ಮಾಡಿ ಬೀಜಗಳನ್ನು ಹಂಚಿಕೆ ಮಾಡಿರುತ್ತಾರೆ ಇದರ ಬಗ್ಗೆ ವಿಚಾರಿಸಿದರೆ ರೈತರಿಗೆ ಬೀಜ ಗೊಬ್ಬರ ಹಾಗೂ ಬೆಳೆಗೆ ಬೇಕಾದ ಖರ್ಚು ವೆಚ್ಚಗಳನ್ನು ಕಂಪನಿಯ ವತಿಯಿಂದ ಕೊಡಲಾಗುತ್ತದೆ ಅಲ್ಲದೇ ಆ ಬೀಜಗಳನ್ನು ಕಂಪನಿಯಿಂದ ಖರೀದಿಸಲಾಗುವುದೆಂದು ಮೌಖಿಕವಾಗಿ ಹೇಳಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಯಾವುದೇ ಒಪ್ಪಂದ ಕರಾರು ಪತ್ರವನ್ನು ಮಾಡಿಕೊಂಡಿರುವುದಿಲ್ಲ ಎಂದು ಆರೋಪಿಸಿದರು.

ಬೆಳೆ ಈಗಾಗಲೇ ಕಟಾವಿಗೆ ಬಂದಿದ್ದು ಕಂಪನಿಯವರು ಕೇವಲ 2 ಕ್ವಿಂಟಲ್ ಖರೀದಿ ಮಾಡುತ್ತೇವೆ ಅದರ ಖರ್ಚು ವೆಚ್ಚ ಕಂಪನಿಯವರು ಕೊಡುವುದಿಲ್ಲ ಎನ್ನುತ್ತಿದ್ದಾರೆ. ಇದರಿಂದ ನಂಬಿದ ರೈತರಲ್ಲಿ ಆತಂಕ ಮನೆ ಮಾಡಿದೆ. ಸುಳ್ಳು ಭರವಸೆ ನೀಡಿದ ಅನಧಿಕೃತ ಖಾಸಗಿ ಕಂಪನಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ವೇಶ್ಯಾವಾಟಿಕೆ ಹೋಟೆಲ್ ಮೇಲೆ ದಾಳಿ ; ನಾಲ್ವರ ಬಂಧನ

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಪುತ್ರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಆನಂದ ಕುಮಾ‌ರ್, ತಾಲ್ಲೂಕಧ್ಯಕ್ಷ ದುರ್ಗಾಪ್ರಸಾದ, ಹನಮನಗೌಡ ಸೇರಿದಂತೆ ಹಲವರು ಇದ್ದರು .

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ನಾಳೆ ‘ಮಾದಕ ಮುಕ್ತ ಸಮಾಜ ಮತ್ತು ಡಿಜಿಟಲ್ ಸ್ವಾತಂತ್ರ್ಯ’ ಕುರಿತು ಜಿಲ್ಲಾ ಮಟ್ಟದ ಯುವ ಸಮಾವೇಶ

"ಮಾದಕ ವಸ್ತುಗಳ ಸೇವನೆ ಹಾಗೂ ಡಿಜಿಟಲ್ ವ್ಯಸನದಿಂದ ಯುವಕರು ತಮ್ಮ ಜೀವನವನ್ನು...

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

Download Eedina App Android / iOS

X