ರೈಲ್ವೆ ಕ್ರಾಸಿಂಗ್‌ನ ಗೇಟ್‌ಕೀಪರ್‌ಗೆ ತಮಿಳು ಗೊತ್ತಿಲ್ಲದ್ದು ಶಾಲಾ ವ್ಯಾನ್ ಅಪಘಾತಕ್ಕೆ ಕಾರಣವಾಗಿರಬಹುದು: ಡಿಎಂಕೆ ನಾಯಕ

Date:

Advertisements

ತಮಿಳುನಾಡಿನ ಕಡಲೂರಿನಲ್ಲಿ ಸಂಭವಿಸಿದ ಶಾಲಾ ವ್ಯಾನ್ ಅಪಘಾತಕ್ಕೆ ತಮಿಳು ಭಾಷೆ ಬರದಿರುವುದೇ ಕಾರಣವಾಗಿರಬಹುದು ಎಂದು ಡಿಎಂಕೆಯ ಹಿರಿಯ ನಾಯಕ ಟಿಕೆಎಸ್ ಎಳಂಗೋವನ್ ಮಂಗಳವಾರ ಆರೋಪಿಸಿದ್ದಾರೆ. “ರೈಲ್ವೆ ಕ್ರಾಸಿಂಗ್‌ನಲ್ಲಿದ್ದ ಗೇಟ್‌ಕೀಪರ್ ತಮಿಳು ಭಾಷಿಕರಲ್ಲ, ಸರಿಯಾಗಿ ಸಂವಹನ ನಡೆಯದ್ದು ಈ ದುರಂತಕ್ಕೆ ಕಾರಣವಾಗಿರಬಹುದು” ಎಂದು ಡಿಎಂಕೆ ನಾಯಕ ಅಭಿಪ್ರಾಯಿಸಿದರು.

ಕಡಲೂರು ಮತ್ತು ಅಲಪ್ಪಕ್ಕಂ ನಡುವಿನ ಇಂಟರ್‌ಲಾಕ್ ಇಲ್ಲದ ಲೆವೆಲ್ ಕ್ರಾಸಿಂಗ್‌ನ ಗೇಟ್ ಸಂಖ್ಯೆ 170ರಲ್ಲಿ ಬೆಳಿಗ್ಗೆ 7.45ರ ಸುಮಾರಿಗೆ ಐದು ವಿದ್ಯಾರ್ಥಿಗಳಿದ್ದ ಶಾಲಾ ವ್ಯಾನ್‌ ಅಪಘಾತಕ್ಕೀಡಾಗಿದೆ. ಚಾಲಕ ರೈಲು ಬರುವ ಕಾರಣ ಗೇಟ್ ಮುಚ್ಚಿದ್ದಾಗ ಹಳಿ ದಾಟಿ ವಾಹನ ಚಲಾಯಿಸಲು ಯತ್ನಿಸಿದ್ದ ಎನ್ನಲಾಗಿದೆ.

ಇದನ್ನು ಓದಿದ್ದೀರಾ? ತಮಿಳುನಾಡು | ಬಿಜೆಪಿ ನಾಯಕನ ಕೊಲೆ; ಡಿಎಂಕೆ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

ಈ ವೇಳೆ ವಿಲುಪುರಂ-ಮೈಲಾಡುತುರೈ ಪ್ಯಾಸೆಂಜರ್ ಸೇವೆಯ ರೈಲು ಸಂಖ್ಯೆ 56813, ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ನಿಮಿಲೇಶ್ (12), ಚಾರುಮತಿ (16) ಮತ್ತು ಚೆಝಿಯಾನ್ ಎಂದು ಗುರುತಿಸಲಾಗಿದೆ. ಉಳಿದವರು ಇನ್ನೂ ಕಡಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಘಟನೆಯ ನಂತರ ಪಂಕಜ್ ಶರ್ಮಾ ಎಂದು ಗುರುತಿಸಲಾದ ಗೇಟ್‌ಕೀಪರ್ ಅನ್ನು ಅಮಾನತುಗೊಳಿಸಲಾಗಿದ್ದು, ತನಿಖೆಯ ಭಾಗವಾಗಿ ಬಂಧಿಸಲಾಗಿದೆ. ಶರ್ಮಾ ಗೇಟ್ ಮುಚ್ಚುತ್ತಿರುವಾಗ ಹಳಿ ದಾಟಿ ವಾಹನ ಚಲಾಯಿಸದಂತೆ ಎಚ್ಚರಿಕೆ ನೀಡಿದ್ದರೂ ವ್ಯಾನ್ ಚಾಲಕ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ತಮಿಳು ಬಾರದಿರುವುದು ಕಾರಣವಾಗಿರಬಹುದು ಎಂದು ಡಿಎಂಕೆ ನಾಯಕ ಅಭಿಪ್ರಾಯಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದು ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಡಿಕ್ಕಿಗೆ ಕಾರಣ ಪತ್ತೆಗಾಗಿ ಸದ್ಯ ರೈಲ್ವೆ ಮತ್ತು ಸ್ಥಳೀಯ ಪೊಲೀಸರ ಜಂಟಿ ತನಿಖೆ ನಡೆಯುತ್ತಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

Download Eedina App Android / iOS

X