ಉಡುಪಿ | ಶಾಸಕರೇ, ಮೊದಲು ಕೊರಗರಿಗೆ ಪೌಷ್ಟಿಕ ಶುಧ್ಧ ಆಹಾರ ನೀಡಿ – ಶ್ಯಾಮರಾಜ್ ಬಿರ್ತಿ

Date:

Advertisements

ಸಮಾಜದ ಕಟ್ಟ ಕಡೆಯ ಸಮುದಾಯವಾದ ಕೊರಗರಿಗೆ ಕಳಪೆ, ಕಲಬೆರಕೆಯ ಆಹಾರ ಪೂರೈಕೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ಸಹ ನೀಡಿದ್ದೇವೆ. ಒಬ್ಬ ನಮ್ಮ ಜನಪ್ರತಿನಿಧಿಯಾಗಿ ಮನುಷ್ಯರ ಆಹಾರದ ಬಗ್ಗೆ ಧ್ವನಿ ಎತ್ತದ ತಾವು ಪ್ರಾಣಿಗಳ ಮೇವಿನ ಬಗ್ಗೆ ಅತೀವ ಕಾಳಜಿವಹಿಸುವುದು ದುರಂತವೇ ಸರಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ಉಡುಪಿ ಶಾಸಲ ಯಶ್ಫಾಲ್ ಸುವರ್ಣರವರಿಗೆ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರ, ಅಪೌಷ್ಟಿಕತೆಯಿಂದ ಇಡೀ ಕೊರಗ ಜನಾಂಗವೇ ನಶಿಸುತ್ತಿರುವ ಈ ಸಂದರ್ಭದಲ್ಲಿ ಒಂದು ಪ್ರಾಣಿಯ ಬಗ್ಗೆ ಸಚಿವರಿಗೆ ಪತ್ರ ಬರೆದಿರುವ ಯಶಪಾಲ್ ಸುವರ್ಣರ ಬಗ್ಗೆ ಸೋಜಿಗವೆನಿಸುತ್ತದೆ. ಅದೂ ಅಲ್ಲದೇ ಇಲ್ಲೇ ಪಕ್ಕದ ಬಾರಕೂರು ಹನೆಹಳ್ಳಿಯ ಸೆಂಟ್ರಿಂಗ್ ಕೆಲಸ ಮಾಡುವ ಕ್ರಷ್ಣ ಎಂಬ ದಲಿತ ಯುವಕನನ್ನು ಯಾರೋ ಅಪರಿಚಿತರು ಶೂಟೌಟ್ ಮಾಡಿದಾಗ ಧ್ವನಿ ಎತ್ತದ ತಾವು (ಆರೋಪಿಗಳು ಇಂದಿಗೂ ಪತ್ತೆಯಾಗಿಲ್ಲ), ಅತೀ ಹೆಚ್ಚು ದನದ ಮಾಂಸವನ್ನು ರಫ್ತು ಮಾಡುವ ದೇಶಗಳಲ್ಲಿಭಾರತ ದೇಶವು ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದೆ. ಇದರ ಕನಿಷ್ಠ ಜ್ಞಾನವೂ ತಮಗಿಲ್ಲವೇ‌ ಎಂದು ಪ್ರಶ್ನಿಸಿದ್ದಾರೆ.

ದನ ಎನ್ನುವ ಪ್ರಾಣಿಯು ತಮಗೆ ಗೋಮಾತೆಯಾದರೆ ದಯವಿಟ್ಟು ಅದನ್ನು ಮನೆಯಲ್ಲಿ ಕಟ್ಟಿಕೊಂಡು ಪೂಜಿಸಿ ನಮ್ಮದೇನೂ ಅಭ್ಯಂತರವಿಲ್ಲ ಆದರೆ ದೇಶಾದ್ಯಂತ ಇರುವ ದನದ ಮಾಂಸದವನ್ನು ರಫ್ತು ಮಾಡುವ ಕಾರ್ಖಾನೆಯನ್ನು ಮುಚ್ಚಿಸುವ ಬಗ್ಗೆ ಮಾತನಾಡದೇ, ಬರೀ ಇಲ್ಲಿ ಮಾತ್ರ ಗೋವಿನ ಹೆಸರಿನಲ್ಲಿ ಕೆಳವರ್ಗದ ಹುಡುಗರನ್ನು, ದಲಿತರನ್ನು ಎತ್ತಿಕಟ್ಟಿ, ಅವರ ಮೇಲೆ ಕೇಸು ಬೀಳಿಸಿ, ಜೈಲಿಗಟ್ಟಿ ತಮ್ಮ ರಾಜಕೀಯ ಬೇಳೆಯನ್ನು ದಯವಿಟ್ಟು ಬೇಯಿಸಿಕೊಳ್ಳಬೇಡಿ ಎಂದು ವಿನಂತಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

Download Eedina App Android / iOS

X