ವಿಶ್ವ ಜನಸಂಖ್ಯಾ ದಿನ 2025 | ಸಮತೋಲಿತ ಭವಿಷ್ಯಕ್ಕಾಗಿ ಬದಲಾವಣೆಯ ತುರ್ತು

Date:

Advertisements

ಜಗತ್ತಿನ ಜನಸಂಖ್ಯೆ ಕುರಿತ ಮಾಹಿತಿ ಜತೆಗೆ ಜನಸಂಖ್ಯಾ ಸ್ಫೋಟದಿಂದಾಗುವ ಸಮಸ್ಯೆಗಳ ಗಂಭೀರತೆಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಪ್ರತಿವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ. ಈ ದಿನವನ್ನು 1989ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (UNDP) ಆಡಳಿತ ಮಂಡಳಿ ಮೊದಲು ಪ್ರಾರಂಭಿಸಿತು. ಮೊದಲ ಬಾರಿಗೆ ಈ ದಿನವನ್ನು 1990ರಲ್ಲಿ, ಭಾರತ ಸೇರಿದಂತೆ ಜಗತ್ತಿನ 90ಕ್ಕೂ ಹೆಚ್ಚು ದೇಶಗಳು ಆಚರಿಸಲು ಮೊದಲಾದವು.

1987ರ ಜುಲೈ 11ರಂದು ವಿಶ್ವದ ಜನಸಂಖ್ಯೆ ಐದು ಶತಕೋಟಿ (5 ಬಿಲಿಯನ್) ತಲುಪಿದ ಹಿನ್ನೆಲೆ, ಜನಸಂಖ್ಯೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 1989ರಲ್ಲಿ ವಿಶ್ವಸಂಸ್ಥೆ ಈ ದಿನವನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಸ್ಥಾಪಿಸಿತು.

ವಿಶ್ವಸಂಸ್ಥೆಯು 2025ರ ವಿಶ್ವ ಜನಸಂಖ್ಯಾ ದಿನದ ಥೀಮ್ ಅನ್ನು “ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ಯುವಜನರು ಬಯಸುವ ಕುಟುಂಬಗಳನ್ನು ರಚಿಸಲು ಸಬಲೀಕರಣಗೊಳಿಸುವುದು” ಎಂದು ಘೋಷಿಸಿದೆ. ಈ ಥೀಮ್ ಯುವ ಜನಾಂಗ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

2050ರ ವೇಳೆಗೆ 1.63 ಬಿಲಿಯನ್ ಜನಸಂಖ್ಯೆಯೊಂದಿಗೆ ಭಾರತ ಚೀನಾವನ್ನು ಮೀರಿಸುವಂತಹ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಈ ಅಂದಾಜು 25 ವರ್ಷಗಳಿಗೂ ಮೊದಲೇ ಘಟಿಸಿದೆ. ಭಾರತ ಚೀನಾ ದೇಶವನ್ನು ಹಿಂದಿಕ್ಕಿ (1.46 ಬಿ) ಮೊದಲ ಸ್ಥಾನಕ್ಕೇರಿದೆ. ಮುಂದುವರೆದು ಕ್ರಮವಾಗಿ ಚೀನಾ (1.42 ಬಿ), ಯುನೈಟೆಡ್ ಸ್ಟೇಟ್ಸ್ (347 ಮಿ), ಇಂಡೋನೇಷ್ಯಾ (286 ಮಿ), ಪಾಕಿಸ್ತಾನ (255 ಮಿ), ನೈಜೀರಿಯಾ (238 ಮಿ), ಬ್ರೆಜಿಲ್ (213 ಮಿ), ಬಾಂಗ್ಲಾದೇಶ (176 ಮಿ), ರಷ್ಯಾ (144 ಮಿ), ಇಥಿಯೋಪಿಯಾ (135 ಮಿ) ದೇಶಗಳು ಟಾಪ್‌ 10ರಲ್ಲಿ ಸ್ಥಾನ ಪಡೆದಿವೆ. ವಿಶ್ವಸಂಸ್ಥೆಯ ಪ್ರಕಾರ, 2022 ರ ನವೆಂಬರ್ ಹೊತ್ತಿಗೆ ವಿಶ್ವದ ಜನಸಂಖ್ಯೆಯು 8.0 ಬಿಲಿಯನ್ ತಲುಪಿದೆ.

Gemini Generated Image wxal76wxal76wxal

ಭಾರತದ ಒಟ್ಟು ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಸುಮಾರು 17% ರಷ್ಟು ಪಾಲನ್ನು ನೀಡುತ್ತದೆ. ಉತ್ತರ ಪ್ರದೇಶವು 166 ಮಿಲಿಯನ್ ಜನರೊಂದಿಗೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಇದು ವಿಶ್ವದ ಹಲವು ದೇಶಗಳ ಜನಸಂಖ್ಯೆಗಿಂತ ಹೆಚ್ಚು. UP ನಂತರ ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಿವೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು ಈ ರಾಜ್ಯಗಳಲ್ಲೇ ಇದ್ದಾರೆ ಎಂದು ವರದಿಯೊಂದು ಹೇಳುತ್ತದೆ.

ಏರಿಕೆ ಮತ್ತು ಇಳಿಕೆ ಸೇರಿದಂತೆ ಜನಸಂಖ್ಯಾ ಬದಲಾವಣೆಯು ಜನನ, ಮರಣ ಮತ್ತು ವಲಸೆಯಂತಹ ವಿವಿಧ ಅಂಶಗಳಿಂದಾಗಿರಬಹುದು. ಭಾರತದಲ್ಲಿ, ಪ್ರಮುಖ ನೈಸರ್ಗಿಕ ವಿಕೋಪಗಳ ಹೊರತಾಗಿಯೂ ಜನನ ಪ್ರಮಾಣವು ಯಾವಾಗಲೂ ಸಾವಿನ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ. ನಿರಂತರವಾಗಿ ಹೆಚ್ಚುತ್ತಿರುವ ಭಾರತೀಯ ಜನಸಂಖ್ಯೆಯ ಹಿಂದಿನ ಪ್ರಮುಖ ಕಾರಣ ಇದು. ಜನನ ಮತ್ತು ಮರಣದ ನಂತರ ಜನಸಂಖ್ಯೆಗೆ ಮೂರನೇ ಕಾರಣ ವಲಸೆ.

ಅಧಿಕ ಜನಸಂಖ್ಯೆಗೆ ಕಾರಣಗಳೇನು?

ಕಳೆದ ನೂರು ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ ತ್ವರಿತ ಬೆಳವಣಿಗೆಗೆ ಜನನ ದರ ಮತ್ತು ಮರಣ ದರದ ನಡುವಿನ ವ್ಯತ್ಯಾಸವೇ ಕಾರಣ ಎನ್ನುತ್ತಾರೆ ತಜ್ಞರು. ಪ್ರಪಂಚದಾದ್ಯಂತ ಮಾನವ ಜನಸಂಖ್ಯೆಯ ಬೆಳವಣಿಗೆಯು ಜಾಗತಿಕ ಆರ್ಥಿಕತೆ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

1. ಜನನ ದರದಲ್ಲಿ ಹೆಚ್ಚಳ: ಜನಸಂಖ್ಯೆ ಬೆಳವಣಿಗೆಗೆ ಅಥವಾ ಸ್ಫೋಟಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಹೆಚ್ಚಿನ ಜನನ ಪ್ರಮಾಣ. 2021ರಲ್ಲಿ ಪ್ರತಿ 1,000 ಜನಸಂಖ್ಯೆಗೆ 17.163 ಜನನಗಳು ದಾಖಲಾಗಿದ್ದವು. ಇದು 2020ಕ್ಕಿಂತ ಕಡಿಮೆಯಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ಭಾರತದಲ್ಲಿ ದಿನಕ್ಕೆ ಸುಮಾರು 67,385 ಶಿಶುಗಳು ಜನಿಸುತ್ತವೆ. ಇದು ಪ್ರಪಂಚದ ಒಟ್ಟು ಜನನಗಳಲ್ಲಿ ಆರನೇ ಒಂದು ಭಾಗವಾಗಿದೆ. ಜನನ ಪ್ರಮಾಣವು ಕ್ರಮೇಣ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. ಕುಟುಂಬ ಯೋಜನೆ, ಜನಸಂಖ್ಯಾ ಶಿಕ್ಷಣ, ಅಭಿಯಾನಗಳು ಇತ್ಯಾದಿಗಳ ವಿಷಯದಲ್ಲಿ ಕಾನೂನುಗಳನ್ನು ರೂಪಿಸಿದರೂ ಜನನ ಪ್ರಮಾಣವು ಕಡಿಮೆಯಾಗಿಲ್ಲ.

2. ಮರಣ ಪ್ರಮಾಣದಲ್ಲಿ ಇಳಿಕೆ: ಇತ್ತೀಚಿನ ವರ್ಷಗಳಲ್ಲಿ, ಮರಣ ಪ್ರಮಾಣದಲ್ಲಿನ ಇಳಿಕೆಯು ಜನಸಂಖ್ಯೆಯ ತ್ವರಿತ ಬೆಳವಣಿಗೆಗೆ ಕಾರಣವಾಗುವ ಮತ್ತೊಂದು ಅಂಶವಾಗಿದೆ. 2001ರಲ್ಲಿ, ಭಾರತದಲ್ಲಿ ಮರಣ ಪ್ರಮಾಣವು ಪ್ರತಿ ಸಾವಿರಕ್ಕೆ ಸುಮಾರು 8.5ರಷ್ಟಿತ್ತು. ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿಯಿಂದಾಗಿ ಮರಣ ಪ್ರಮಾಣವೂ ಕಡಿಮೆಯಾಗಿದೆ. ಉದಾಹರಣೆಗೆ, ಟೈಫಾಯಿಡ್, ಚಿಕನ್‌ಪಾಕ್ಸ್ ಮುಂತಾದ ದೀರ್ಘಕಾಲದ ಕಾಯಿಲೆಗಳು ಇನ್ನು ಮುಂದೆ ಭಯಾನಕವಲ್ಲ. ಸರಿಯಾದ ನೈರ್ಮಲ್ಯ ಸೌಲಭ್ಯಗಳು, ಶುಚಿತ್ವ ಮತ್ತು ಉತ್ತಮ ಪ್ರಸವಪೂರ್ವ ಮತ್ತು ಪ್ರಸವನಂತರದ ಆರೈಕೆಯಿಂದಾಗಿ ಶಿಶು ಮರಣ ಪ್ರಮಾಣವೂ ಕಡಿಮೆಯಾಗಿದೆ.

3. ಧಾರ್ಮಿಕ ಮತ್ತು ಸಾಮಾಜಿಕ ಕಾರಣಗಳು: ಭಾರತದಲ್ಲಿ, ಮದುವೆಯನ್ನು ಕಡ್ಡಾಯ ಸಾಮಾಜಿಕ ಸಂಸ್ಥೆಯೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಮದುವೆಯಾಗಬೇಕು ಎಂದು ಒತ್ತಡ ಹೇರಲಾಗುತ್ತದೆ. ಅವಿಭಕ್ತ ಕುಟುಂಬದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಸಮಾನ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ. ಹಾಗಾಗಿ, ಜನರು ತಮ್ಮ ಕುಟುಂಬದ ಗಾತ್ರವನ್ನು ಅವಿಭಕ್ತ ಕುಟುಂಬಕ್ಕೆ ಹೆಚ್ಚಿಸಲು ಹಿಂಜರಿಯುವುದಿಲ್ಲ. ಭಾರತದಲ್ಲಿ, ಹೆಚ್ಚಿನ ಜನರು ಒಂದು ಗಂಡು ಮಗು ಅಗತ್ಯ ಎಂದು ಭಾವಿಸುತ್ತಾರೆ ಮತ್ತು ಗಂಡು ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿ, ಅವರು ತಮ್ಮ ಕುಟುಂಬದ ಗಾತ್ರವನ್ನು ಹೆಚ್ಚಿಸುತ್ತಾರೆ.

4. ಬಡತನ: ಜನಸಂಖ್ಯಾ ಸ್ಫೋಟಕ್ಕೆ ಮತ್ತೊಂದು ಪ್ರಮುಖ ಕಾರಣ ಬಡತನ. ಹೆಚ್ಚಿನ ಕುಟುಂಬಗಳಲ್ಲಿ, ಮಕ್ಕಳು ಆದಾಯದ ಮೂಲವಾಗುತ್ತಾರೆ. ಚಿಕ್ಕ ವಯಸ್ಸಿನಿಂದಲೇ, ಮಕ್ಕಳು ಶಾಲೆಗೆ ಹೋಗುವ ಬದಲು ತಮ್ಮ ಕುಟುಂಬಗಳಿಗಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಪ್ರತಿ ಮಗುವೂ ಕುಟುಂಬಕ್ಕೆ ಹೆಚ್ಚುವರಿ ಆದಾಯವಾಗುತ್ತದೆ. ಆದಾಯದ ನಿರೀಕ್ಷೆಯಿಂದ ಸಹಜವಾಗಿ ಹೆಚ್ಚು ಮಕ್ಕಳಾಗುತ್ತವೆ.

ಇದನ್ನೂ ಓದಿ: ದಕ್ಷಿಣ ಕನ್ನಡವೇಕೆ ಮಂಗಳೂರು ಆಗಬೇಕು; ಏನಿದು ಮರುನಾಮಕರಣ ಕೂಗು?

ಇವುಗಳ ಜತೆಗೆ ಭಾರತದಲ್ಲಿ, ಜನಸಂಖ್ಯೆಯ 60% ಜನರು ಅನಕ್ಷರಸ್ಥರು ಅಥವಾ ಕನಿಷ್ಠ ಶಿಕ್ಷಣವನ್ನು ಹೊಂದಿದ್ದಾರೆ. ಇದು ಕನಿಷ್ಠ ಉದ್ಯೋಗಾವಕಾಶಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಹೆಚ್ಚಿನ ಅನಕ್ಷರತೆ ಪ್ರಮಾಣ ಮತ್ತು ಸಾಮಾಜಿಕ ಪದ್ಧತಿಗಳಲ್ಲಿ ನಂಬಿಕೆಯಿಂದಾಗಿ, ಬಾಲ್ಯವಿವಾಹ ಮತ್ತು ಗಂಡು ಮಗುವಿಗೆ ಆದ್ಯತೆ ಇನ್ನೂ ಚಾಲ್ತಿಯಲ್ಲಿದೆ. ಕಾರಣಗಳ ಪಟ್ಟಿ ಇನ್ನೂ ದೊಡ್ಡದಿದೆ. ಪರಿಣಾಮಗಳೂ ಕಾರಣಗಳಷ್ಟೇ ಗಂಭೀರ, ಸಮಸ್ಯಾತ್ಮಕ.

ಜನಸಂಖ್ಯಾ ನಿಯಂತ್ರಣಕ್ಕೆ ನಾವೇನು ಮಾಡಬಹುದು?

ಜನಸಂಖ್ಯಾ ನಿಯಂತ್ರಣವು ಯಾವುದೇ ರಾಷ್ಟ್ರದ ಸಮತೋಲಿತ ಅಭಿವೃದ್ಧಿಗೆ ಅಗತ್ಯವಾದ ಅಂಶ. ಸರ್ಕಾರಗಳು ಯೋಜನೆಗಳನ್ನು ರೂಪಿಸಬಹುದಾದರೂ, ಸಾರ್ವಜನಿಕರ ಸಹಕಾರವಿಲ್ಲದೆ ಈ ಗುರಿಯನ್ನು ಸಾಧಿಸುವುದು ಸಾಧ್ಯವಿಲ್ಲ. ಜನರು ತಮ್ಮ ಕುಟುಂಬದ ಗಾತ್ರವನ್ನು ನಿರ್ಧರಿಸುವ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವಿನಿಂದ ನಡೆದುಕೊಳ್ಳುವುದು ಅತ್ಯಗತ್ಯ. ಮಕ್ಕಳ ನಿರ್ಧಾರದಲ್ಲಿ ಮಿತಿಮೀರಿದ ಭಾವನಾತ್ಮಕತೆ ಅಥವಾ ಪರಂಪರೆಯಿಂದ ಬಂದ ನಂಬಿಕೆಗಳಿಗೆ ಬದ್ಲಾಗಿ, ಆರ್ಥಿಕ ಸಾಮರ್ಥ್ಯ, ಆರೋಗ್ಯ ವ್ಯವಸ್ಥೆ ಮತ್ತು ಶಿಕ್ಷಣದ ಲಭ್ಯತೆ ಎಂಬ ಹಾದಿಯಲ್ಲಿಯೇ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ.

ಈ ನಿಟ್ಟಿನಲ್ಲಿ ಜನರು ತಮ್ಮ ಜೀವನಶೈಲಿಯಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳಸಿಕೊಳ್ಳುವುದು ಇಂದಿಗೆ ಅನಿವಾರ್ಯ. ಗರ್ಭನಿರೋಧಕಗಳ ಬಳಕೆ, ಕುಟುಂಬ ಯೋಜನೆಗೆ ಸಂಬಂಧಿಸಿದ ಅರಿವು ಮತ್ತು ಮಹಿಳೆಯರ ಸ್ವಾತಂತ್ರ್ಯವನ್ನು ಗೌರವಿಸುವ ಮನೋವೃತ್ತಿ ಹೀಗೆ… ಜನಸಾಮಾನ್ಯರು ಈ ಅಂಶಗಳಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳುವ ಮೂಲಕ ಸಮಾಜದ ಹಿತದೃಷ್ಟಿಯಲ್ಲಿ ದೊಡ್ಡ ಕೊಡುಗೆ ನೀಡಬಲ್ಲರು. ಅಲ್ಲದೆ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಹಾಗೂ ಲಿಂಗ ಸಮಾನತೆಯ ಮೌಲ್ಯಗಳನ್ನು ಬೆಳೆಸುವುದು, ಮದುವೆಯ ವಯಸ್ಸು ಹೆಚ್ಚಿಸುವಂತ ವಾತಾವರಣ ರೂಪಿಸುವುದು, ವಿವೇಕಪೂರ್ಣ ವಿವಾಹ ಹಾಗೂ ಸಂತಾನ ನಿರ್ಧಾರವನ್ನು ಉತ್ತೇಜಿಸುವುದು — ಇವೆಲ್ಲವೂ ಸಾರ್ವಜನಿಕರ ಸಹಕಾರದಿಂದಲೇ ಸಾಧ್ಯ. ಅಂತಹ ಎಚ್ಚರಿಕೆಯಿಂದಾಗಿ ಮಾತ್ರ ಸರ್ಕಾರ ರೂಪಿಸುವ ಜನಸಂಖ್ಯಾ ನೀತಿಗಳು ಯಶಸ್ವಿಯಾಗುತ್ತವೆ.

ಹೀಗಾಗಿ, ಜನಸಂಖ್ಯಾ ನಿಯಂತ್ರಣ ಕೇವಲ ರಾಜಕೀಯ ಅಥವಾ ಆಡಳಿತಾತ್ಮಕ ವಿಷಯವಲ್ಲ. ಇದೊಂದು ಸಾರ್ವಜನಿಕ ಚಳವಳಿಯಾಗಬೇಕಾಗಿದೆ. ಪ್ರಜ್ಞಾವಂತ ಸಾರ್ವಜನಿಕರ ಜವಾಬ್ದಾರಿ ಭಾವನೆ ಮತ್ತು ನೈತಿಕ ಬದ್ಧತೆಗಳೇ ಭಾರತದ ಮುನ್ನಡೆಗೆ ನಿಜವಾದ ಶಕ್ತಿ.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

Download Eedina App Android / iOS

X