ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು. ಶವವನ್ನು ಹೊರತೆಗೆದು ಅಲ್ಲಿನ ಕೃತ್ಯಗಳನ್ನು ಬಯಲುಗೊಳಿಸುವುದಾಗಿ ಹೇಳಿರುವ ಅನಾಮಧೇಯ ವ್ಯಕ್ತಿಗೆ ರಕ್ಷಣೆ ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಆಗ್ರಹಿಸಿದ್ದಾರೆ.
“ಧರ್ಮಸ್ಥಳದಲ್ಲಿ 1995ರಿಂದ 2014ರವರೆಗೆ ಹಲವಾರು ಅಪರಾಧ ಕೃತ್ಯಗಳು ನಡೆದಿವೆ ಎನ್ನಲಾಗಿದೆ. ಈ ರೀತಿಯಲ್ಲಿ ದೀರ್ಘಕಾಲದವರೆಗೆ ಅಪರಾಧ ಕೃತ್ಯಗಳು ನಡೆದಿದ್ದರೂ, ಈವರೆಗೆ ಯಾರಿಗೂ ಈ ಬಗ್ಗೆ ತಿಳಿಯದಿರುವುದು ನಿಜಕ್ಕೂ ಗಂಭೀರವಾದ ವಿಷಯ. ಇದು ಅಚ್ಚರಿ ತಂದಿದೆ” ಎಂದು ಅವರು ಹೇಳಿರುವುದಾಗಿ ಟೈಮ್ಸ್‌ನೌ ವರದಿ ಮಾಡಿದೆ.
#Breaking
— TIMES NOW (@TimesNow) July 10, 2025
Dharmasthala Horror: #TimesNow Impact
Union Minister @Annapurna4BJP says, 'The K'taka Govt needs to take adequate action. They need to provide protection to the whistleblower…'@MadhavGK with details. pic.twitter.com/oPdSrzPumB
“ಇದೀಗ, ಧರ್ಮಸ್ಥಳದ ಅಪರಾಧ ಕೃತ್ಯಗಳನ್ನು ಅನಾಮಧೇಯ ವ್ಯಕ್ತಿ ಬಹಿರಂಗಗೊಳಿಸಿದ್ದಾರೆ. ಮಾಹಿತಿ ನೀಡಿದವರಿಗೆ ಕರ್ನಾಟಕ ಸರ್ಕಾರ ರಕ್ಷಣೆ ನೀಡಬೇಕು. ಕೃತ್ಯಗಳ ಬಗ್ಗೆ ಸಂಪೂರ್ಣ ಮತ್ತು ವಿಸ್ತೃತ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.