ರೋಚಕ ಘಟ್ಟದತ್ತ ಲಾರ್ಡ್ಸ್‌ ಟೆಸ್ಟ್‌; 4 ವಿಕೆಟ್‌ ಕಳೆದುಕೊಂಡ ಭಾರತದ ಗೆಲುವಿಗೆ ಬೇಕು 135 ರನ್‌

Date:

Advertisements

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್‌ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಈ ಟೆಸ್ಟ್‌ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾಕ್ಕೆ 193 ರನ್‌ಗಳ ಗುರಿಯನ್ನು ಇಂಗ್ಲೆಂಡ್‌ ನೀಡಿದೆ. ಆತಿಥೇಯರು ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಭಾರತದ ಆಟಗಾರರು ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 58 ರನ್‌‌ ಕಲೆ ಹಾಕಿದ್ದಾರೆ. ಅಂತಿಮ ದಿನ ಭಾರತದ ಗೆಲುವಿಗೆ 135 ರನ್‌ಗಳು ಬೇಕಿದೆ.

ಭಾನುವಾರ ಎರಡನೇ ಇನಿಂಗ್ಸ್‌ನ್ನು 2 ರನ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ ಆರಂಭಿಸಿದ ಇಂಗ್ಲೆಂಡ್‌ 192 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ತಂಡದ ಪರ ಜೋ ರೂಟ್‌ 40, ನಾಯಕ ಬೆನ್‌ ಸ್ಟೋಕ್ಸ್‌ 33, ಹ್ಯಾರಿ ಬ್ರೂಕ್‌ 23 ರನ್‌ ಬಾರಿಸಿದರು. ಭಾರತದ ಪರ ವಾಷಿಂಗ್ಟನ್‌ ಸುಂದರ್ 4, ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್‌ ಬುಮ್ರಾ ತಲಾ 2 ವಿಕೆಟ್‌ ಪಡೆದು ತಂಡಕ್ಕೆ ಆಧಾರವಾದರು.

ಗುರಿಯನ್ನು ಬೆನ್ನಟ್ಟಿದ ಭಾರತ ಉತ್ತಮ ಆರಂಭವನ್ನು ಪಡೆಯುವಲ್ಲಿ ವಿಫಲರಾದರು. ಆರಂಭಿಕ ಯಶಸ್ವಿ ಜೈಸ್ವಾಲ್‌ ಸೊನ್ನೆ ಸುತ್ತಿದರು. ಇವರು ಜೋಫ್ರಾ ಆರ್ಚರ್ ಎಸೆದ ಬ್ಯಾಕ್‌ ಆಫ್‌ ಲೆಂಥ್ ಎಸೆತವನ್ನು ಪುಲ್ ಮಾಡಲು ಹೋದರು. ಆದರೆ ಇವರು ಬಾರಿಸಿದ ಚೆಂಡು ಇವರ ಬ್ಯಾಟನ್ ಅಂಚಿಗೆ ಬಡಿದು ಆಗಸದೆತ್ತರಕ್ಕೆ ಸಾಗಿತು. ವಿಕೆಟ್‌ ಕೀಪರ್‌ ಜೇಮಿ ಸ್ಮಿತ್‌ ಹಿಡಿದ ಕ್ಯಾಚ್‌ ಪಡೆದರು.

2ನೇ ವಿಕೆಟ್‌ಗೆ 36 ರನ್ ಜೊತೆಯಾಟ ಎರಡನೇ ವಿಕೆಟ್‌ಗೆ ಕನ್ನಡಿಗರಾದ ಕರುಣ್ ನಾಯರ್‌ ಹಾಗೂ ಕೆಎಲ್ ರಾಹುಲ್‌ ಇನಿಂಗ್ಸ್‌ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಈ ಜೋಡಿ 5 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಕನ್ನಡದ ಜೋಡಿ ಕೊಂಚ ಆಧಾರವಾಯಿತು. ಈ ಜೋಡಿ ಎರಡನೇ ವಿಕೆಟ್‌ಗೆ 66 ಎಸೆತಗಳಲ್ಲಿ 36 ರನ್‌ ಸೇರಿಸಿತು. ಈ ವೇಳೆ ಕರುಣ್ ನಾಯರ್‌ (14) ಮತ್ತೊಮ್ಮೆ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಸಫಲರಾದರು. ಬ್ರೈಡನ್ ಕಾರ್ಸೆ ಎಸೆತದಲ್ಲಿ ಔಟ್ ಆದರು.

ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶುಭಮನ್‌ ಗಿಲ್‌ (6) ಸಹ ಜವಾಬ್ದಾರಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು. ಗಿಲ್‌ ಔಟ್ಆದ ನಂತರ ನೈಟ್‌ ವಾಚ್‌ಮೆನ್ ಆಗಿ ಆಕಾಶ್ ದೀಪ್‌ ಮೈದಾನಕ್ಕೆ ಇಳಿದರು. ಆದರೆ ಇವರು ತಮ್ಮ ಜವಾಬ್ದಾರಿಯನ್ನು ಅರಿತು ಆಡುವಲ್ಲಿ ವಿಫಲರಾದರು.

ಸೋಮವಾರ ಕೊನೆಯ ದಿನದಾಟದಲ್ಲಿ ಭಾರತ ತಂಡ ಮೊದಲಾವಧಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ವಿಕೆಟ್‌ ಬೀಳದಂತೆ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಟೀಮ್ ಇಂಡಿಯಾ ಗೆಲುವಿನ ಕನಸು ನನಸಾಗುತ್ತದೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ (ಅಜೇಯ 33 ರನ್) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರೀಡಾ ಮೈದಾನದಲ್ಲೂ ಆಪರೇಷನ್ ಸಿಂಧೂರ: ಪಾಕಿಸ್ತಾನದ ಕಾಲೆಳೆದ ಪ್ರಧಾನಿ ಮೋದಿ

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಪ್ರಧಾನಿ...

ಏಪ್ಯಾ ಕಪ್ ಫೈನಲ್ : ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ರೋಚಕ ಜಯ; 9ನೇ ಬಾರಿ ಚಾಂಪಿಯನ್

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಏಪ್ಯಾ ಕಪ್ ಫೈನಲ್...

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ; ಯಾರಿವರು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ...

ಶೀತಲ್ ದೇವಿಗೆ ಐತಿಹಾಸಿಕ ಚಿನ್ನ; ವಿಶ್ವ ಪ್ಯಾರಾ ಆರ್ಚರಿಯಲ್ಲಿ ಭಾರತದ ಹೆಮ್ಮೆ

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ...

Download Eedina App Android / iOS

X