ನಿದ್ರಾಹೀನತೆಯೂ ರಸ್ತೆ ಅಪಘಾತಗಳಿಗೆ ಕಾರಣ: ಏಮ್ಸ್‌ ಅಧ್ಯಯನ

Date:

Advertisements

ನಿದ್ರಾಹೀನತೆಯೂ ರಸ್ತೆ ಅಪಘಾತಗಳಿಗೆ ಕಾರಣ ಕಾರಣ ಎಂಬುದನ್ನು ಏಮ್ಸ್‌ ಅಧ್ಯಯನ ವರದಿ ಬಹಿರಂಗಪಡಿಸಿದೆ. ಉತ್ತರಾಖಂಡದಲ್ಲಿ ರಸ್ತೆ ಅಪಘಾತಗಳಿಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳೇ ಏಕೈಕ ಮುಖ್ಯ ಕಾರಣವಾಗಿ ಹೊರಹೊಮ್ಮುತ್ತಿವೆ ಎಂದು ಋಷಿಕೇಶದಲ್ಲಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಅಷ್ಟಕ್ಕೂ ದೀರ್ಘವಾಗಿ ಟ್ರಕ್, ಲಾರಿ ಚಲಾಯಿಸುವವರಿಗೆ ನಿದ್ರಾಹೀನತೆ ಇರುತ್ತದೆ ಎಂದು ಈ ಅಧ್ಯಯನ ಹೇಳಿರುವುದಲ್ಲ. ಬದಲಾಗಿ ದೈನಂದಿನವಾಗಿ ಸಣ್ಣ ವಾಹನಗಳನ್ನು ಚಲಾಯಿಸುವವರಿಗೂ ನಿದ್ರಾಹೀನತೆ ಹೆಚ್ಚಾಗುತ್ತಿದೆ. ನಿದ್ರಾಹೀನತೆಯಿಂದಾಗಿ ಸಣ್ಣ ವಾಹನ ಚಾಲಕರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಏಮ್ಸ್ ಮನೋವೈದ್ಯಶಾಸ್ತ್ರ ವಿಭಾಗದ ನಿದ್ರಾಹೀನತೆ ಸಂಬಂಧಿತ ವಿಭಾಗವು ನಡೆಸಿದ ಸಂಶೋಧನೆಯು ಅಮೆರಿಕದ ವೈದ್ಯಕೀಯ ಜರ್ನಲ್ ‘ಕ್ಯೂರಿಯಸ್’ನಲ್ಲಿ ಪ್ರಕಟವಾಗಿದೆ.

ಇದನ್ನು ಓದಿದ್ದೀರಾ? ಕಡಿಮೆ ನಿದ್ದೆ ಮಾಡುವವರು ಓದಲೇ ಬೇಕಾದ ಸುದ್ದಿ | 10 ಮುಖ್ಯ ಅಂಶ

ಕುಡಿದು ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗಲಿದೆ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಆಗಾಗ್ಗೆ ಕುಡಿದು ವಾಹನ ಚಲಾಯಿಸುವುದರ ವಿರುದ್ಧ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಆದರೆ ಉತ್ತರಾಖಂಡದಲ್ಲಿ ವಾಸ್ತವ ಹೆಚ್ಚು ಸಂಕೀರ್ಣವಾಗಿದೆ ಎಂದು ಅಧ್ಯಯನ ಹೇಳುತ್ತದೆ.

ಅಕ್ಟೋಬರ್ 2021 ಮತ್ತು ಏಪ್ರಿಲ್ 2022ರ ನಡುವೆ ಏಮ್ಸ್‌ಗೆ ದಾಖಲಾದ ವಿವಿಧ ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಸುಮಾರು 1,200 ವ್ಯಕ್ತಿಗಳನ್ನು ಸಂಶೋಧಕರು ಪರೀಕ್ಷಿಸಿದ್ದಾರೆ. ಈ 575 ಚಾಲಕರಲ್ಲಿ ಶೇಕಡ 75ರಷ್ಟು ಜನರು ದ್ವಿಚಕ್ರ ಅಥವಾ ತ್ರಿಚಕ್ರ ವಾಹನಗಳನ್ನು ಚಲಾಯಿಸುತ್ತಿದ್ದರು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

ಈ ಬಗ್ಗೆ ಅಧ್ಯಯನದ ನಿರ್ದೇಶಕರಾದ ಪ್ರೊಫೆಸರ್ ರವಿ ಗುಪ್ತಾ ಮತ್ತು ಡಾ. ವಿಶಾಲ್ ಧಿಮಾನ್, “ಶೇಕಡ 21ರಷ್ಟು ಅಪಘಾತಗಳು ಚಾಲಕರು ನಿದ್ರಿಸುವುದರಿಂದ ಅಥವಾ ವಾಹನ ಚಲಾಯಿಸುವಾಗ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಿದ್ದರಿಂದ ಸಂಭವಿಸಿದೆ ಎಂದು ನಮ್ಮ ಸಂಶೋಧನೆಯಲ್ಲಿ ತಿಳಿದುಬಂದಿದೆ” ಎಂದಿದ್ದಾರೆ. ಇನ್ನು ಅತಿಯಾದ ಕೆಲಸದಿಂದ ಉಂಟಾಗುವ ಬಳಲಿಕೆಯು ಶೇಕಡ 26ರಷ್ಟು ಅಪಘಾತಕ್ಕೆ ಕಾರಣವಾಗಿದೆ ಎಂದೂ ಒತ್ತಿ ಹೇಳಿದ್ದಾರೆ.

ಶೇಕಡ 32ರಷ್ಟು ಅಪಘಾತಗಳಲ್ಲಿ ಮದ್ಯಪಾನ ಒಂದು ಕಾರಣವಾಗಿದ್ದರೆ, ಈ ಚಾಲಕರಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮದ್ಯಪಾನವು ಅವರ ನಿದ್ರೆಯ ಸಮಸ್ಯೆಯನ್ನು ಇನ್ನಷ್ಟೂ ಹೆಚ್ಚಿಸಿದೆ” ಎಂದು ಅಧ್ಯಯನ ಹೇಳಿದೆ.

ಆಶ್ಚರ್ಯಕರವಾಗಿ, ಸುಮಾರು ಶೇಕಡ 68ರಷ್ಟು ನಿದ್ರೆಗೆ ಸಂಬಂಧಿಸಿದ ಅಪಘಾತಗಳು ಅಂಕುಡೊಂಕಾದ ರಸ್ತೆಗಳಲ್ಲಿ ಅಲ್ಲ, ಬದಲಾಗಿ ನೇರ, ದೈನಂದಿನ ಓಡಾಡುವ ರಸ್ತೆಗಳಲ್ಲಿ ಸಂಭವಿಸಿವೆ. ಹೆಚ್ಚಿನ ಘಟನೆಗಳು ಸಂಜೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೆ ಸಂಭವಿಸಿವೆ. ಜನರು ದಿನವಿಡೀ ಕೆಲಸ ಮಾಡಿ ಸಂಜೆ ವೇಳೆಗೆ ಆಯಾಸಗೊಂಡಿರುವುದು ಇದಕ್ಕೆ ಕಾರಣ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

Download Eedina App Android / iOS

X