ಶಿಕ್ಷಣ ಸ್ಪೆಷಲ್ | ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ

Date:

Advertisements
ರಾಜ್ಯ ಸರ್ಕಾರದ ಶಿಕ್ಷಣ ನೀತಿ, ಸರ್ಕಾರಿ ಶಾಲೆಗಳ ಸ್ಥಿತಿಗತಿ, ಶಿಕ್ಷಣದ ಹಕ್ಕು, ದ್ವಿಭಾಷಾ ನೀತಿ, ಸಮಾನ ಶಿಕ್ಷಣ, ಉಳ್ಳವರ ಶಿಕ್ಷಣ- ಹೀಗೆ ಶಿಕ್ಷಣ ಕ್ಷೇತ್ರ ನಾನಾ ಕವಲುಗಳಾಗಿ ಹರಿದುಹಂಚಿಹೋಗಿದೆ. ಈ ಬಗ್ಗೆ ಈದಿನ.ಕಾಮ್ ಮುಕ್ತಸಂವಾದ ಬಯಸಿದೆ. ಶಿಕ್ಷಣ ಕುರಿತು ಕಾಳಜಿ ಇರುವವರು ತಮ್ಮ ಪರ-ವಿರೋಧ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. 

ಭಾಗ-2

ಎಲ್‌ಪಿಜಿಯ ದುಷ್ಪರಿಣಾಮಗಳು
ನವ ಉದಾರೀಕರಣದ ಮೂವತ್ತು ವರ್ಷಗಳಲ್ಲಿ ಸಮಾನ ಶಿಕ್ಷಣವನ್ನು ಸಾಧಿಸುವುದರ ಬದಲಾಗಿ ಶಿಕ್ಷಣದಲ್ಲಿ ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯ ನೀತಿಯನ್ನು ಅನುಸರಿಸಲಾಯಿತು. ಶಿಕ್ಷಣದ ಖಾಸಗೀಕರಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಯಿತು. ಪ್ರಭುತ್ವವು ಶಿಕ್ಷಣದಲ್ಲಿ ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುತ್ತಿದೆ ಮತ್ತು ಹಂತ ಹಂತವಾಗಿ ಅದರಿಂದ ಹೊರಬರುತ್ತಿದೆ. ಇದನ್ನು ಒಂದು ಯೋಜಿತವಾಗಿ ಜಾರಿಗೊಳಿಸುತ್ತಿದ್ದಾರೆ. ಈ ‘ಉದಾರೀಕರಣ, ಖಾಸಗೀಕರಣ, ಜಾಗತೀಕರಣ’ದ(ಎಲ್‌ಪಿಜಿ) ಮುಂದುವರೆದ ಭಾಗವಾಗಿ ಆರಂಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟಕ್ಕಾಗಿ ಖಾಸಗಿಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತೇವೆ ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದರ ಸಮರ್ಥಕರು ‘ಇಂದಿನ ಅಗತ್ಯಕ್ಕೆ ತಕ್ಕ ಹಾಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮಗ್ರ ಶಿಕ್ಷಣವನ್ನು ಪೂರೈಸಲು ಅಸಮರ್ಥವಾಗಿದೆ. ಸಂವಿದಾನದ ಎಲ್ಲಾ ನೀತಿಸಂಹಿತೆಗಳನ್ನು ಪಾಲಿಸಿಕೊಂಡು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವಂತಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲಿಸಬೇಕು’ ಎಂದು ವಾದ ಮಂಡಿಸುತ್ತಾರೆ.

ಕಳೆದ ಮೂವತ್ತು ವರ್ಷಗಳಲ್ಲಿ ಇಡೀ ಶಿಕ್ಷಣ ಕ್ಷೇತ್ರದಲ್ಲಿ ನಡೆದ ವಿದ್ಯಮಾನಗಳನ್ನು ಗಮನಿಸಿದಾಗ ಆರಂಭದಲ್ಲಿ ಮೂಲಬೂತ ಸೌಕರ್ಯ ಕಲ್ಪಿಸುತ್ತೇವೆ, ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತೇವೆ ಎಂದೇ ಸಾರ್ವಜನಿಕ-ಖಾಸಗಿ ಸಹಬಾಗಿತ್ವದಲ್ಲಿ ಪಾಲ್ಗೊಳ್ಳುವ ಖಾಸಗಿ ಸಂಸ್ಥೆಗಳು ಕ್ರಮೇಣ ಅದನ್ನು ಒಂದು ಲಾಭದಾಯಕ ಉದ್ಯಮವನ್ನಾಗಿಯೇ ರೂಪಿಸುತ್ತವೆ ಮತ್ತು ಬಂಡವಾಳವಿಲ್ಲದೆ ನಾವು ನಿಮಗೆ ಶಿಕ್ಷಣವನ್ನು ಕೊಡುವುದಾದರೂ ಹೇಗೆ ಎನ್ನುವ ತರ್ಕವನ್ನು ಮುಂದಿಟ್ಟುಕೊಂಡು ಹಣ ಕೊಟ್ಟರೆ ಮಾತ್ರ ಶಿಕ್ಷಣ ಎನ್ನುವ ನೀತಿಯನ್ನು ಜಾರಿಗೊಳಿಸುತ್ತವೆ. ನಂತರ ಸರ್ಕಾರಿ ಶಾಲೆಗಳು ಈ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳುತ್ತವೆ. ನಂತರ ಈ ಖಾಸಗಿ ಸಂಸ್ಥೆಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ರಚಿಸುತ್ತವೆ. ಅದರ ಗುಣಮಟ್ಟವನ್ನು ನಿರ್ಧರಿಸುವ, ಈ ಪಠ್ಯಪುಸ್ತಗಳ ಮೌಲ್ಯಮಾಪನ ಮಾಡುವ ಅಧಿಕಾರವನ್ನು ಸಹ ಶಿಕ್ಷಣ ಇಲಾಖೆ ಕಳೆದುಕೊಂಡಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆ ಈ ರೀತಿಯಲ್ಲಿ ‘ತೀವ್ರವಾದ ಖಾಸಗೀಕರಣ’ಕ್ಕೆ ಮುಂದಾಗುತ್ತದೆ.

2016ರಲ್ಲಿ ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಜ್ಞಾನ ಆಯೋಗವನ್ನು ರಚಿಸಲಾಯಿತು. ಇನ್ನು ಈ ಜ್ಞಾನ ಆಯೋಗದಲ್ಲಿ ನವ ಉದಾರೀಕರಣದ, ಖಾಸಗೀಕರಣದ ಸಮರ್ಥಕರಾದ ಮೋಹನ್‌ದಾಸ್ ಪೈರಂತಹವರು, ಅಜೀಂ ಪ್ರೇಂಜಿ ಎನ್ನುವ ಖಾಸಗಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಪ್ರೊ. ಅನುರಾಗ್ ಬೆಹರ್ ಅಂತಹ ತಜ್ಞರು ಇದರ ಕಾರ್ಯಪಡೆಯ ಮುಖ್ಯ ಸದಸ್ಯರಾಗಿದ್ದರು. ಈ ಆಯೋಗ ನೀಡಿದ 114 ಪುಟಗಳ ಶಿಫಾರಸ್ಸಿನಲ್ಲಿ ಸಹಜವಾಗಿಯೇ ಇಲ್ಲಿ ಖಾಸಗೀಕರಣದ ಪರವಾದ ಹಿತಾಸಕ್ತಿಯ ಸಂಘರ್ಷ ಉಂಟಾಗುತ್ತದೆ. ಏಕೆಂದರೆ ಶಾಲಾ ಶಿಕ್ಷಣದ ಕುರಿತಾಗಿ ಈ ಶಿಕ್ಷಣ ನೀತಿಯಲ್ಲಿ ಒಂದುಕಡೆ ‘ನಗರಗಳಲ್ಲಿನ ಖಾಸಗಿ ವಲಯದ ಶಿಕ್ಷಣ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು, ಅದರ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಇದಕ್ಕಾಗಿ ಈಗಿರುವ ಕಟ್ಟುನಿಟ್ಟಾದ ನಿಯಂತ್ರಣವನ್ನು ಸಡಿಲಿಸಬೇಕು, ಹೊಂದಿಕೊಳ್ಳುವ ವಾತಾವರಣ ನಿರ್ಮಿಸಬೇಕು’ ಎನ್ನುವ ಪ್ರಸ್ತಾಪ ಬರುತ್ತದೆ. ಇದು ನೇರವಾಗಿಯೇ ಖಾಸಗೀಕರಣದ ಪರವಾಗಿ ಮಾತನಾಡುತ್ತದೆ. ವ್ಯಾಸಂಗಕ್ರಮ(ಪಡಗಾಜಿ) ಕುರಿತು ಸಾಂಸ್ಕೃತಿಕವಾಗಿ, ವೈಜ್ಞಾನಿಕವಾಗಿ ಯಾವುದೇ ಬಗೆಯ ಸ್ಪಷ್ಟತೆ ಮತ್ತು ಅಧ್ಯಯನಗಳನ್ನು ಮಾಡದ ಈ ಸಮಿತಿಯು ನೇರವಾಗಿ ಈಗಿರುವ ಎಲ್ಲಾ ಪಠ್ಯಕ್ರಮಗಳನ್ನು ಹಿಂಪಡೆದು ಏಕರೂಪಿಯಾಗಿ ಸಿಬಿಎಸ್‌ಸಿ ಪಠ್ಯಕ್ರಮವನ್ನು ಜಾರಿಗೊಳಿಸಬೇಕು ಎನ್ನುವ ಶಿಫಾರಸ್ಸು ಮಾಡುತ್ತದೆ. ಇದು ನೇರವಾಗಿಯೆ ಬಹುಸಂಸ್ಕೃತಿ, ಬಹುತ್ವದ ಕಲಿಕೆಯನ್ನು ತಿರಸ್ಕರಿಸುತ್ತದೆ.

ಇದನ್ನು ಓದಿದ್ದೀರಾ?: ಶಿಕ್ಷಣ ಸ್ಪೆಷಲ್ | ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ

ಈ ಆಯೋಗವು ಎಲ್ಲಿಯೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸಬಲೀಕರಣದ ಕುರಿತಾಗಿ ಸಮಗ್ರವಾಗಿ ತನ್ನ ಅಭಿಪ್ರಾಯಗಳನ್ನು ಮಂಡಿಸಿಲ್ಲ. ನಿಖರವಾಗಿ ಸಾರ್ವಜನಿಕ ಶಿಕ್ಷಣ(ಪ್ರಾಥಮಿಕ, ಉನ್ನತ)ದ ರೂಪುರೇಷೆ ಯಾವ ಮಾದರಿಯಲ್ಲಿರಬೇಕು, ಅದರ ಒಟ್ಟಾರೆ ಗುಣಮಟ್ಟ ಹೇಗಿರಬೇಕು ಎಂದು ವಿವರಿಸಿಲ್ಲ. ಅನೇಕ ಕಡೆ ಬಿಡಿ ಬಿಡಿಯಾಗಿ ಶಿಕ್ಷಕರ, ಪ್ರಾಧ್ಯಾಪಕರ ಬೋಧನೆಯ ಗುಣಮಟ್ಟದ ಕುರಿತಾಗಿ ಹೇಳಿದೆಯಾದರೂ ಅದನ್ನು ಸಾಧಿಸುವ ಬಗೆಯನ್ನು ವಿವರಿಸಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಈಗಿನ ಸಿಂಡಿಕೇಟ್, ಸೆನೆಟ್, ಅಕಡೆಮಿಕ್ ಪರಿಷತ್, ಅಧ್ಯಯನ ಮಂಡಳಿಗಳನ್ನು ತೆಗೆದು ಹಾಕಿ ಅದರ ಬದಲಿಗೆ ಹೊಸ ರಚನೆಯನ್ನು ಮಾಡಬೇಕು ಎಂದು ಹೇಳುತ್ತದೆ.

ಆದರೆ ಇದು ಪರೋಕ್ಷವಾಗಿ ಈಗಿರುವ ಸಾಮಾಜಿಕ ನ್ಯಾಯದ ವ್ಯವಸ್ಥೆಯನ್ನು ಬದಲಿಸಲೂ ಸೂಚಿಸುತ್ತದೆ. ಆಡಳಿತ ಮಂಡಳಿಗಳಿಗೆ ಚುನಾವಣೆಗಳನ್ನು ರದ್ದುಪಡಿಸಬೇಕೆಂದು ಹೇಳುತ್ತದೆ. ಹಾಗಿದ್ದರೆ ನೇಮಕಾತಿ ಯಾವ ಸ್ವರೂಪದ್ದಾಗಿರಬೇಕೆಂದು ಪ್ರಸ್ತಾಪಿಸುವುದಿಲ್ಲ. ಇದು ನೇರವಾಗಿ ಪಕ್ಷ ರಾಜಕಾರಣಕ್ಕೆ, ಜಾತಿ ರಾಜಕಾರಣಕ್ಕೆ, ಅವಕಾಶ ಮಾಡಿಕೊಟ್ಟಂತಾಗುತ್ತದೆ. ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಹೊರರಾಜ್ಯ, ದೇಶಗಳ ವಿದ್ಯಾರ್ಥಿಗಳಿಗೆ ಶೇ.50 ಪ್ರಮಾಣದಲ್ಲಿ ಮೀಸಲಿಡಬೇಕೆಂದು ಹೇಳುತ್ತದೆ. ಇದು ನೇರವಾಗಿ ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬೀಳುತ್ತದೆ. ಕ್ರೀಡೆ, ಕೌಶಲ್ಯ, ಕನ್ನಡ ಹೀಗೆ single-discipline ವಿವಿಗಳನ್ನು ಹಂತ ಹಂತವಾಗಿ ಮುಚ್ಚಬೇಕೆಂದು ಶಿಫಾರಸ್ಸು ಮಾಡುತ್ತದೆ. ಆದರೆ ಇದಕ್ಕೆ ಸೂಕ್ತವಾದ ಸಮರ್ಥನೆಯನ್ನು ಮಂಡಿಸುವುದಿಲ್ಲ.

198971 file71wos8zxrwl10ibpqbos 459023012 1569529807

ಉನ್ನತ ಶಿಕ್ಷಣದಲ್ಲಿ ಹಣಕಾಸಿನ ನಿರ್ವಹಣೆಗೆ ಅಂತಾರಾಷ್ಟ್ರೀಯ ಧನ ಸಹಾಯ ಏಜೆನ್ಸಿಗಳಿಂದ, ಖಾಸಗಿ ಉದ್ಯಮಗಳಿಂದ ಆರ್ಥಿಕ ನೆರವು ಪಡೆಯಬೇಕೆಂದು ನೇರವಾಗಿಯೇ ಶಿಫಾರಸ್ಸು ಮಾಡುತ್ತದೆ. ಈ ಮೂಲಕ ಶಿಕ್ಷಣದಲ್ಲಿ ಸರಕಾರವನ್ನು ಹಣಕಾಸಿನ ಜವಾಬ್ದಾರಿಯಿಂದ ಮುಕ್ತಗೊಳಿಸುತ್ತದೆ. ಇದು ನೇರವಾಗಿಯೆ ಖಾಸಗೀಕರಣಕ್ಕೆ ಬಾಗಿಲನ್ನು ತೆರೆಯುತ್ತದೆ. ಶುಲ್ಕ ಪಾವತಿಸಲು ವಿದ್ಯಾರ್ಥಿಗಳಿಗೆ ಸಾಲ ಬಂಡವಾಳವು ದೊರಕುವಂತೆ ಸರಕಾರ ಯೋಜನೆಯನ್ನು ರೂಪಿಸಬೇಕೆಂದು ಹೇಳುತ್ತದೆ. ಸ್ಕಾಲರ್‌ಶಿಪ್‌ನ್ನು ಪ್ರತಿಭಾವಂತರಿಗೆ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮಾತ್ರ ಕೊಡಬೇಕೆಂದು ಹೇಳುತ್ತದೆ. ಇದು ಸಹ ನೇರವಾಗಿ ಸಾಮಾಜಿಕ ನ್ಯಾಯದ ಆಶಯವನ್ನೇ ನಾಶ ಮಾಡುತ್ತದೆ. ಅಲ್ಲದೆ ಉನ್ನತ ಶಿಕ್ಷಣದಲ್ಲಿ ಪ್ರಾಧ್ಯಾಪಕರ ನೇಮಕಾತಿಗೆ ಮೀಸಲಾತಿಯು ವಿಭಾಗವಾರು ಮಟ್ಟದಲ್ಲಿರಬೇಕೆ ಅಥವಾ ವಿಶ್ವವಿದ್ಯಾಲಯವನ್ನು ಏಕವಾಗಿ ಪರಿಗಣಿಸಬೇಕೆ ಎನ್ನುವ ಪ್ರಶ್ನೆಗೆ ಈ ಶಿಕ್ಷಣ ನೀತಿಯಲ್ಲಿ ಎಲ್ಲಿಯೂ ಉತ್ತರವಿಲ್ಲ. ಒಟ್ಟಿನಲ್ಲಿ ಮೀಸಲಾತಿ ಕುರಿತಾಗಿ ನಿಗೂಢ ಮೌನವನ್ನು ತಾಳುತ್ತದೆ.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ಗಾಗಿ 2018ರಲ್ಲಿ ರಚನೆಯಾದ ಕಸ್ತೂರಿರಂಗನ್ ಸಮಿತಿಯು ಈ ‘ಜ್ಞಾನ ಆಯೋಗ’ದ ಶಿಫಾರಸ್ಸುಗಳನ್ನು ಬಳಸಿಕೊಂಡಿದೆ. ಇದನ್ನು ಆಧರಿಸಿ ‘ಎನ್‌ಇಪಿ 2020’ನ್ನು ಜಾರಿಗೊಳಿಸಲಾಯಿತು.

(ಮುಂದುವರೆಯುವುದು)

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

Download Eedina App Android / iOS

X