ಸಂವಿಧಾನ ಓದು ಅಭಿಯಾನ- ಕರ್ನಾಟಕ ಮತ್ತು ಕೋಲಾರ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ಕೋಲಾರ ಜಿಲ್ಲಾಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ಆಯೋಜಿಸಿದ್ದು, ಜುಲೈ 19, 20ರ ಶನಿವಾರ ಮತ್ತು ಭಾನುವಾರ ಎರಡು ದಿನ ನಗರದ ಇಟಿಸಿಎಂ ಸರ್ಕಲ್ ಪಕ್ಕದಲ್ಲಿರುವ ಸುವರ್ಣ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಂವಿಧಾನ ಓದು ಅಭಿಯಾನ-ಕರ್ನಾಟಕ ರಾಜ್ಯ ಕೇಂದ್ರ ಸಂಯೋಜಕ ಬಿ ರಾಜಶೇಖರಮೂರ್ತಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಶಿಬಿರವನ್ನು ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ಉದ್ಘಾಟಿಸಲಿದ್ದಾರೆ. ಕೋಲಾರ ಜಿಲ್ಲಾಧಿಕಾರಿ ಡಾ. ಎಂ ಆರ್ ರವಿ, ಜಿಪಂ ಸಿಇಒ ಡಾ. ಪ್ರವೀಣ್, ಪಿ ಬಾಗೇವಾಡಿ, ಎಸ್‌ಪಿ ನಿಖಿಲ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ ಎ ಮಂಜುನಾಥ, ಸಾಹಿತಿ ಡಾ.ಚಂದ್ರಶೇಖರ ನಂಗಲಿ, ರೈತ ಮುಖಂಡ ಪಿ ಆರ್ ಸೂರ್ಯನಾರಾಯಣ, ಶಾಂತಿ ಪ್ರಕಾಶನದ ಮುಬಾರಕ್ ಬಗ್ಗಾನ್, ಹಿರಿಯ ದಲಿತ ಮುಖಂಡ ಟಿ ವಿಜಯಕುಮಾರ್, ವಕೀಲ ಸತೀಶ್ ಕಾರ್ಯಕ್ರಮದಲ್ಲಿ ಭಾಗವಹಿಸುವರು” ಎಂದು ಹೇಳಿದರು.
“ಎರಡು ದಿನಗಳ ಕಾಲ ನಡೆಯಲಿರುವ ಸಂವಿಧಾನ ಓದು ಅಧ್ಯಯನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೊದಲನೆಯ ದಿನ ಸಂವಿಧಾನದ ರಚನೆ ಮತ್ತು ಮೂಲತತ್ವಗಳ ಕುಂತು ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್, ಸಂವಿಧಾನ ಮತ್ತು ಮಹಿಳೆ ಶಾಂತಿ ನಾಗಲಾಪುರ, ಸಂವಿಧಾನ ಮತ್ತು ಅಸ್ಪೃಶ್ಯತೆ: ನಿರ್ಮೂಲನೆ-ಡಾ. ಅರಿವು ಶಿವಪ್ಪ, ಎರಡನೇ ದಿನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಬಿ. ರಾಜಶೇಖರಮೂರ್ತಿ, ಸಂವಿಧಾನ ಮತ್ತು ಜಾತ್ಯತೀತತೆ – ಆರ್ ರಾಮಕೃಷ್ಣ ಗೋಷ್ಠಿ ನಡೆಸಿಕೊಡಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಪಟೇಲ್ ನಗರದ ಹತ್ತಿರ ಕಾಳಿ ನದಿಯಲ್ಲಿ ಜಿಂಕೆಯನ್ನು ಎಳೆದೊಯ್ದ ಮೊಸಳೆ
ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ : 2ನೇ ದಿನ ಮಧ್ಯಾಹ್ನ 1-30ಕ್ಕೆ ಸಮಾರೋಪ ಮತ್ತು ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಸಮಾರಂಭದ ಅತಿಥಿಗಳಾಗಿ ಹಿರಿಯ ದಲಿತ ಮುಖಂಡ ಪಂಡಿತ್ ಮುನಿವೆಂಕಟಪ್ಪ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಶಾಂತಮ್ಮ ಗಮನ, ರೈತ ಮುಖಂಡ ಅಜ್ಜಣಿ ಶಿವಪ್ಪ, ಬೆಳಕು ಸಂಸ್ಥೆಯ ರಾಧಾಮಣಿ, ಯುವ ಮುಖಂಡ ಆರಿಫ್ ಉಲ್ಲಾ ಖಾನ್ ಭಾಗವಹಿಸಲಿದ್ದಾರೆ.
ಸಂಯೋಜಕ ಎಚ್ ಎನ್ ಹರಿ, ಮುಖಂಡ ವಾರಿಧಿ ಮಂಜುನಾಥ ರೆಡ್ಡಿ, ಟಿ. ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಗಮನ ಶಾಂತಮ್ಮ, ವಕೀಲ ಎಸ್ ಸತೀಶ್, ಆರಿಫ್ ಉಲ್ಲಾ ಖಾನ್, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.